ಕರಾವಳಿರಾಜಕೀಯಸುಳ್ಯ

ಅರಂತೋಡು: ಅಡ್ತಲೆ ವಾರ್ಡ್‌ನಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ , ಮಾಜಿ ಸಚಿವ ಎಸ್.ಅಂಗಾರರಿಗೆ ಸನ್ಮಾನ,ನೂತನ ಶಾಸಕಿ ಕು.ಭಾಗೀರಥಿ ಮುರಳ್ಯರಿಗೆ ಅಭಿನಂದನಾ ಕಾರ್ಯಕ್ರಮ

ನ್ಯೂಸ್ ನಾಟೌಟ್ : ನಾಗರಿಕ ಹಿತ ರಕ್ಷಣಾ ವೇದಿಕೆ ಅಡ್ತಲೆ ವಾರ್ಡ್‌ ವತಿಯಿಂದ ಅಭಿವೃದ್ಧಿ ಆಗಿರುವ ವಿವಿಧ ಕಾಮಗಾರಿಗಳ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು. ಮಾಜಿ ಶಾಸಕ ಹಾಗೂ ಸಚಿವ , ಎಸ್.ಅಂಗಾರ ಅವರು ಉದ್ಘಾಟಿಸಿದರು.

ಈ ವೇಳೆ ಎಸ್ .ಅಂಗಾರ ಅವರು ಅರಂತೋಡು,ಎಲಿಮಲೆ ರಸ್ತೆ, ಅಡ್ತಲೆ ಶಾಲಾ ಆವರಣದ ಮುಂದಿರುವ ಗೇಟನ್ನು ಉದ್ಘಾಟಿಸಿದರು.ಬಳಿಕ ಅಡ್ತಲೆಯ ಶಾಲಾ ಸಭಾಂಗಣದಲ್ಲಿ ಅಡ್ತಲೆಯ ವಿವಿಧ ಕಾಮಗಾರಿಗಳಿಗೆ ಅನುದಾನ ಒದಗಿಸಿದ ಅಂಗಾರವರಿಗೆ ನಾಗರಿಕ ಸನ್ಮಾನ ಮತ್ತು ಸುಳ್ಯ ವಿಧಾನಸಭಾ ಕ್ಷೇತ್ರದ ನೂತನ ಶಾಸಕಿ ಕು. ಭಾಗೀರಥಿ ಮುರಳ್ಯರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು.

ಈ ವೇಳೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಗರಿಕ ಹಿತರಕ್ಷಣಾ ವೇದಿಕೆ ಅಡ್ತಲೆ ಅಧ್ಯಕ್ಷ ಹರಿಪ್ರಸಾದ್ ಅಡ್ತಲೆ ವಹಿಸಿದರು . ಮುಖ್ಯ ಅತಿಥಿಯಾಗಿ ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ , ಅರಂತೋಡು ಗ್ರಾಮಪಂಚಾಯತ್ ಅಧ್ಯಕ್ಷೆ ಹರಿಣಿ ದೇರಾಜೆ , ಬಿಜೆಪಿ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ, ಅರಂತೋಡು ಪ್ರಾ.ಕೃ.ಪ. ಸಹಕಾರಿ ಸಂಘ ಅಧ್ಯಕ್ಷರು ಸಂತೋಷ್ ಕುತ್ತಮೊಟ್ಟೆ,ಅರಂತೋಡು ಗ್ರಾ.ಪಂ.ಸದಸ್ಯ ಕೇಶವ ಅಡ್ತಲೆ,ಅರಂತೋಡು ಗ್ರಾ.ಪಂ.ಉಪಾಧ್ಯಕ್ಷೆ ಶ್ವೇತ ಅರಮನೆಗಾಯ ,ಸುಜಯ ಲೋಹಿತ್ ಮೇಲಡ್ತಲೆ , ಸ್ಪಂದನ ಗೆಳೆಯರ ಬಳಗ (ರಿ) ಅಡ್ತಲೆ ಅಧ್ಯಕ್ಷ ವಿನಯ್ ಬೆದ್ರುಪಣೆ , ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಪಿಂಡಿಮನೆ , ನಾಗರಿಕ ಹಿತ ರಕ್ಷಣಾ ವೇದಿಕೆ ಸಮಸ್ತ ನಾಗರಿಕರು ಉಪಸ್ಥಿತರಿದ್ದರು.

Related posts

ತುಳುನಾಡಿನಲ್ಲಿ ಮಿತಿಮೀರಿದ ಡೀಸೆಲ್ ಕಳ್ಳರ ಹಾವಳಿ, ಟ್ಯಾಂಕರ್ ಚಾಲಕರೂ ಭಾಗಿಯಾಗಿರುವ ಬಲವಾದ ಸಂಶಯ..!

ಇಂದಿನಿಂದ ಹಾಲು, ಮೊಸರು ದರ ಹೆಚ್ಚಳ, ಎಷ್ಟು ರೇಟು ಏರಿದೆ? ಇಲ್ಲಿದೆ ಪಕ್ಕಾ ಲೆಕ್ಕ

ಪ್ರಧಾನಿ ಮೋದಿಗೆ ಹೂವಿನ ಹಾರ ಹಾಕಲೆತ್ನಿಸಿದ ಯುವಕ