ಕರಾವಳಿಸುಳ್ಯ

ಅರಂಬೂರು:ಖಾಸಗಿ ಬಸ್ಸಿಗೆ ಡಿಕ್ಕಿ ಹೊಡೆದ ಬೈಕ್..!ಗೂನಡ್ಕದ ಖಾಸಗಿ ಶಾಲೆಯೊಂದರ ಶಿಕ್ಷಕನಿಗೆ ಗಂಭೀರ ಗಾಯ

ನ್ಯೂಸ್‌ ನಾಟೌಟ್‌ : ಸುಳ್ಯದ ಅರಂಬೂರು ಸಮೀಪ ಪಾಲಡ್ಕದಲ್ಲಿ ಬಸ್ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದ್ದು ಬೈಕ್ ಸವಾರ ಗಂಭೀರ ಗಾಯಗೊಂಡಿರುವ ಘಟನೆ ಇದೀಗ ವರದಿಯಾಗಿತ್ತು.ಗಾಯಾಳುವನ್ನು ಗೂನಡ್ಕದ ಮಾರುತಿ ಇಂಟರ್‌ನ್ಯಾಶನಲ್ ಪಬ್ಲಿಕ್ ಸ್ಕೂಲ್‌ನ ಶಿಕ್ಷಕ ಪದ್ಮನಾಭ ಎಂದು ಗುರುತಿಸಲಾಗಿದೆ.

ಘಟನಾ ಸ್ಥಳಕ್ಕೆ ಆಂಬ್ಯುಲೆನ್ಸ್ ಆಗಮಿಸಿದ್ದು ಗಾಯಾಳುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ ಎಂದು ತಿಳಿದು ಬಂದಿದೆ. ಶಿಕ್ಷಕ ಪದ್ಮನಾಭ ಎಂಬವರು ಬೆಳಿಗ್ಗೆ ಗೂನಡ್ಕ ಕಡೆಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಈ ಅವಘಡವಾಗಿದೆ. ಮುಂಭಾಗದಿಂದ ತೆರಳುತ್ತಿದ್ದ ಖಾಸಗಿ ಬಸ್ ಗೆ ಹಿಂಬದಿಯಿಂದ ಬೈಕ್ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಬಳಿಕ ಗಾಯಾಳುವನ್ನು ಕೆವಿಜಿ ಅಂಬ್ಯುಲೆನ್ಸ್ ಮುಖಾಂತರ ಕೆವಿಜಿ ಆಸ್ಪತ್ರೆಗೆ ಸಾಗಿಸಲಾಯಿತು ಎಂಬ ಮಾಹಿತಿ ಲಭ್ಯವಾಗಿದೆ.

Related posts

ಬಿಸಿಯೂಟದ ಅಕ್ಕಿಯಲ್ಲಿ ತೇಲಾಡುತ್ತಿರುವ ಪ್ಲಾಸ್ಟಿಕ್ ಮಿಶ್ರಿತ ಅಕ್ಕಿ, ಮಣಿಗಳಂತೆ ಕಾಣುವ ಈ ಅಕ್ಕಿಯ ಊಟ ತಿಂದರೆ ಮಕ್ಕಳ ಗತಿ ಏನು?

ಕೇರಳದ ಭೂಕುಸಿತ ಉಲ್ಲೇಖಿಸಿ ಭಯಾನಕ ಭವಿಷ್ಯ ನುಡಿದ ಕೋಡಿಮಠದ ಸ್ವಾಮೀಜಿ..! ಅಮಾವಾಸ್ಯೆಯ ಬಳಿಕ ಎಲ್ಲವೂ ಬದಲಾಗುತ್ತಾ..?

ಡಬಲ್ ಎಂಜಿನ್ ಸರಕಾರಕ್ಕೆ ಬೆಂಬಲ ಕೊಡಿ, ಕಾಂಗ್ರೆಸ್ ಅನ್ನು ಮನೆಗೆ ಓಡಿಸಿ