Latestದೇಶ-ವಿದೇಶವಾಣಿಜ್ಯವೈರಲ್ ನ್ಯೂಸ್

ಬ್ಯಾಂಕ್ ಗಳ ರೆಪೋ ದರ ಶೇ.6ಕ್ಕೆ ಇಳಿಕೆ..! ಆರ್ ​​ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಮಾಹಿತಿ

731

ನ್ಯೂಸ್ ನಾಟೌಟ್: ನಿರೀಕ್ಷೆಯಂತೆ ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ರೆಪೋ ದರಗಳನ್ನು (RBI Repo Rate) 25 ಮೂಲಾಂಕಗಳಷ್ಟು ಕಡಿತಗೊಳಿಸಿದೆ. ಆರ್​​ಬಿಐ ಮಾನಿಟರಿ ಪಾಲಿಸಿ ಕಮಿಟಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

(ಎ.09) ಇಂದು ಬೆಳಗ್ಗೆ 10 ಗಂಟೆಗೆ ಸುದ್ದಿಗೋಷ್ಠಿ ನಡೆಸಿದ ಆರ್ ​​ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಕಮಿಟಿ ನಿರ್ಧಾರಗಳನ್ನು ಪ್ರಕಟಿಸುತ್ತಾ, ರೆಪೋ ದರವನ್ನು ಶೇ. 6.25ರಿಂದ ಶೇ 6ಕ್ಕೆ ಇಳಿಸಿರುವುದನ್ನು ತಿಳಿಸಿದ್ದಾರೆ.

ಆರ್ ​​ಬಿಐ ನಿಂದ ಇದು ಸತತ ಎರಡನೇ ರೆಪೋ ದರ ಇಳಿಕೆ ಆಗಿದೆ. ಫೆಬ್ರುವರಿಯಲ್ಲಿ ನಡೆದ ಎಂಪಿಸಿ ಸಭೆಯಲ್ಲೂ ಬಡ್ಡಿದರವನ್ನು ಇಳಿಸಲಾಗಿತ್ತು. ಈಗ ಮತ್ತೊಮ್ಮೆ ಕಡಿತಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ.

ರೆಪೋ ದರ ಎಂದರೆ ರೀಪರ್ಚೇಸ್ ಅಗ್ರೀಮೆಂಟ್ ರೇಟ್. ಇಲ್ಲಿ ಬ್ಯಾಂಕುಗಳಿಗೆ ಫಂಡಿಂಗ್ ಅವಶ್ಯಕತೆ ಬಿದ್ದಾಗ ಅವರು ಸರ್ಕಾರಿ ಬಾಂಡ್ ​​ಗಳನ್ನು ಆರ್.​​ಬಿ.ಐನಲ್ಲಿ ಅಡವಿಟ್ಟು ಸಾಲ ಪಡೆಯಬಹುದು. ಆದರೆ, ಅಡವಿಡಲಾದ ಬಾಂಡ್ ಅಥವಾ ಸೆಕ್ಯೂರಿಟಿಗಳನ್ನು ಪೂರ್ವ ನಿಗದಿತ ದರಕ್ಕೆ ಮರುಖರೀದಿ ಮಾಡಲಾಗುವುದೆಂದು ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ಅದಕ್ಕೆ ರೀಪರ್ಚೇಸ್ ಅಗ್ರೀಮೆಂಟ್ ರೇಟ್ ಎಂದು ಕರೆಯುವುದು. ಬ್ಯಾಂಕ್ ಗಳಿಗೆ ಹಣಕಾಸಿನ (ಸಾಲ) ನೆರವು ನೀಡುವಾಗ ರಿಸರ್ವ್ ಬ್ಯಾಂಕ್ ವಿಧಿಸುವ ಬಡ್ಡಿದರ ಕಡಿಮೆ ಆದರೆ, ಗ್ರಾಹಕರಿಗೆ ಬ್ಯಾಂಕ್ ಇನ್ನು ಮುಂದೆ ನೀಡುವ ಸಾಲಗಳ ಬಡ್ಡಿದರವೂ ಕಡಿಮೆಯಾಗುವ ಸಾಧ್ಯತೆಗಳಿರುತ್ತವೆ.

ಇನ್‌ ಸ್ಟಾಗ್ರಾಮ್ ನಲ್ಲಿ ಲವ್ ಆದವನ ಜೊತೆ ಎರಡನೇ ಮದುವೆಯಾದ ಮಹಿಳೆ.! ಮದುವೆಯ ವಿಡಿಯೋ ನೋಡಿ ಪತಿಗೆ ಶಾಕ್..!

ರೈಲ್ವೆ ಹಳಿ ಮೇಲೆ ಮಲಗಿ ರೀಲ್ಸ್ ಮಾಡಲು ಹೋದವ ಬದುಕಿದ್ದೇ ಪವಾಡ..! ಯುವಕ ಅರೆಸ್ಟ್, ಇಲ್ಲಿದೆ ವಿಡಿಯೋ

See also  ಹಡಗುಗಳನ್ನು ಉಡಾಯಿಸಬಲ್ಲ ಕ್ಷಿಪಣಿ ಪರೀಕ್ಷೆ ನಡೆಸಿದ ಭಾರತ..! ಇಲ್ಲಿದೆ ವಿಡಿಯೋ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget