ನ್ಯೂಸ್ ನಾಟೌಟ್: ಸಂಪಾಜೆಯ ಚೌಕಿಯ ಸಮೀಪದಲ್ಲಿ ಭೀಕರ ಅಪಘಾತ ಇದೀಗ ಸಂಭವಿಸಿದೆ.
ಮಡಿಕೇರಿ ಕಡೆಯಿಂದ ಸುಳ್ಯದ ಕಡೆಗೆ ಪ್ರಯಾಣಿಸುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.
ರಾಷ್ಟ್ರೀಯ ಹೆದ್ದಾರಿಯಿಂದ ಗುಡ್ಡೆಗೆ ಹತ್ತಿ ಕಾರು ಮಗುಚಿಕೊಂಡಿದೆ. ಕಾರಿನಲ್ಲಿದ್ದ ಮೂವರಿಗೂ ಗಾಯವಾಗಿದ್ದು ಓರ್ವನಿಗೆ ತೀವ್ರ ಪೆಟ್ಟು ಬಿದ್ದಿದ್ದು ಸುಳ್ಯದ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ. ಮೂವರು ಕೂಡ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.