ಕ್ರೀಡೆ/ಸಿನಿಮಾವೈರಲ್ ನ್ಯೂಸ್

ಆಸ್ಟ್ರೇಲಿಯಾ ಎದುರು ಭಾರತದ ಸೋಲಿಗೆ ಮಾಜಿ ಸುಪ್ರೀಂ ಕೋರ್ಟ್ ನ್ಯಾಯಾಧೀಶ ನೀಡಿದ ವಿಚಿತ್ರ ಕಾರಣವೇನು? ಪಾಂಡವರಿಗೂ ವಿಶ್ವಕಪ್ ಗೂ ಏನು ಸಂಬಂಧ?

ನ್ಯೂಸ್ ನಾಟೌಟ್: ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾದ ವಿರುದ್ಧ ಭಾರತವು ಸೋತ ವಿಚಾರಕ್ಕೆ ಸಂಬಂಧಿಸಿದಂತೆ ಅನೇಕರೂ ನಾನಾ ಬಗೆಯ ವಿಶ್ಲೇಷಣೆ ಮಾಡಿದ್ದಾರೆ ಮತ್ತು ಮಾಡುತ್ತಿದ್ದಾರೆ. ಆದರೆ ಇಲ್ಲೊಬ್ಬ ಸುಪ್ರಿಂ ಕೋರ್ಟ್ ನ್ಯಾಯಾಧೀಶ ನೀಡಿದ ಕಾರಣದಿಂದ ಪೋಸ್ಟ್ ವೈರಲ್ ಆಗಿದೆ.

ಫೈನಲ್‌ವರೆಗೂ ಅಜೇಯವಾಗಿ ಸಾಗಿಬಂದಿದ್ದ ರೋಹಿತ್ ಶರ್ಮಾ ನೇತೃತ್ವದ ಭಾರತೀಯ ತಂಡ ಅಂತಿಮ ಪಂದ್ಯದಲ್ಲಿ ಸೋಲನ್ನಪ್ಪಲು ಕಳಪೆ ಬ್ಯಾಟಿಂಗ್‌ನಿಂದ ಹಿಡಿದು ಕ್ಷೇತ್ರರಕ್ಷಣೆಯಲ್ಲಿ ವೈಫಲ್ಯಗಳವರೆಗೂ ಕಾರಣಗಳು ಕೇಳಿಬರುತ್ತಲೇ ಇವೆ. ಆದರೆ ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ಮಾರ್ಕಂಡೇಯ ಕಾಟ್ಜು ಅತ್ಯಂತ ವಿಲಕ್ಷಣ ಕಾರಣವೊಂದನ್ನು ನೀಡಿದ್ದು, ಅದರಿಂದಾಗಿಯೇ ಅವರ ಪೋಸ್ಟ್ ವೈರಲ್ ಆಗಿದೆ. ಆಸ್ಟ್ರೇಲಿಯಾ ಪಾಂಡವರ ಕಾಲದಲ್ಲಿ ಭಾರತದ ಶಸ್ತ್ರಾಗಾರವಾಗಿತ್ತು ಮತ್ತು ಅದೇ ಕಾರಣದಿಂದ ಅದು ಪಂದ್ಯವನ್ನು ಗೆದ್ದಿದೆ ಎಂದು ನ್ಯಾ.ಕಾಟ್ಜು ಹೇಳಿದ್ದಾರೆ.
‘‘ಆಸ್ಟ್ರೇಲಿಯಾ ಪಾಂಡವರ ‘ಅಸ್ತ್ರಗಳ’ ದಾಸ್ತಾನು ಕೇಂದ್ರವಾಗಿತ್ತು. ಅದನ್ನು ‘ಅಸ್ತ್ರಾಲಯ’ ಎಂದು ಕರೆಯಲಾಗುತ್ತಿತ್ತು. ಅದು ವಿಶ್ವಕಪ್ ಗೆದ್ದಿರುವುದಕ್ಕೆ ಇದು ನಿಜವಾದ ಕಾರಣವಾಗಿದೆ’’ ಎಂದು ನ್ಯಾ.ಕಾಟ್ಜು ಎಕ್ಸ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ತನ್ನ ವಿಲಕ್ಷಣ ಸಿದ್ಧಾಂತಕ್ಕೆ ಯಾವುದೇ ಪುರಾವೆ ಅಥವಾ ಸಂದರ್ಭವನ್ನು ನ್ಯಾ.ಕಾಟ್ಜು ನೀಡಿಲ್ಲ. ಈ ವಿಲಕ್ಷಣ ಸಿದ್ಧಾಂತಕ್ಕೆ ನೆಟ್ಟಿಗರು ವ್ಯಂಗ್ಯವಾಡಿದ್ದಾರೆ.

Related posts

ಇಂದಿರಾ ಗಾಂಧಿಯಂತೆ ಮಮತಾ ಬ್ಯಾನರ್ಜಿಯನ್ನು ಕೊಲ್ಲಿ ಎಂದ 18ರ ಯುವತಿ..! ಪ್ರಚೋದನಕಾರಿ ಪೋಸ್ಟ್ ಹಾಕಿದ್ದಕ್ಕೆ ವಿದ್ಯಾರ್ಥಿನಿಯ ಬಂಧನ..!

ರಣಬೀರ್ ಮಾತ್ರ ಹಾಗೆ ಕರೆಯೋದು, ನನಗೆ ಇಷ್ಟವೇ ಆಗಲ್ಲ..!

ಚೈತ್ರಾ ಕುಂದಾಪುರ ಕೋಟಿ ಕೋಟಿ ವಂಚನೆ ಪ್ರಕರಣ: ಸಾಲುಮರದ ತಿಮ್ಮಕ್ಕನ ಸರ್ಕಾರಿ ಕಾರು ಬಳಸಿಕೊಂಡರಾ ಆರೋಪಿಗಳು? ಗೋವಿಂದಬಾಬು ಪೂಜಾರಿಗೆ ನೋಟಿಸ್‌ ನೀಡಿದ್ದೇಕೆ ಸಿಸಿಬಿ?