ಕರಾವಳಿಕ್ರೈಂ

ಬಂಟ್ವಾಳ: ಹಾಡಹಗಲೇ ಬೈಕ್ ನಲ್ಲಿ ಬಂದು ಮಹಿಳೆಯ ಮಾಂಗಲ್ಯ ಸರ ಕದ್ದು ಎಸ್ಕೇಪ್, ಹಿಂಬದಿ ಸವಾರನ ಕೃತ್ಯಕ್ಕೆ ಬೆಚ್ಚಿ ಬಿದ್ದ ಜನ

ನ್ಯೂಸ್ ನಾಟೌಟ್: ಅಂಗಡಿಯಲ್ಲಿ ನಿಂತಿದ್ದ ಮಹಿಳೆಯ ಮಾಂಗಲ್ಯ ಸರವನ್ನು ಬೈಕ್ ನಲ್ಲಿ ಬಂದ ಅಪರಿಚಿತರು ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಬಂಟ್ವಾಳದಲ್ಲಿ ಡಿಸೆಂಬರ್ 14 ರಂದು ಗುರುವಾರ ನಡೆದಿದೆ.

ಇಲ್ಲಿನ ಮೂಡ ಗ್ರಾಮದ ಅಜ್ಜಿಬೆಟ್ಟು ಮೈದಾನ ಬಳಿ ಜನರಲ್ ಸ್ಟೋರ್ ಅಂಗಡಿಯಲ್ಲಿದ್ದಾಗ ದುರ್ಘಟನೆ ನಡೆದಿದ್ದು ಇಬ್ಬರು ಕಳ್ಳರು ಸ್ಥಳದಿಂದ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಸರೋಜನಿ (72 ವರ್ಷ) ಹಠಾತ್ ಘಟನೆಯಿಂದ ಶಾಕ್ ಗೆ ಒಳಗಾಗಿದ್ದಾರೆ. ಇದೀಗ ಅವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಅವರು ನೀಡಿದ ದೂರಿನ ಪ್ರಕಾರ ಕುತ್ತಿಗೆಯಲ್ಲಿದ್ದ 1.1/2 ಪವನ್ ತೂಕದ ಚಿನ್ನದ ಅಂದಾಜು ಬೆಲೆ 50,000/- ರೂ. ತಿಳಿದು ಬಂದಿದೆ. ಚಿನ್ನದ ಸರವನ್ನು ಎಳೆದುಕೊಂಡು ಹಿಂಬದಿ ಸವಾರ ಬೈಕ್ ಏರಿ ತಪ್ಪಿಸಿಕೊಂಡಿದ್ದಾನೆ ಎಂದು ತಿಳಿಸಲಾಗಿದೆ. ಬಂಟ್ವಾಳ ನಗರ ಠಾಣೆಯಲ್ಲಿ ಅ.ಕ್ರ 151/2023 ಕಲಂ: 392 ಜೊತೆ 34 ಐಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Related posts

ಪಾಕಿಸ್ತಾನದ ನೆರವಿನೊಂದಿಗೆ 12 ಭಾರತೀಯರನ್ನು ರಕ್ಷಿಸಿದ ಕರಾವಳಿ ಪಡೆ..! ಇರಾನ್‌ ನಿಂದ ಬರುತ್ತಿದ್ದ ಹಡಗು ಅರಬ್ಬಿ ಸಮುದ್ರದಲ್ಲಿ ಮುಳುಗಡೆ..!

ಬೀದಿ ಬದಿ ವ್ಯಾಪಾರಿ ಬಳಿ 6 ಟ್ರೇ ಮೊಟ್ಟೆ ಖರೀದಿಸಿ ಹಣ ಪಾವತಿಸದೇ ಪರಾರಿ..! ಮುಂದೇನಾಯ್ತು..? ವಿಡಿಯೋ ವೈರಲ್

ಮುಲ್ಕಿ: ರೈಲು ಡಿಕ್ಕಿ, ಮಹಿಳೆ ಗೆ ಗಂಭೀರ ಗಾಯ