ಕರಾವಳಿಸುಳ್ಯ

ಬಾಳುಗೋಡು: ಎಚ್ಚರ ತಪ್ಪಿದ್ರೆ ಜೀವಕ್ಕೇ ಅಪಾಯ, ಜನ ಸಂಚಾರದ ವೇಳೆಯೇ ಸಂಭವಿಸಬಹುದು ದುರಂತ ..!

ನ್ಯೂಸ್ ನಾಟೌಟ್: ಮಳೆಗಾಲ ಬಂತೆಂದರೆ ಒಂದಲ್ಲ ಒಂದು ಅನಾಹುತ ಸೃಷ್ಟಿಯಾಗುತ್ತದೆ. ಇದೀಗ ಪದಕ ಬಾಳುಗೋಡು ಸಮೀಪದ ಹರಿಹರದಿಂದ ಮುಂದೆ ಇರುವ ಸೇತುವೆಯೊಂದು ಬಿರುಕು ಬಿಟ್ಟಿದೆ. ಯಾವ ಸಂದರ್ಭದಲ್ಲೂ ಇದು ಕುಸಿದು ಬೀಳುವ ಅಪಾಯ ಇರುವುದರಿಂದ ಸಂಬಂಧಪಟ್ಟವರು ಆದಷ್ಟು ಬೇಗ ಕ್ರಮವನ್ನು ತೆಗೆದುಕೊಳ್ಳಬೇಕು ಅನ್ನುವ ಒತ್ತಾಯ ಸಾರ್ವಜನಿಕರಿಂದ ಕೇಳಿ ಬಂದಿದೆ.


ಭೀಕರ ಮಳೆಗೆ ಪ್ರತಿ ವರ್ಷವೂ ಈ ಸೇತುವೆಗೆ ಮಳೆ ನೀರು ಹೊಡೆದು ಹಾನಿಯಾಗುತ್ತಿದೆ. ಸ್ವಲ್ಪ ಸ್ವಲ್ಪವೇ ಸೇತುವೆಗೆ ಹೊಡೆತ ಬಿದ್ದಿತ್ತು. ಈ ಬಗ್ಗೆ ಅಧಿಕಾರಿಗಳಿಗೆ ಹಾಗೂ ಸಂಬಂಧಪಟ್ಟವರ ಗಮನಕ್ಕೆ ತರಲಾಗಿತ್ತು. ಆದರೆ ಯಾರು ಕೂಡ ಗಮನ ನೀಡಿರಲಿಲ್ಲ ಎಂದು ಸ್ಥಳೀಯರು ದೂರುತ್ತಿದ್ದಾರೆ. ಒಂದು ವೇಳೆ ಇತ್ತ ಗಮನ ಕೊಡದಿದ್ದರೆ ವಾಹನ ಸಂಚಾರ ನಡೆಸುತ್ತಿರುವಾಗಲೇ ಜೀವಕ್ಕೆ ಹಾನಿಯಾಗಿ ಭಾರಿ ಅನಾಹುತ ಸಂಭವಿಸಬಹುದು. ಹೀಗಾಗಿ ತಕ್ಷಣ ಇದಕ್ಕೊಂದು ಪರಿಹಾರ ನೀಡಬೇಕೆಂದು ಸ್ಥಳೀಯರು ನ್ಯೂಸ್ ನಾಟೌಟ್ ಮೂಲಕ ಆಗ್ರಹಿಸಿದ್ದಾರೆ.

Related posts

ಸುಳ್ಯ. :ಕೆ.ವಿ.ಜಿ ಮೆಡಿಕಲ್ ಕಾಲೇಜು & ಆಸ್ಪತ್ರೆ ವತಿಯಿಂದ ‘ ಪ್ರವೇಗ ಆ್ಯನ್ವಲ್ ಸ್ಪೋರ್ಟ್ಸ್ ಮೀಟ್- 2023’;ವಿಜೇತರಿಗೆ ಮೆಡಲ್ ಮತ್ತು ಪ್ರಶಸ್ತಿ ವಿತರಣೆ

ಉಬರಡ್ಕ: ವಿಷ ಸೇವಿಸಿದ ಆಟೋ ಚಾಲಕ, ಸುಳ್ಯದ ಆಸ್ಪತ್ರೆಗೆ ದಾಖಲು

ರು. 25 ಲಕ್ಷಕ್ಕೆ ಖ್ಯಾತ ನಟಿಗೆ ಪತ್ನಿಯಾಗುವಂತೆ ಆಫರ್