ಕ್ರೈಂ

ಗುಳಿಗ ಕಟ್ಟೆಮುಂದೆ ಚಪ್ಪಲಿ ಧರಿಸಿ ತ್ರಿಶೂಲ ಹಿಡಿದು ನಿಂತ ಫೋಟೋ ಪ್ರಕಟಿಸಿದ ಯುವಕ..!

355
Spread the love

ಮಂಗಳೂರು: ಗುಳಿಗ ಕಟ್ಟೆ ಮುಂದೆ ಚಪ್ಪಲಿ ಧರಿಸಿ ತ್ರಿಶೂಲ ಹಿಡಿದು ನಿಂತ ಸ್ಟೇಟಸ್ ಹಾಕಿ ವಿಕೃತಿ ಮೆರೆದ ಯುವಕನನ್ನು ಮಂಗಳೂರಿನ ಕೊಣಾಜೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅಸೈಗೋಳಿಯ ಸಲೂನ್ ಒಂದರಲ್ಲಿ ಕ್ಷೌರಿಕನಾಗಿರುವ ಉತ್ತರ ಭಾರತ ಮೂಲದ ಯುವಕ ಎಂದು ಗುರುತಿಸಲಾಗಿದೆ. ಈತ ಕಟ್ಟೆಯ ಎದುರು ನಿಂತು ಚಪ್ಪಲಿ ಧರಿಸಿ ದೈವದ ತ್ರಿಶೂಲ ಹಿಡಿದು ನಿಂತು ಫೋಟೊ ತೆಗೆಸಿಕೊಂಡಿದ್ದು ತನ್ನ ಮೊಬೈಲ್‌ನಲ್ಲಿ ಸ್ಟೇಟಸ್ ಹಾಕಿದ್ದನೆನ್ನಲಾಗಿದೆ. ಸ್ಟೇಟಸ್ ಫೋಟೊ ವೈರಲ್ ಆಗಿದ್ದು  ಆತ ದೈವಕ್ಕೆ ಅಪಚಾರವೆಸಗಿದ್ದಾನೆ ಎಂಬ ಆರೋಪ ವ್ಯಕ್ತವಾಗಿದೆ.  ಈ ನಡುವೆ ಕೆಲವು ಸ್ಥಳೀಯ ಯುವಕರು ತಾವು ಹಿಂದು ಸಂಘಟನೆಯವರೆಂದು ಹೇಳಿ ದೈವ ನಿಂದನೆಯ ಸ್ಟೇಟಸ್ ಮುಂದಿಟ್ಟು  ಕ್ಷೌರಿಕ ಆಯಾನ್ ನನ್ನ ಹಣಕ್ಕಾಗಿ ಬ್ಲಾಕ್ ಮೇಲ್ ಮಾಡಿದ್ದಾರೆ ಎನ್ನುವ ಮಾಹಿತಿಗಳಿದ್ದು,ಈ ಬಗ್ಗೆಯೂ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

See also  4 ಲಕ್ಷ ರೂ.ಗೆ 7 ವರ್ಷದ ಬಾಲಕನ ಮಾರಾಟ..! ಬಾಲಕನ ತಂದೆ ಸೇರಿದಂತೆ ನಾಲ್ವರು ಅರೆಸ್ಟ್..!
  Ad Widget   Ad Widget   Ad Widget   Ad Widget   Ad Widget   Ad Widget