ಕರಾವಳಿಕ್ರೈಂ

ಮೂಡಿಗೆರೆಯಲ್ಲಿ ಬಂಟ್ವಾಳ ವ್ಯಕ್ತಿಯನ್ನು ಪೆಟ್ರೋಲ್‌ ಸುರಿದು ಬರ್ಬರ ಹತ್ಯೆ! ಗಾಂಜಾ ಪೆಡ್ಲರ್‌ಗಳ ಕೃತ್ಯ ಶಂಕೆ

265

ನ್ಯೂಸ್‌ ನಾಟೌಟ್‌: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ಬಂಟ್ವಾಳದ ವ್ಯಕ್ತಿಯೋರ್ವರನ್ನು ಪೆಟ್ರೋಲ್ ಸುರಿದು ಬರ್ಬರವಾಗಿ ಹತ್ಯೆಗೈದಿರುವ ಘಟನೆ ನಡೆದಿದೆ. ತಾಲೂಕಿನ ಇರಾ ಗ್ರಾಮದ ನಿವಾಸಿ ಅಬ್ಬಾಸ್ ಅವರ ಪುತ್ರ ಫವಾಜ್ ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಕೊಲೆಯ ಹಿಂದೆ ಗಾಂಜಾ ವಹಿವಾಟು ಇರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಫವಾಜ್ ಎಂಬಾತನನ್ನು ಆರೋಪಿಗಳು ಪೆಟ್ರೋಲ್ ಸುರಿದು ಕೊಲೆ ಮಾಡಿದ ಬಳಿಕ ಚಿಕ್ಕಮಗಳೂರು ಮೂಡಿಗೆರೆಯ ಬಣಕ್ಕಲ್ ಎಂಬಲ್ಲಿ ಗುಡ್ಡದಲ್ಲಿ ಬಿಸಾಡಿ ಹೋಗಿದ್ದಾರೆ ಎನ್ನಲಾಗುತ್ತಿದೆ. ಫಯಾಜ್ ಮದುವೆಯಾಗಿದ್ದು, ಬಳಿಕ ಪತ್ನಿಯಿಂದ ದೂರವಿದ್ದರು. ಈತ ಗಾಂಜ ಮಾರಾಟ ದಂಧೆಯಲ್ಲಿ ತೊಡಗಿದ್ದಲ್ಲದೆ, ಗಾಂಜಾ ವ್ಯಸನಿಯಾಗಿದ್ದ ಎಂದು ಹೇಳಲಾಗಿದೆ. ಒಳ್ಳೆಯ ಕುಟುಂಬದ ಯುವಕನಾಗಿದ್ದ ಈತನ ಕೆಟ್ಟ ಬುದ್ದಿಯಿಂದ ಬೇಸತ್ತ ಮನೆಯವರು ಈತನನ್ನು ಮನೆಯಿಂದ ಹೊರಹಾಕಿದ್ದರು ಎನ್ನಲಾಗಿದೆ.

ಗಾಂಜಾ ವಹಿವಾಟು ಜೋರಾಗಿ ನಡೆಸುತ್ತಿದ್ದ ಈತನಿಗೆ ಗಾಂಜಾ ಪೆಡ್ಲರ್ ಗಳ ಜತೆ ಅತಿಯಾದ ಸಂಪರ್ಕವಿತ್ತು ಎಂದು ಆರೋಪಿಸಲಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇವರೊಳಗೆ ಹಣಕಾಸಿನ ಅಥವಾ ಗಾಂಜಾ ವಿಚಾರದಲ್ಲಿ ವೈಮನಸ್ಸು ಉಂಟಾಗಿ ಈತನನ್ನು ಸುಮಾರು ಹತ್ತು ದಿನಗಳ ಹಿಂದೆ ಇರಾದಿಂದ ಕಿಡ್ನಾಪ್ ಮಾಡಿದ್ದರು. ಬಳಿಕ ಯಾವುದೋ ಅಜ್ಞಾತ ಸ್ಥಳದಲ್ಲಿ ಈತನನ್ನು ಕೂಡಿ ಇಟ್ಟು ಪೆಟ್ರೋಲ್ ಸುರಿದು ಕೊಲೆ ಮಾಡಲಾಗಿದೆ. ಕೊಲೆ ಮಾಡಿ ಬಣಕ್ಕಲ್ ಎಂಬಲ್ಲಿ ಗುಡ್ಡದಲ್ಲಿ ಬಿಸಾಡಿದ್ದಾರೆ. ವಗ್ಗ ಅಥವಾ ಕಾವಳಕಟ್ಟೆ ಮೂಲದ ಯುವಕರು ಈತನ ಕೊಲೆಯ ಹಿಂದೆ ಇರುವ ಆರೋಪಿಗಳು ಎಂಬ ಮಾಹಿತಿ ಪೊಲೀಸ್ ಇಲಾಖೆ ಲಭ್ಯವಾಗಿದೆ. ಸ್ನೇಹಿತ ಗಾಂಜಾ ವ್ಯಸನಿಗಳಿಗೆ ಈತನ ಕಿಡ್ನಾಪ್ ಬಗ್ಗೆ ಮಾಹಿತಿ ಇತ್ತು ಎನ್ನಲಾಗಿದ್ದು, ಸ್ನೇಹಿತರೇ ಈತನ ಕೊಲೆ ಮಾಡಿದ್ದಾರೆ ಎಂಬ ಸಂಶಯ ವ್ಯಕ್ತವಾಗಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

See also  ರಸ್ತೆಯಲ್ಲಿ ಹೋಗುವಾಗ ಅಡ್ಡ ಬಂದ ಬೆಕ್ಕನ್ನು ಪೆಟ್ರೋಲ್ ಸುರಿದು ಸುಟ್ಟು ಹಾಕಿದ ಮಹಿಳೆ..! ಅರಣ್ಯ ಇಲಾಖೆ ಮತ್ತು ಪೊಲೀಸರಿಂದ ಜಂಟಿ ತನಿಖೆ..!
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget