ಕರಾವಳಿ

ಬಂಗ್ಲೆಗುಡ್ಡೆಯಲ್ಲಿ ಹೊತ್ತಿಕೊಂಡ ಬೆಂಕಿ, ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ

ಚಿತ್ರ, ವರದಿ: ಶರತ್ ಕೀಲಾರು ಸಂಪಾಜೆ

ನ್ಯೂಸ್ ನಾಟೌಟ್: ಬೇಸಿಗೆ ಧಗೆ ಹೆಚ್ಚುತ್ತಿದ್ದಂತೆ ಇದೀಗ ಬೆಂಕಿ ಆಕಸ್ಮಿಕ ಪ್ರಕರಣಗಳು ಕೂಡ ಹೆಚ್ಚಾಗುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಬಂಗ್ಲೆಗುಡ್ಡೆ ಸಂಜೀವಿನಿ ಕಟ್ಟಡ ಬಳಿ ಆಕಸ್ಮಿಕ ಬೆಂಕಿ ಹತ್ತಿಕೊಂಡಿದೆ. ತಕ್ಷಣ ಸ್ಥಳಕ್ಕೆ ಬಂದ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ. ಕೆ. ಹಮೀದ್ ಗೂನಡ್ಕ, ಸದಸ್ಯರಾದ ಎಸ್. ಕೆ. ಹನೀಫ್, ರಜನಿ ಶರತ್, ಕೇಶವ ಬಂಗ್ಲೆಗುಡ್ಡೆ, ಸವಿನ ಮತ್ತಿತರರು ಬೆಂಕಿ ನಂದಿಸುವಲ್ಲಿ ಸಹಕಾರ ನೀಡಿದರು. ಅಗ್ನಿಶಾಮಕ ದಳದ ಸಿಬ್ಬಂದಿ ಊರಿನವರ ಸಹಕಾರದೊಂದಿಗೆ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.

Related posts

ಗ್ಯಾಸ್ ಸಿಲಿಂಡರ್ ಬೇಡ,2-3 ಪೀಸ್ ಸೌದೆ ,ಕರೆಂಟ್ ಚಾರ್ಜ್ ಇದ್ದರೆ ಸಾಕು ಅಡುಗೆ ರೆಡಿ

ಅಪಘಾತಕ್ಕೆ ಸಿಲುಕಿದ್ದ ಯುವಕನ ಪ್ರಾಣ ರಕ್ಷಿಸಿದ ಹಿಂದೂ ಕಾರ್ಯಕರ್ತ, ಅಪರಿಚಿತನ ಪ್ರಾಣ ರಕ್ಷಿಸಲು ಗೆಳೆಯರಿಂದ ಹಣ ಸಂಗ್ರಹಿಸಿದ ಯುವಕನಿಗೆ ಎಲ್ಲೆಡೆಯಿಂದ ಪ್ರಶಂಸೆ

ಭಾರೀ ಮಳೆಗೆ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ಸ್ನಾನಘಟ್ಟ ಮುಳುಗಡೆ..! ನದಿಗೆ ಇಳಿಯದಂತೆ ಭಕ್ತಾದಿಗಳಿಗೆ ಎಚ್ಚರಿಕೆ..!