ಕ್ರೈಂದೇಶ-ಪ್ರಪಂಚ

60 ಮಂದಿಯಿಂದ ಏಕಾಏಕಿ ಪೊಲೀಸ್ ಠಾಣೆಯೊಳಗೆ ದಾಳಿ! ಸಹಚರರನ್ನು ಲಾಕ್‌ಅಪ್‌ನಿಂದ ಬಿಡಿಸಲು ಪ್ಲಾನ್! ಇಲ್ಲಿದೆ ಸಿಸಿಟಿವಿ ದೃಶ್ಯಾವಳಿ

ನ್ಯೂಸ್ ನಾಟೌಟ್ : ಮಧ್ಯಪ್ರದೇಶದ ಪೊಲೀಸ್ ಠಾಣೆಯೊಳಗೆ 60 ಕ್ಕೂ ಹೆಚ್ಚು ಜನರು ನುಗ್ಗಿ ಪೊಲೀಸರಿಗೆ ಹೊಡೆದು ಮೂವರು ಬಂಧಿತರನ್ನು ಬಿಡುಗಡೆ ಮಾಡಿದ ಘಟನೆ ಶುಕ್ರವಾರ ಮುಂಜಾನೆ 3 ಗಂಟೆಗೆ ಬುರ್ಹಾನ್‌ಪುರ ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ನಡೆದಿದೆ.

ದೊಣ್ಣೆಗಳನ್ನು ಹಿಡಿದಿದ್ದ ಜನರ ಸಮೂಹ ನೇಪಾನಗರ ಪೊಲೀಸ್ ಠಾಣೆಗೆ ನುಗ್ಗಿ, ಕರ್ತವ್ಯ ನಿರತ ಪೊಲೀಸರ ಮೇಲೆ ದಾಳಿ ಮಾಡಿ ಗಾಯಗೊಳಿಸಿತ್ತಲ್ಲದೆ ಹಲವಾರು ಪೊಲೀಸ್ ವಾಹನಗಳಿಗೆ ಹಾನಿ ಮಾಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಘಟನೆಯಲ್ಲಿ ಕರ್ತವ್ಯದಲ್ಲಿದ್ದ ನಾಲ್ವರು ಪೊಲೀಸರು ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹೇಮಾ ಮೇಘವಾಲ್ ಎಂಬ ಡಕಾಯಿತನನ್ನು ಹಿಡಿದು ಕೊಟ್ಟವರಿಗೆ ಪೊಲೀಸರು ರೂ 32,000 ಬಹುಮಾನ ಘೋಷಿಸಿದ್ದರು. ಆತನನ್ನು ಆ ನಂತರ ಪೊಲೀಸರೇ ಬಂಧಿಸಿದ್ದರು. ಈ ಗುಂಪು ದಾಳಿಯ ಮೂಲಕ ಮೂವರನ್ನು ಲಾಕ್-ಅಪ್‌ನಿಂದ ಬಿಡುಗಡೆ ಮಾಡಲಾಗಿದ್ದು, ಬಿಡುಗಡೆಯಾದ ಇತರ ಇಬ್ಬರು ವ್ಯಕ್ತಿಗಳು ಮೇಘವಾಲ್ ಅವರ ಸಹಚರರು ಎನ್ನಲಾಗಿದೆ.

ದಾಳಿಯ ಮಾಹಿತಿ ಪಡೆದ ಜಿಲ್ಲಾಧಿಕಾರಿ ಭವ್ಯಾ ಮಿತ್ತಲ್, ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದರು. ದಾಳಿಕೋರರನ್ನು ಗುರುತಿಸಲು ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಈ ಬಗ್ಗೆ ಪೊಲೀಸರೇ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.

Related posts

ಚುನಾವಣಾ ಫಲಿತಾಂಶ ನೋಡುತ್ತಲ್ಲೇ ಆಕ್ರೋಶಗೊಂಡು ಟಿ.ವಿ ಒಡೆದು ಹಾಕಿದ ರಾಷ್ಟ್ರೀಯ ಹಿಂದೂ ಪರಿಷತ್‌ ಅಧ್ಯಕ್ಷ..! ಇಲ್ಲಿದೆ ವೈರಲ್ ವಿಡಿಯೋ

ಮರ್ಕಂಜ: ಕಲ್ಲುಕೋರೆಯಿಂದ ಜಲ್ಲಿ ಸಾಗಾಟಕ್ಕೆ ಯತ್ನ, ಲಾರಿ ಸಹಿತ ಜಲ್ಲಿ ಲೋಡ್ ತಡೆ ಹಿಡಿದ ಸ್ಥಳೀಯರು, ಪೊಲೀಸರ ಆಗಮನ

ಕೇರಳದಲ್ಲಿ ಕದ್ದ ಚಿನ್ನವನ್ನು ಸುಳ್ಯದಲ್ಲಿ ಮಾರಾಟ ಮಾಡಿದ ಖತರ್ನಾಕ್ ಕಳ್ಳರ ಗ್ಯಾಂಗ್..? ಖಾಸಗಿ ಬಸ್ ನಿಲ್ದಾಣದ ಸಮೀಪ ಕೇರಳ ಪೊಲೀಸರಿಂದ 3 ಗಂಟೆ ವಿಚಾರಣೆ