Uncategorized

ಬಾಂಗ್ಲಾ ಪತ್ರಕರ್ತೆಯ ಮೃತದೇಹ ಕೆರೆಯಲ್ಲಿ ಪತ್ತೆ..! ಆ ನಿಗೂಢ ‘ಫೇಸ್ ಬುಕ್’ ಪೋಸ್ಟ್ ಗಳಲ್ಲೇನಿದೆ..?

ನ್ಯೂಸ್ ನಾಟೌಟ್: ಬಾಂಗ್ಲಾದೇಶದ ಪತ್ರಕರ್ತೆ ಸಾರಾ ರಹನುಮಾ ಎಂಬವರ ಮೃತದೇಹ ಬುಧವಾರ(ಆ.28) ಢಾಕಾದ ಹತಿರ್ಜೀಲ್ ಕೆರೆಯಲ್ಲಿ ಪತ್ತೆಯಾಗಿದೆ.
33 ವರ್ಷದ ಸಾರಾ ಬಂಗಾಳಿ ಭಾಷೆಯ ಮಾಧ್ಯಮವೊಂದರ ಎಡಿಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.

ಸಾಯುವ ಮೊದಲು ಸಾರಾ ತನ್ನ ಫೇಸ್‍ಬುಕ್ ಪ್ರೊಫೈಲ್‍ನಲ್ಲಿ ಎರಡು ನಿಗೂಢ ಪೋಸ್ಟ್ ಮಾಡಿದ್ದರು. ಮಂಗಳವಾರ ರಾತ್ರಿ 10:24ಕ್ಕೆ ಮಾಡಿದ ಮೊದಲ ಪೋಸ್ಟ್ ನಲ್ಲಿ ಸಾವಿಗೆ ಅನುಗುಣವಾದ ಜೀವನವನ್ನು ನಡೆಸುವುದಕ್ಕಿಂತ ಸಾಯುವುದು ಉತ್ತಮ' ಎಂದು ಬರೆದಿದ್ದರು.

ರಾತ್ರಿ 10:36ಕ್ಕೆ ಮಾಡಿದ್ದ ಎರಡನೇ ಪೋಸ್ಟ್ ನಲ್ಲಿ ಫಹೀಮ್ ಫೈಸಲ್ ಎಂಬವರನ್ನು ಕುರಿತು ನಿಮ್ಮಂತಹ ಸ್ನೇಹಿತನನ್ನು ಹೊಂದಲು ಸಂತೋಷವಾಗಿದೆ. ದೇವರು ನಿಮ್ಮನ್ನು ಯಾವಾಗಲೂ ಆಶೀರ್ವದಿಸುತ್ತಾನೆ. ನಾವು ಒಟ್ಟಿಗೆ ಸಾಕಷ್ಟು ಯೋಜನೆಗಳ ಕನಸು ಕಂಡಿದ್ದೆವು. ಕ್ಷಮಿಸಿ ನಮ್ಮ ಯೋಜನೆಗಳನ್ನು ಪೂರೈಸಲು ಆಗಲಿಲ್ಲ. ದೇವರು ನಿಮ್ಮನ್ನು ಆಶೀರ್ವದಿಸಲಿ’ ಎಂದು ಬರೆದಿದ್ದಾರೆ.

Click

https://newsnotout.com/2024/08/darshan-thugudeepa-shift-to-ballary-jail-kannada-news-fans/

Related posts

ಜಿಲ್ಲಾ ಮಟ್ಟದ ರಸ ಪ್ರಶ್ನೆ: ಸ್ನೇಹ ಶಾಲೆಯ ಸಂದೇಶ್ ಕೆ.ಆರ್ ಗೆ ದ್ವಿತೀಯ ಸ್ಥಾನ

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಶಂಕಿತನ ಮತ್ತಷ್ಟು ಫೋಟೋಗಳು ಬಿಡುಗಡೆ..! ತೀವ್ರ ಹುಡುಕಾಟದಲ್ಲಿ ಎನ್ಐಎ ಅಧಿಕಾರಿಗಳು..!

೫೦೦ರ ನೋಟು ತಂದ ಆಪತ್ತು- ಕೆಂಡಾಮಂಡಲನಾದ ಗಂಡ, ಪತ್ನಿಗೆ ಅಕ್ರಮ ಸಂಬಂಧದ ಕಥೆ ಕಟ್ಟಿ ಪತ್ನಿಯನ್ನೇ ಮುಗಿಸಿದ- ಮೂವರು ಮಕ್ಕಳ ಕೊಲೆಗೂ ಯತ್ನ