ನ್ಯೂಸ್ ನಾಟೌಟ್: ಅಯೋಧ್ಯೆ ರಾಮಮಂದಿರದಲ್ಲಿ ರಾಮನವಮಿ ಸಂಭ್ರಮ ಮನೆ ಮಾಡಿದೆ. ಈ ಶುಭ ಸಂದರ್ಭದಲ್ಲಿ ಬಾಲರಾಮನ ಹಣೆಯ ಮೇಲೆ ಸೂರ್ಯ ತಿಲಕ ಮೂಡಿದೆ.
ಸೂರ್ಯನ ಕಿರಣವು ನೇರವಾಗಿ ರಾಮಲಲ್ಲಾ ವಿಗ್ರಹದ ಹಣೆಯ ಮೇಲೆ ಬಿದ್ದ ದೃಶ್ಯ ಕಂಡುಬಂತು. ನಿಖರವಾಗಿ ಮಧ್ಯಾಹ್ನ12 ಗಂಟೆಗೆ ರಾಮಲಲ್ಲಾ ವಿಗ್ರಹದ ಹಣೆಯ ಮೇಲೆ ಬಿದ್ದ ಸೂರ್ಯನ ಕಿರಣ, ದಿವ್ಯ ತಿಲಕವನ್ನು ರೂಪಿಸಿತ್ತು. ಇದು ದೇಗುಲ ನಿರ್ಮಾಣದ ಕಲಾಕೃತಿ ಮತ್ತು ವಾಸ್ತುಶಿಲ್ಪದ ವಿಶೇಷತೆ.
ದೇಶಾದ್ಯಂತ ರಾಮನವಮಿಯನ್ನು ಅತ್ಯಂತ ವೈಭವದಿಂದ ಆಚರಿಸಲಾಗುತ್ತಿದೆ. ಇದು ವಿಷ್ಣುವಿನ ಏಳನೇ ಅವತಾರವಾದ ಭಗವಾನ್ ರಾಮನ ಜನ್ಮ ವಾರ್ಷಿಕೋತ್ಸವದ ದಿನ. ಜನರು ದೇವಾಲಯಗಳಿಗೆ ತೆರಳಿ ಶ್ರೀರಾಮನಿಗೆ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.
श्री राम नवमी के पावन पर्व पर प्रभु का सूर्यतिलक
Surya Tilak of Prabhu on the pious occasion of Shri Ram Navami pic.twitter.com/UCaweKHT7h
— Shri Ram Janmbhoomi Teerth Kshetra (@ShriRamTeerth) April 6, 2025
ಅಲ್ಲಲ್ಲಿ ಭಜನೆಗಳು, ಮೆರವಣಿಗೆಗಳು ಮತ್ತು ಜಪಗಳು ನಡೆಯುತ್ತಿವೆ. ದೃಕ್ ಪಂಚಾಂಗದ ಪ್ರಕಾರ, ಭಗವಾನ್ ರಾಮನು ಚೈತ್ರ ಮಾಸದ ಶುಕ್ಲ ಪಕ್ಷದ ನವಮಿ ತಿಥಿಯಂದು ಜನಿಸಿದ್ದ ಎನ್ನುವುದು ಪೌರಾಣಿಕ ಹಿನ್ನೆಲೆ.
ರೈಲ್ವೆಯಲ್ಲಿ 1000 ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನ, ಕೂಡಲೇ ಅರ್ಜಿ ಸಲ್ಲಿಸಿ, ಇಲ್ಲಿದೆ ಸಂಪೂರ್ಣ ಮಾಹಿತಿ