ಬೆಂಗಳೂರುವೈರಲ್ ನ್ಯೂಸ್

‘ಒಳ್ಳೆಯ ಐಎಎಸ್ ಅಧಿಕಾರಿ ಜೊತೆ ಮದುವೆ ಮಾಡಿಸು’ ಎಂದು ದೇವಿಗೆ ಪತ್ರ ಬರೆದ ಹುಡುಗಿ..! ಬನಶಂಕರಿ ದೇವಿಗೆ ಬಂತು ವಿಚಿತ್ರ ಬೇಡಿಕೆಗಳ ಪತ್ರಗಳು..!

ನ್ಯೂಸ್ ನಾಟೌಟ್: ಬನಶಂಕರಿ ದೇವಾಲಯದಲ್ಲಿ (Banashankari Temple) ದೇವರ ಹುಂಡಿಗೆ ಹಣದ ಜೊತೆ ಕೋರಿಕೆ ಪತ್ರಗಳನ್ನ ಹಾಕುವ ರೂಢಿ ಇದೆ. ಹಲವು ವಿಚಿತ್ರ ಪತ್ರಗಳಲ್ಲಿ ಇದ್ದ ಕೋರಿಕೆ, ಬೇಡಿಕೆ, ಆಸೆಗಳನ್ನು ನೋಡಿ ದೇಗುಲದ ಸದಸ್ಯರು ಅಚ್ಚರಿಗೊಂಡಿದ್ದಾರೆ. ‘ನನ್ನ ತಾಯಿ ಮನೆಯಿಂದ ನನಗೆ ಬರಬೇಕಾಗಿರುವ ಆಸ್ತಿ ಯಾವುದೇ ಅಡ್ಡಿಯಿಲ್ಲದೇ ನನ್ನ ಕೈಸೇರಬೇಕು’ ಎಂದು ಒಬ್ಬರು ಬೇಡಿಕೊಂಡಿದ್ದಾರೆ.

“ಅಮ್ಮ ನಾನು ತಪ್ಪು ಮಾಡಿದೀನಿ ಕ್ಷಮಿಸಿ, ಹಿಂದೆ ಪತ್ರ ಬರೆದಾಗ ನಾನು ಗೋಪಿನಾಥ್ ಬಿಟ್ರೆ ಯಾರನ್ನೂ ಬೇರೆ ಯಾರನ್ನೂ ಮದುವೆಯಾಗದಂತೆ ಆಗದಂತೆ ಬಯಸಿದ್ದೆ. ಈಗ ಅವನು ನನಗೆ ಬೇಡ. ಆದಷ್ಟು ಬೇಗ ಮುಂದಿನ ವರ್ಷದಷ್ಟರಲ್ಲಿ ನನ್ನ ಮದುವೆ ಆಗುವಂತೆ ಮಾಡು. ಒಳ್ಳೆಯ ಹೆಸರು, ಕೀರ್ತಿ, ಹೃದಯವಂತ, ಗುಣವಂತ, ಸಿರಿವಂತ, ಐಶ್ವರ್ಯವಂತ ಹುಡುಗ ಆಗಿರಬೇಕು, ಯಾವ ಹೀರೋಗೂ ಕಡಿಮೆ ಇರಬಾರದು. ಅಷ್ಟು ಚೆನ್ನಾಗಿರೋ ಒಳ್ಳೆಯ ಐಎಎಸ್ ಅಧಿಕಾರಿ ಜೊತೆ ನನ್ನ ಮದುವೆ ಮಾಡಿಸು. ನನ್ನ ಗಂಡ ಬೇರೆ ಯಾವ ಹೆಂಗಸರನ್ನು, ಹುಡುಗಿಯರನ್ನು ಕೆಟ್ಟ ದೃಷ್ಟಿಯಿಂದ ನೋಡಬಾರದು, ನನ್ನನ್ನ ಹೆಚ್ಚಾಗಿ ಪ್ರೀತಿ ಮಾಡಬೇಕು. ನಾನಂದ್ರೆ ಅವರಿಗೆ ಜೀವ ಆಗಿರಬೇಕು. ನನಗೆ ಮಕ್ಕಳು, ಮೊಮ್ಮಕ್ಕಳ ಜೊತೆ ಜೀವನ ಮಾಡಬೇಕು ಇಷ್ಟು ವರ್ಷ ಕಾದಿದ್ದಕ್ಕೆ ಒಳ್ಳೆ ಹುಡುಗ ಸಿಕ್ಕಿದ ಅಂತ ಆಡಿಕೊಳ್ಳೋರ ಬಾಯಿ ಮುಚ್ಚಿಸಬೇಕು ಅಂತಾ ಹುಡುಗ ಕೊಡು’. ಎಂದು ಹುಡುಗಿಯೊಬ್ಬಳು ದೇವಿಯ ಹುಂಡಿಗೆ ಪತ್ರ ಹಾಕಿದ್ದಾಳೆ.

‘ರಮ್ಯ ಮತ್ತು ಉಮೇಶ್ ಇಬ್ಬರು ದೂರು ಆಗುವಂತೆ ಮಾಡು. ಇವರಿಂದ ಒಂದು ಸಂಸಾರ ದೂರ ಆಗಿದೆ. ಅವರ ತಪ್ಪಿಗೆ ಶಿಕ್ಷೆ ಕೊಡು ತಾಯಿ’, ಎಂದು ಇನ್ನೊಬ್ಬ ಭಕ್ತರು ಹಾಕಿದ ಕೋರಿಕೆಗಳನ್ನು ದೇಗುಲ ಮಂಡಳಿ ಸದಸ್ಯರು ನೋಡಿ ಅಚ್ಚರಿ ಪಟ್ಟಿದ್ದಾರೆ.

Click 👇

https://newsnotout.com/2024/05/baby-re-birth-issue-and-darga-story
https://newsnotout.com/2024/05/rameshwaram-cafe-case-food-department-raid

Related posts

ಇಂದು(ಎ.11) ಹೈವೋಲ್ಟೇಜ್ ಮ್ಯಾಚ್, ಮುಂಬೈ- ಆರ್ ​ಸಿಬಿ ಮುಖಾಮುಖಿ, ಟಾಸ್ ಗೆದ್ದ ಮುಂಬೈ

“ನಾನು ಹುಟ್ಟಿರೋದು ನನ್ನ ಅಪ್ಪ-ಅಮ್ಮನಿಗೆ, ಸನಾತನ ಧರ್ಮಕ್ಕೆ ಅಲ್ಲ” ನಟ ಪ್ರಕಾಶ್ ರಾಜ್..! ಉದಯನಿಧಿ ಸ್ಟಾಲಿನ್ ಸಮರ್ಥಿಸಿಕೊಂಡ ಪ್ರಕಾಶ್ ರಾಜ್, ಜಾಲತಾಣದಲ್ಲಿ ಪ್ರಕಾಶ್ ರಾಜ್ ಗೆ ಮತ್ತೆ ಟೀಕೆಗಳ ಸುರಿಮಳೆ

ಜಗತ್ತಿನ ಅತಿದೊಡ್ಡ ಚಿನ್ನದ ನಿಕ್ಷೇಪ ಚೀನಾದಲ್ಲಿ ಪತ್ತೆ..! ಈ ಬಗ್ಗೆ ಭೂಗರ್ಭಶಾಸ್ತ್ರಜ್ಞರು ಹೇಳಿದ್ದೇನು..?