ಬೆಂಗಳೂರು

‘ಪ್ರೀತಿಯೇ ಜೀವನ, ಆದ್ರೆ ಪ್ರೇಮಿ ಹೆಂಡತಿಯಲ್ಲ’ ಏನ್ ಗುರು ಇದು ಸಾಲು..! ಆಟೋ ರಿಕ್ಷಾದ ಹಿಂದೆ ಬರೆದ ಸಾಲು ವೈರಲ್

ನ್ಯೂಸ್ ನಾಟೌಟ್: ‘ಆಟೋ ರಿಕ್ಷಾ ಹಿಂದೆ ಬರೆದೋರು ತತ್ವ ಜ್ಞಾನಿ ಅಂತ ತಿಳಿಬೇಡ’ ಅನ್ನುವ ಸಿನಿಮಾದ ಹಾಡೊಂದು ಕಿವಿಯಲ್ಲಿ ಗುನುಗುತ್ತಿರುವಾಗಲೇ ಅವರು ಕೂಡ ತತ್ವಜ್ಞಾನಿಗಳು ಯಾಕಾಗಿರಬಾರದು ಎಂದು ಕೆಲವು ಸಲ ಅನಿಸೋಕೆ ಶುರುವಾಗುತ್ತದೆ. ಹೌದು, ಇಲ್ಲೊಂದು ಆಟೋದ ಹಿಂದೆ ಬರೆದಿರುವ ಸಾಲುಗಳನ್ನು ನೋಡಿದ್ರೆ ನಿಮಗೂ ಕೂಡ ಹಾಗೆ ಅನಿಸದೆ ಇರದು. ನಾವು ಪ್ರತಿನಿತ್ಯ ಟ್ರಾಫಿಕ್ ನಲ್ಲಿ ಸಿಕ್ಕಿಹಾಕಿಕೊಂಡು ಅಲ್ಲಿಲ್ಲಿ ನಿಂತು ಗಂಟೆಗಟ್ಟಲೆ ಕಾದು ಧೂಳು ತಿಂದು ಎದುರಿಗೆ ಕಣ್ ಹಾಯಿಸಿದಾಗ ಆಟೋ ಹಿಂದೆ ಬರೆದಿರುವ ಸಾಲುಗಳು ಮನಸ್ಸಿಗೆ ಅದೆಷ್ಟೋ ಸಲ ಮುದ ನೀಡಿದ್ದು ಇದೆ. ನಮ್ಮಷ್ಟಕ್ಕೆ ನಾವು ನಕ್ಕಿದ್ದೂ ಇದೆ. ಬೆಂಗಳೂರಿನ ಟ್ರಾಫಿಕ್ ನಲ್ಲಿ ಜೀವನ ಕಳೆದವರಿಗೆ ಇದು ಚೆನ್ನಾಗಿ ಗೊತ್ತಿರುತ್ತದೆ. ಅಂತೆಯೇ ಇಲ್ಲೊಂದು ಕ್ರಿಯೇಟಿವಿಟಿ ಇರುವ ಸಾಲುಗಳು ಎಲ್ಲರ ಗಮನ ಸೆಳೆದಿದೆ.

ಬೆಂಗಳೂರಿನ ಆಟೋ ರಿಕ್ಷಾವೊಂದರ ಹಿಂದೆ ಬರೆದಿರುವ ಸಾಲೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​​ ಆಗುತ್ತಿದೆ. ‘Love is life but lover is not wife’(ಪ್ರೀತಿಯೇ ಜೀವನ ಆದರೆ ಪ್ರೇಮಿ ಹೆಂಡತಿಯಲ್ಲ) ಎಂದು ರಿಕ್ಷಾ ಒಂದರ ಹಿಂದೆ ಬರೆದಿರುವ ಸಾಲುಗಳು ಸಾಕಷ್ಟು ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.

ರಿಷಿಕಾ ಗುಪ್ತಾ ಎಂಬ ಟ್ವಿಟರ್​​ ಬಳಕೆದಾರರು ಈ ಫೋಟೋ ಹಂಚಿಕೊಂಡಿದ್ದು, ಎಲ್ಲೆಡೆ ಭಾರೀ ವೈರಲ್​​ ಆಗಿದೆ. ಸಾಕಷ್ಟು ನೆಟ್ಟಿಗರು ನೆಟ್ಟಿಗರು ಹಾಸ್ಯಮಯವಾಗಿ ಫೋಟೋಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ರಿಕ್ಷಾ ಚಾಲಕನಿಗಿರುವ ಆ ವಿಶ್ವಾಸ ನನಗೆ ಬೇಕು’ ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.

Related posts

ಹನುಮಾನ್ ಚಾಲೀಸಾ ಹಾಕಿದವನ ಮೇಲಿನ ಹಲ್ಲೆ ಕೇಸ್‌ ಗೆ ಬಿಗ್ ಟ್ವಿಸ್ಟ್ ..! ಅಂಗಡಿ ಮಾಲೀಕನ ಮೇಲೆಯೇ ಎಫ್‌ ಐಆರ್‌..!

ನಕಲಿ ದಾಖಲಾತಿ ನೀಡಿ ಸಬ್‌ ಇನ್‌ ಸ್ಪೆಕ್ಟರ್‌ ಹುದ್ದೆ ಗಿಟ್ಟಿಸಿಕೊಂಡವನ ವಿರುದ್ಧ ಪ್ರಕರಣ ದಾಖಲು..! ಹೇಗಿತ್ತು ನಕಲಿ ದಾಖಲೆ ಸೃಷ್ಟಿಯ ಹಿಂದಿನ ಅಸಲಿ ಪ್ಲಾನ್..?

ಪ್ರಮಾಣವಚನಕ್ಕೆ ಗೈರಾಗಿದ್ದ ಹೆಚ್.​ಡಿ ದೇವೇಗೌಡಗೆ ಕರೆ ಮಾಡಿದ ಪ್ರಧಾನಿ ಮೋದಿ..! ಈ ಬಗ್ಗೆ ದೇವೇಗೌಡ್ರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡದ್ದೇನು..?