Latestಕ್ರೈಂದೇಶ-ವಿದೇಶವೈರಲ್ ನ್ಯೂಸ್

ರಸ್ತೆಯಲ್ಲಿ ಹೋಗುವಾಗ ಅಡ್ಡ ಬಂದ ಬೆಕ್ಕನ್ನು ಪೆಟ್ರೋಲ್ ಸುರಿದು ಸುಟ್ಟು ಹಾಕಿದ ಮಹಿಳೆ..! ಅರಣ್ಯ ಇಲಾಖೆ ಮತ್ತು ಪೊಲೀಸರಿಂದ ಜಂಟಿ ತನಿಖೆ..!

459
Representative image
Spread the love

ನ್ಯೂಸ್ ನಾಟೌಟ್: ಯಾವುದಾದರೂ ಕೆಲಸಕ್ಕೆ ಹೋಗುವಾಗ ದಾರಿಯಲ್ಲಿ ಬೆಕ್ಕು ಅಡ್ಡ ಬಂದರೆ ಅದನ್ನು ಹೆಚ್ಚಿನವರು ಅಶುಭವೆಂದು ಪರಿಗಣಿಸುತ್ತಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ಇಲ್ಲೊಬ್ಬಳು ಮಹಿಳೆ ದಾರಿಗೆ ಅಡ್ಡ ಬಂದ ಬೆಕ್ಕನ್ನೇ ಜೀವಂತವಾಗಿ ಸುಟ್ಟು ಹಾಕಿದ್ದಾಳೆ. ಆಕೆ ಬೈಕ್‌ ನಲ್ಲಿ ಸ್ನೇಹಿತರ ಜೊತೆ ಹೋಗುತ್ತಿರುವ ವೇಳೆ ಬೆಕ್ಕೊಂದು ಅಡ್ಡ ಬಂದಿದ್ದು, ಈ ಕೋಪಕ್ಕೆ ಬೆಕ್ಕನ್ನು ಹಿಡಿದು ಜೀವಂತವಾಗಿ ಸುಟ್ಟು ಹಾಕಿದ್ದಾಳೆ. ಈ ಸಂಬಂಧಿ ವಿಡಿಯೋವೊಂದು ವೈರಲ್‌ ಆದ ಬಳಿಕ ಪೊಲೀಸರು ಎಫ್‌.ಐ.ಆರ್‌ ದಾಖಲಿಸಿದ್ದಾರೆ.

ಈ ಅಮಾನವೀಯ ಕೃತ್ಯ ಉತ್ತರ ಪ್ರದೇಶದ ಮೊರಾದಾಬಾದ್‌ ನಲ್ಲಿ ನಡೆದಿದ್ದು, ಓರ್ವ ಮಹಿಳೆ ತನ್ನ ಸ್ನೇಹಿತರ ಜೊತೆ ಸೇರಿ ಬೆಕ್ಕನ್ನು ಜೀವಂತವಾಗಿ ಸುಟ್ಟು ಹಾಕಿದ್ದಾಳೆ. ಆಕೆ ಸ್ನೇಹಿತರ ಜೊತೆ ಹೋಗುತ್ತಿರುವ ದಾರಿಯಲ್ಲಿ ಬೆಕ್ಕು ಅಡ್ಡ ಬಂದಿದ್ದು, ಇದರಿಂದ ಕೋಪಗೊಂಡ ಈ ಸ್ನೇಹಿತರ ಗುಂಪು ಬೆಕ್ಕನ್ನು ಬೆನ್ನಟ್ಟಿ ಹಿಡಿದು, ಮೂಕ ಪ್ರಾಣಿಗೆ ಮನ ಬಂದಂತೆ ಥಳಿಸಿ ನಂತರ ಅದಕ್ಕೆ ಪೆಟ್ರೋಲ್‌ ಹಾಕಿ ಜೀವಂತವಾಗಿ ಸುಟ್ಟು ಹಾಕಿದ್ದಾರೆ.

ಇವರ ಈ ಅಮಾನವೀಯ ಕೃತ್ಯವನ್ನು ಯಾರೋ ವಿಡಿಯೋ ಮಾಡಿ ಸೋಷಿಯಲ್‌ ಮೀಡಿಯಾದಲ್ಲಿ ಹರಿ ಬಿಟ್ಟಿದ್ದು, ಈ ದೃಶ್ಯ ವೈರಲ್‌ ಆದ ತಕ್ಷಣ, ಪೊಲೀಸರು ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅರಣ್ಯ ಇಲಾಖೆ ಮತ್ತು ಪೊಲೀಸರ ಜಂಟಿ ತಂಡವು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಶೀಘ್ರದಲ್ಲೇ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

See also  ತುಳು ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಖ್ಯಾತ ಬಾಲಿವುಡ್ ನಟ, ರೂಪೇಶ್ ಶೆಟ್ಟಿ ಬಂದು ಕಥೆ ಹೇಳಿದಾಗ ಇಷ್ಟ ಆಯ್ತು ಎಂದ ನಟ
  Ad Widget   Ad Widget   Ad Widget   Ad Widget   Ad Widget   Ad Widget