Uncategorized

ಅಯೋಧ್ಯೆ ರಾಮಲಲ್ಲಾ ಪ್ರತಿಷ್ಠಾಪನೆಗೆ ಕೋಲಾರ ಅರ್ಚಕನಿಗೆ ಆಹ್ವಾನ ನೀಡಿದ್ದೇಕೆ? ಕ್ಯಾಲಿಫೋರ್ನಿಯಾದ ದೇಗುಲದಲ್ಲಿ ಸೇವೆ ಸಲ್ಲಿಸುತ್ತಿದ್ದ ಈ ಅರ್ಚಕ ಯಾರು?

ನ್ಯೂಸ್ ನಾಟೌಟ್ : ಜನವರಿ 22ರಂದು ಅಯೋಧ್ಯೆ ರಾಮಮಂದಿರ (Ayodhya Ram Mandir) ಉದ್ಘಾಟನೆಗೊಳ್ಳಲಿದ್ದು, ಸಕಲ ಸಿದ್ಧತೆಗಳು ನಡೆಯುತ್ತಿದೆ. ಈ ನಡುವೆ ಪ್ರಮುಖರಿಗೆ ಆಹ್ವಾನ ಪತ್ರಿಕೆಗಳನ್ನು (Invitation) ಕೂಡ ಕಳುಹಿಸಲಾಗುತ್ತಿದೆ. ಈ ಆಮಂತ್ರಣ ಪತ್ರಿಕೆಯು ಇದೀಗ ಕೋಲಾರದ ಅರ್ಚಕರೊಬ್ಬರಿಗೆ ವಿಶೇಷವಾಗಿ ನೀಡಲಾಗಿದೆ.

ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಯಲ್ಲಿ ಭಾಗಿಯಾಗಲು ಕೋಲಾರ ಮೂಲದ ಅರ್ಚಕ ರಮೇಶ್ ಭಟ್ (Ramesh Bhat) ಎಂಬವರನ್ನು ಆಹ್ವಾನಿಸಲಾಗಿದ್ದು, ರಮೇಶ್ ಭಟ್ ಕೋಲಾರ (Kolar) ಜಿಲ್ಲೆಯ ಕಲ್ಲೂರು ಗ್ರಾಮದ ನಿವಾಸಿ ಎಂದು ತಿಳಿದುಬಂದಿದೆ.

ರಮೇಶ್ ಭಟ್ ಕೋಲಾರ ನಗರದ ಆರ್.ಎಲ್ ಜಾಲಪ್ಪ ಆಸ್ಪತ್ರೆ ಆವರಣದಲ್ಲಿನ ಗಣಪತಿ ದೇಗುಲದಲ್ಲಿ ಅರ್ಚಕರಾಗಿ 25 ವರ್ಷ ಸೇವೆ ಸಲ್ಲಿಸಿದ್ದಾರೆ. ಸದ್ಯ ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ಶಿವ-ವಿಷ್ಣು ದೇಗುಲದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎನ್ನಲಾಗಿದೆ.

ರಾಮಮಂದಿರ ಉದ್ಘಾಟನೆಯ ವೇಳೆ ಪರಿಚಾರಕ ಋತ್ವಿಕ್ ಆಗಿ ಭಾಗವಹಿಸಲು ರಾಮಮಂದಿರ ದೇವಾಲಯ ಪ್ರತಿಷ್ಠಾಪನಾ ಸಮಿತಿಯು ಆಹ್ವಾನಿಸಿದೆ ಎನ್ನಲಾಗಿದೆ.

Related posts

ಟೆಂಟ್ ಹಾಕಿಕೊಂಡು ಮಲಗಿದ್ದವರ ಮೇಲೆ ಏಕಾಏಕಿ ಕಾಡಾನೆ ದಾಳಿ:ಇಬ್ಬರಿಗೆ ಗಾಯ

ಕೊನೆಗೂ ಮದುವೆ ಬಗ್ಗೆ ಮೌನ ಮುರಿದ ಆ್ಯಂಕರ್ ಅನುಶ್ರೀ..!ತಮ್ಮ 35ನೇ ವಯಸ್ಸಿನಲ್ಲಿ ನಿರ್ಧಾರ ಪ್ರಕಟಿಸಿದ ಖ್ಯಾತ ನಿರೂಪಕಿ..!

ಡಿಸಿಎಂ ವೇದಿಕೆಗೆ ಬರುತ್ತಿದ್ದಂತೆ ‘ಜೈ ಶ್ರೀರಾಮ’ ಘೋಷಣೆ..!ಯುವಕರ ಗುಂಪಿಗೆ ಡಿಕೆಶಿ ಹೇಳಿದ್ದೇನು?