Uncategorized

ಕೆಂಡ ಸೇವೆ ವೇಳೆ ಕೆಂಡದ ರಾಶಿಗೆ ಬಿದ್ದ ಅಯ್ಯಪ್ಪ ಮಾಲಾಧಾರಿ..!ಏನಿದು ಘಟನೆ?

ನ್ಯೂಸ್ ನಾಟೌಟ್ :ಅಯ್ಯಪ್ಪ ಮಾಲಾಧಾರಿಯೊಬ್ಬರು ಅಯ್ಯಪ್ಪ ಮಂದಿರದ ವಾರ್ಷಿಕೋತ್ಸವದ ಕೆಂಡ ಸೇವೆ ವೇಳೆ ಕೆಂಡಕ್ಕೆ ಬಿದ್ದು ಅವಘಡವೊಂದು ಸಂಭವಿಸಿರುವ ಘಟನೆ ವರದಿಯಾಗಿದೆ.ಕೆಂಡ ಸೇವೆ ವೇಳೆ ಬೆಂಕಿಗೆ ಬಿದ್ದು ಅಯ್ಯಪ್ಪ ಮಾಲಾಧಾರಿಯೊಬ್ಬರು ತೀವ್ರ ಗಾಯಗೊಂಡಿದ್ದಾರೆ. ಗಾಯಾಳು ಮಾಲಾಧಾರಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕರಾವಳಿಯಲ್ಲಿ ಸಾಂಪ್ರದಾಯಿಕವಾಗಿ ಅಯ್ಯಪ್ಪ ಮಾಲಾಧಾರಿಗಳ ಕೆಂಡ ಸೇವೆ ನಡೆಯುತ್ತಿರುತ್ತದೆ. ಅದರಂತೆ ಕೆಂಡ ಹಾಯುವ ವೇಳೆ ಅಯ್ಯಪ್ಪ ಮಾಲಾಧಾರಿ ಆಯತಪ್ಪಿ ಬೆಂಕಿಗೆ ಬಿದ್ದಿದ್ದಾರೆ.ಕೂಡಲೆ ಇತರೆ ಮಾಲಾಧಾರಿಗಳು ಇವರ ಸಹಾಯಕ್ಕೆ ಬಂದಿದ್ದಾರೆ.ಈ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದ್ದು,ಸದ್ಯ ಮಾಲಾಧಾರಿ ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.

Related posts

ಪತ್ನಿಯನ್ನು ಚಾಕುವಿನಿಂದ ಇರಿದು ಕೊಂದ ಪತಿ..!ಘಟನೆಗೆ ಕಾರಣವೇನು?

ವಕ್ಫ್ ವಿರುದ್ಧ ಹೋರಾಡುತ್ತಿರುವ ಬಿಜೆಪಿ ನಾಯಕ ಯತ್ನಾಳ್‌ ವಿರುದ್ಧ ಬಿಜೆಪಿ ಮುಖಂಡರಿಂದಲೇ ಪೊಲೀಸ್‌ ದೂರು..! ಏನಿದು ಆಂತರಿಕ ಸಂಘರ್ಷ..?

ಚಾರ್ಜ್ ಗೆ ಹಾಕಿದ್ದ ಎಲೆಕ್ಟ್ರಿಕ್ ಸ್ಕೂಟರ್ ಸ್ಫೋಟ; ಪ್ರಾಣಾಪಾಯದಿಂದ ಪಾರಾದ ಮನೆಯವರು