ನ್ಯೂಸ್ ನಾಟೌಟ್: ಆಯೋಧ್ಯೆಯಲ್ಲಿರುವ ರಾಮಲಲ್ಲಾನ ವಿಗ್ರಹ ಕೆತ್ತನೆ ಮಾಡಲು ಬಳಸಿದ ಶಿಲೆಯು ದೊರಕಿದ ಜಾಗ ಮೈಸೂರು ತಾಲೂಕಿನ ಹಾರೋಹಳ್ಳಿಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ಜ.22ರಂದು ಭೂಮಿಪೂಜೆ ನಡೆಯಲಿದೆ.
ರಾಮದಾಸ್ ಎಂಬವರ ಜಮೀನಿನಲ್ಲಿ ಬಾಲರಾಮನ ವಿಗ್ರಹಕ್ಕೆ ಬೇಕಾದ ಶಿಲೆ ದೊರಕಿತ್ತು. ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತನೆ ಮಾಡುವ ಮೂಲಕ ಈ ಜಾಗ ಪ್ರಸಿದ್ಧಿಗೆ ಬಂದಿದೆ. ವರ್ಷದ ಹಿಂದೆ ಬಾಲರಾಮನ ಪ್ರಾಣ ಪ್ರತಿಷ್ಠಾಪನ ಸಂದರ್ಭ ಶಿಲೆ ಸಿಕ್ಕ ಜಾಗದಲ್ಲಿ ಮಂದಿರ ನಿರ್ಮಾಣ ಎಂದು ಸಾರ್ವಜನಿಕರು, ರಾಜಕೀಯ ನಾಯಕರು ಭರಪೂರ ಆಶ್ವಾಸನೆ ನೀಡಿದ್ದರು.
ಕಳೆದ ವರ್ಷ ಜ. 22ರಂದು ಭೂಮಿಪೂಜೆ ಮಾಡಿದ್ದರಾದರೂ ದಿನ ಕಳೆದಂತೆ ಎಲ್ಲರೂ ಮರೆತೇ ಬಿಟ್ಟರು. ಆದರೆ ಜಮೀನಿನ ಮಾಲಕ ರಾಮದಾಸ್ ಶಿಲೆ ಸಿಕ್ಕ ಜಾಗದಲ್ಲಿ ಅಡಿಗಲ್ಲು ಹಾಕಿದ್ದ ಜಾಗಕ್ಕೆ ಪೂಜೆ ಸಲ್ಲಿಸುತ್ತಲೇ ಬಂದಿದ್ದಾರೆ. ಈಗ ಪುಟ್ಟದಾದ ಗುಡಿ ನಿರ್ಮಿಸಲು ಮುಂದಾಗಿದ್ದು ಜ. 22 2025ರಂದೇ ಭೂಮಿಪೂಜೆ ಮಾಡಲು ನಿರ್ಧರಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಜಿ.ಟಿ.ದೇವೇಗೌಡ, ರಾಮದಾಸ್ ಅವರೊಂದಿಗೆ ಪೂಜಾ ಕಾರ್ಯಕ್ರಮದ ಬಗ್ಗೆ ಮಾತನಾಡಿದ್ದಾರೆ.