ಪುತ್ತೂರು

‘ಅಶೋಕ ಜನ-ಮನ’ ಕಾರ್ಯಕ್ರಮ ಉದ್ಘಾಟಿಸಿದ ಡಿಸಿಎಂ ಡಿಕೆ ಬಾಸ್..!, ಪುತ್ತೂರಿನಲ್ಲಿ ಜನಜಾತ್ರೆ, 75 ಸಾವಿರ ಜನರಿಗೆ ಉಚಿತ ವಸ್ತ್ರವಿತರಣೆ

ನ್ಯೂಸ್ ನಾಟೌಟ್: ಪುತ್ತೂರಿನ ಜನಮೆಚ್ಚಿದ ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ‘ಅಶೋಕ ಜನ-ಮನ’ ಕಾರ್ಯಕ್ರಮಕ್ಕೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಶನಿವಾರ ಚಾಲನೆ ನೀಡಿದರು.

ಪುತ್ತೂರಿನ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ರೈ ಎಸ್ಟೇಟ್ಸ್ ಎಕ್ಯುಕೇಶನಲ್ ಟ್ರಸ್ಟ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಈ ಕಾರ್ಯಕ್ರಮ ನಡೆಯುತ್ತಿದೆ. ಒಟ್ಟು 75 ಸಾವಿರ ಜನರಿಗೆ ಉಚಿತ ವಸ್ತ್ರವಿತರಣೆ ಕಾರ್ಯಕ್ರಮ ನಡೆಯಲಿದೆ. ಈ ವೇಳೆ ಮಾತನಾಡಿದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ‘ಜನರಿಗೆ ಭ್ರಷ್ಟಾಚಾರ ರಹಿತ ಆಡಳಿತವನ್ನು ನೀಡುವ ಭರವಸೆಯನ್ನು ನಾವು ನೀಡಿದ್ದೆವು, ಗೆದ್ದ ಬಳಿಕ ನನ್ನ ಮಾತನ್ನು ಉಳಿಸಿಕೊಂಡಿದ್ದೇನೆ, ಬಡವರಿಗೆ 94c, ಅಕ್ರಮ -ಸಕ್ರಮ ಕೆಲಸಗಳನ್ನು ಮಾಡಿಕೊಟ್ಟಿದ್ದೇನೆ, ಸರ್ಕಾರದ ಎಲ್ಲ ಯೋಜನೆಗಳು ಪುತ್ತೂರಿಗೆ ತಲುಪುವಂತೆ ನೋಡಿಕೊಂಡಿದ್ದೇನೆ, ರಸ್ತೆಗಳನ್ನು ಮಾಡುವುದೇ ಒಬ್ಬ ಶಾಸಕನ ಕೆಲಸ ಆಗಬಾರದು, ರಸ್ತೆಗಳು ನಾವು ಇಲ್ಲದಿದ್ದರೂ ಅನುದಾನದ ಮೂಲಕ ನಡೆಯುತ್ತದೆ. ಆದರೆ ಪ್ರತಿ ಮನೆಗೆ ಕುಡಿಯುವ ನೀರನ್ನು ಹರಿಸುವ ಕೆಲಸಕ್ಕೆ ನಾವು ತಯಾರಿ ಮಾಡಿಕೊಂಡಿದ್ದೇವೆ, ಡಿಕೆ ಶಿವಕುಮಾರ್ ಸಹಕಾರ ನಮಗೆ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಅದನ್ನೂ ಪೂರೈಸುತ್ತೇನೆ’ ಎಂದು ತಿಳಿಸಿದರು. ಇದೇ ವೇಳೆ ಪುತ್ತೂರಿಗೆ ಮೆಡಿಕಲ್ ಕಾಲೇಜು ನೀಡಬೇಕೆಂದು ಹೃದಯಪೂರ್ವಕವಾಗಿ ಎಲ್ಲರೂ ಎದ್ದು ನಿಂತು ಉಪಮುಖ್ಯಮಂತ್ರಿಗಳಿಗೆ ಬೇಡಿಕೆ ಸಲ್ಲಿಸಿದ್ದು ವಿಶೇಷವಾಗಿತ್ತು.

Related posts

ಪುತ್ತೂರು: ಚಡ್ಡಿ ಗ್ಯಾಂಗ್ ಹಾಗೂ ತಲವಾರಿನ ಕಟ್ಟು ಕಥೆ ಕಟ್ಟಿದ ಮಹಿಳೆ, ಈಕೆಯ ಕಥೆಗೆ ಸ್ಥಳಕ್ಕೆ ಬಂದು ಸರಿಯಾಗಿಯೇ ನಿರ್ದೇಶನ ಮಾಡಿದ ಪೊಲೀಸರು..!

ಪುತ್ತೂರು: ಬೈಕ್, ಕಾರು ನಡುವೆ ಭೀಕರ ಅಪಘಾತ..! ಇಲ್ಲಿದೆ ಸಿಸಿಟಿವಿ ದೃಶ್ಯ

ಪುತ್ತೂರು: ಕೆಲಸದ ವೇಳೆ ಕಾರ್ಮಿಕನಿಗೆ ಅಸೌಖ್ಯ, ಚಿಕಿತ್ಸೆ ನೀಡದೆ ಪಿಕಪ್‌ನಲ್ಲಿ ವಾಪಾಸ್‌ ಕರೆತಂದು ರಸ್ತೆ ಬದಿ ಬಿಟ್ಟು ಹೋದ ಮೇಸ್ತ್ರಿ..!