ನ್ಯೂಸ್ ನಾಟೌಟ್: ಅರಂಬೂರಿನ ಪಾಲಡ್ಕದಲ್ಲಿ ಪಯಸ್ವಿನಿ ನದಿ ನೀರಿನಿಂದ ಉಂಟಾಗಿದ್ದ ನೆರೆ ಇದೀಗ ಸ್ವಲ್ಪ ಕಡಿಮೆಯಾಗಿದೆ ಎನ್ನುವ ಮಾಹಿತಿ ಲಭ್ಯವಾಗುತ್ತಿದೆ. ಹೀಗಾಗಿ ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರಕ್ಕೆ ಅವಕಾಶ ಸಿಗುವ ನಿರೀಕ್ಷೆ ಇದೆ. ನಿನ್ನೆ ತಡರಾತ್ರಿಯಿಂದ ಈ ರಸ್ತೆಯಲ್ಲಿ ಪಯಸ್ವಿನಿ ನೀರು ಉಕ್ಕಿ ಹರಿದುದ್ದರಿಂದ ರಸ್ತೆ ಸಂಚಾರ ಬಂದ್ ಆಗಿತ್ತು. ಭಾರಿ ಮಳೆಯಿಂದಾಗಿ ಪಯಸ್ವಿನಿ ನದಿ ಉಕ್ಕೇರಿದ್ದು ಪರಿಣಾಮ ನದಿ ತಟದಲ್ಲಿದ್ದ ಜನರು ಭಾರಿ ಸಂಕಷ್ಟಕ್ಕೆ ಸಿಲುಕಿದ್ದರು. ಅದರಲ್ಲೂ ಸಂಪಾಜೆ, ಕಲ್ಲುಗುಂಡಿ, ಕೊಯನಾಡು ಭಾಗದಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಸದ್ಯ ತಗ್ಗು ಪ್ರದೇಶದಲ್ಲಿರುವ ಮನೆಗಳ ಸದಸ್ಯರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
previous post
next post