Latestದೇಶ-ವಿದೇಶವಿಡಿಯೋವೈರಲ್ ನ್ಯೂಸ್

ಹಡಗುಗಳನ್ನು ಉಡಾಯಿಸಬಲ್ಲ ಕ್ಷಿಪಣಿ ಪರೀಕ್ಷೆ ನಡೆಸಿದ ಭಾರತ..! ಇಲ್ಲಿದೆ ವಿಡಿಯೋ

264

ನ್ಯೂಸ್ ನಾಟೌಟ್: ಪಹಲ್ಗಾಮ್ ಉಗ್ರರ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವಂತೆಯೇ, ಭಾರತೀಯ ನೌಕಾಪಡೆಯು ಅರಬ್ಬಿ ಸಮುದ್ರದಲ್ಲಿ ಶತ್ರು ರಾಷ್ಟ್ರಗಳ ಹಡಗುಗಳನ್ನು ಉಡಾಯಿಸಬಲ್ಲ ಕ್ಷಿಪಣಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದ್ದು, ಅದರ ದೀರ್ಘ-ಶ್ರೇಣಿಯ ನಿಖರ ದಾಳಿಯ ಸಾಮರ್ಥ್ಯವನ್ನು ಪ್ರದರ್ಶಿಸಿದೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಕ್ಷಿಪಣಿ ಪರೀಕ್ಷೆಯ ದೃಶ್ಯಗಳನ್ನು ಹಂಚಿಕೊಂಡಿರುವ ನೌಕಪಡೆ, ದೀರ್ಘ ಶ್ರೇಣಿಯ ನಿಖರ ಆಕ್ರಮಣಕ್ಕಾಗಿ ಬಹು ಹಂತದ ವಿರೋಧಿ ಹಡಗುಗಳನ್ನು ನಾಶಪಡಿಸಬಲ್ಲಾ ಕ್ಷಿಪಣಿ ಪರೀಕ್ಷೆ ಯಶಸ್ವಿಯಾಗಿದೆ ಎಂದು ತಿಳಿಸಿದೆ.

ಭಾರತೀಯ ನೌಕಾಪಡೆಯು ಯಾವುದೇ ಕ್ಷಣ, ಎಲ್ಲಿಯೇ ಆದರೂ ರಾಷ್ಟ್ರದ ಕಡಲ ಹಿತಾಸಕ್ತಿಗಳನ್ನು ಕಾಪಾಡುವಲ್ಲಿ, ಭವಿಷ್ಯಕ್ಕೆ ಸಿದ್ಧವಾಗಿದೆ ಎಂದು ಹೇಳಿದೆ.

ಯುದ್ಧ ನೌಕೆಗಳ ಸಮೂಹದಿಂದ ಬ್ರಹ್ಮೋಸ್ ವಿರೋಧಿ ಹಡುಗು ಮತ್ತು ಕ್ರೂಸ್ ಕ್ಷಿಪಣಿಗಳನ್ನು ಉಡಾವಣೆ ಮಾಡುವುದನ್ನು ದೃಶ್ಯಗಳು ತೋರಿಸಲಾಗಿದೆ. ಇದು ನೌಕಾಪಡೆಯ ಕಾರ್ಯಾಚರಣೆಯ ಪ್ರದರ್ಶನವಾಗಿದೆ.

26 ಜನರನ್ನು ಬಲಿತೆಗೆದುಕೊಂಡ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯ ನಡುವೆ ಈ ಕ್ಷಿಪಣಿ ದಾಳಿ ನಡೆದಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ತಂದೆಯ ಮೃತ ದೇಹವನ್ನು 2 ವರ್ಷಗಳ ಕಾಲ ಬಚ್ಚಿಟ್ಟಿದ್ದ ಮಗ..! ಆತನನ್ನು ಬಂಧಿಸಿದ ಪೊಲೀಸರು..!

ಭಾರತಕ್ಕೆ ಮೊದಲ ಬಾರಿಗೆ ವಿದೇಶದಿಂದ ಟೆಸ್ಲಾದ ಸೈಬೆರ್‌ ಟ್ರಕ್‌ ಕಾರು ಖರೀದಿಸಿ ತಂದ ಉದ್ಯಮಿ..! ಈ ಕಾರು ಭಾರತದಲ್ಲಿ ಇನ್ನೂ ಲಾಂಜ್​​ ಆಗಿಲ್ಲ..!

See also  ‘ಅಪ್ಪ ಹೊಡೆಯುತ್ತಾನೆ' ಪೊಲೀಸರಿಗೆ ಕರೆ ಮಾಡಿದ 7 ವರ್ಷದ ಮಗು! ಇದಕ್ಕೆ ಪೊಲೀಸ್ ಅಧಿಕಾರಿ ಹೇಳಿದ್ದೇನು?
  Ad Widget   Ad Widget   Ad Widget   Ad Widget