ಕರಾವಳಿ

ಬಿ.ಸಿ.ರೋಡ್‌: ಪವರ್ ಸ್ಟಾರ್ ಘಟಕದ ಪದಗ್ರಹಣ ಸಮಾರಂಭ

ಬಂಟ್ವಾಳ: ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ಜೇಸಿ ಬಿ.ಸಿ.ರೋಡ್ ಪವರ್ ಸ್ಟಾರ್ ಘಟಕದ ಪದಗ್ರಹಣ ಸಮಾರಂಭ ನಡೆಯಿತು. ಜೇಸಿ ಮಂಗಳೂರು ಇಂಪ್ಯಾಕ್ಟ್ ಪ್ರವರ್ತಿತ ಜೆಸಿಐ ಬಿಸಿರೋಡ್ ಪವರ್ ಸ್ಟಾರ್ ಗೆ ಸುಬ್ರಹ್ಮಣ್ಯ ಕೆ. ನೂತನ ಅಧ್ಯಕ್ಷರಾಗಿ, ಸುಧೀರ್ ಕುಮಾರ್ ಶೆಟ್ಟಿ ಕಾರ್ಯದರ್ಶಿಯಾಗಿ, ಮರೀಟಾ ಕ್ರಿಸ್ಟೀನ್ ಡಿ. ಜತೆಕಾರ್ಯದರ್ಶಿಯಾಗಿ, ಸುಭಾಶ್ ರೈ ಖಜಾಂಚಿಯಾಗಿ ಅಧಿಕಾರ ಸ್ವೀಕರಿಸಿದರು.

ಉಪಾಧ್ಯಕ್ಷರಾಗಿ ಮಹೇಶ್ ಶೆಟ್ಟಿ, ಅಶ್ರಫ್ ಎಂ.ಬಿ, ಸತೀಶ್ ಸಂಪಾಜೆ, ಸುನಿಲ್ ಮುಡ್ಡಾಜೆ ರಾಯಿ, ಸುರೇಶ್ ಮರೋಳಿ, ಪ್ರಥಮ ಮಹಿಳೆಯಾಗಿ ಪುನೀತಾ ಎಸ್, ಜ್ಯೂನಿಯರ್ ಜೇಸಿ ಅಧ್ಯಕ್ಷರಾಗಿ ಕನಿಷ್ಕ್ ಎಸ್. ರೈ, ನಿರ್ದೇಶಕರು ಮತ್ತು ಘಟಕದ ವಿವಿಧ ಜವಾಬ್ದಾರಿಗಳನ್ನು ಅರ್ಜುನ್ ಆಳ್ವ, ಅನುಪಮಾ ಎಸ್. ಕಡಬ, ರವಿರಾಜ್ ಶೆಟ್ಟಿ ಪಾಲ್ತಾಜೆ, ಸುಹಾಸ್ ಕೆ. ಕಲ್ಲಡ್ಕ, ದೀಪಕ್ ರೈ ದೇರಳಕಟ್ಟೆ, ರೋಹಿತ್ ರಾಯಿ, ನಾಗರಾಜ್ ಶೆಟ್ಟಿ ಮೊಡಂಕಾಪು, ಶರತ್ ಕಲ್ಲಡ್ಕ, ವಿದ್ಯಾ ಎಸ್. ರೈ, ಭವ್ಯಾ ಸುಧೀರ್ ಶೆಟ್ಟಿ, ಬೇಬಿ ಸತೀಶ್ ಅವರಿಗೆ ನಿಯೋಜಿಸಲಾಯಿತು.

ಬಿ.ಸಿ.ರೋಡ್‌ನ ವಕೀಲರಾದ ಕಾರ್ತಿಕ್ ಎಂ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವೈದ್ಯರಾದ ಡಾ.ಪ್ರದೀಪ್ ಕುಮಾರ್ ಶೆಟ್ಟಿ ಹಾಗೂ ಪೂರ್ವ ವಲಯಾಧ್ಯಕ್ಷರಾದ ರಾಕೇಶ್ ಕುಂಜೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ವಲಯ ಉಪಾಧ್ಯಕ್ಷ ದೀಪಕ್ ಗಂಗೂಲಿ ಗೌರವ ಅತಿಥಿಗಳಾಗಿದ್ದರು. ಜೆಸಿಐ ಮಂಗಳೂರು ಇಂಪ್ಯಾಕ್ಟ್ ಅಧ್ಯಕ್ಷರಾದ ಅನೀಶಾ ಗಂಗೂಲಿ, ಪ್ರಾಜೆಕ್ಟ್ ಡೈರೆಕ್ಟರ್ ಬಿ.ಡಿ.ದತ್ತಾತ್ತೇಯ, ಜೆಸಿಐ ಮಂಗಳೂರು ಇಂಪ್ಯಾಕ್ಟ್ ನಿಕಟಪೂರ್ವ ಅಧ್ಯಕ್ಷರಾದ ರವಿರಾಜ್ ಎ.ಪಿ. ಮತ್ತಿತರರು ಉಪಸ್ಥಿತರಿದ್ದರು. ರಾಷ್ಟ್ರೀಯ ತರಬೇತುದಾರ ಚೇತನಾ ದತ್ತಾತ್ರೇಯ ನಿರೂಪಿಸಿದರು.

Related posts

ಕೊರೋನಾ ಯಾವಾಗ ನಿಲ್ಲುತ್ತದೆ? ಕೋಡಿಮಠದ ಸ್ವಾಮೀಜಿ ಹೇಳಿದ್ರು ಇಂಟ್ರಸ್ಟಿಂಗ್‌ ಭವಿಷ್ಯ

ಉಬರಡ್ಕ: ಸ್ವಾತಂತ್ರ್ಯ ಸೇನಾನಿ ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ದ್ವಾರ ಉದ್ಘಾಟನೆ

ಬಂಟ್ವಾಳ: ಆಟೋ ರಿಕ್ಷಾ ಕಳವು! ಪ್ರಕರಣ ದಾಖಲು