ದೇಶ-ಪ್ರಪಂಚದೇಶ-ವಿದೇಶರಾಜಕೀಯವೈರಲ್ ನ್ಯೂಸ್

ಆಂಧ್ರದ ಉಪ ಮುಖ್ಯಮಂತ್ರಿ ಆಗಲಿದ್ದಾರಾ ಪವನ್ ಕಲ್ಯಾಣ್..? ನಾಳೆಯೇ(ಜೂ.12) ಪ್ರಮಾಣವಚನ..?

ನ್ಯೂಸ್ ನಾಟೌಟ್: ಆಂಧ್ರಪ್ರದೇಶದ ವಿಧಾನಸಭೆ, ಲೋಕಸಭೆಯಲ್ಲಿ ಸ್ಪರ್ಧಿಸಿದ ಎಲ್ಲಾ ಕ್ಷೇತ್ರಗಳಲ್ಲಿ ನಟ ಪವನ್ ಕಲ್ಯಾಣ್ ಜನಸೇನಾ ಪಕ್ಷ ಗೆದ್ದಿದೆ. ಹೀಗಾಗಿ ಪವನ್ ಕಲ್ಯಾಣ್ ಉಪ ಮುಖ್ಯಮಂತ್ರಿ ಸ್ಥಾನ ಪಡೆಯಲಿದ್ದಾರೆ ಎನ್ನಲಾಗಿದೆ. ಟಿಡಿಪಿ-ಬಿಜೆಪಿ ಜೊತೆಗೂಡಿ ಚುನಾವಣೆಗೆ ಸ್ಪರ್ಧಿಸಿದ್ದ ಜನಸೇನಾ ಶೇ.100ರಷ್ಟು ಯಶಸ್ಸನ್ನು ಕಂಡಿದೆ. ಈ ಹಿನ್ನೆಲೆ ಆಂಧ್ರದಲ್ಲಿ ಟಿಡಿಪಿ- ಜನಸೇನಾ ಸಮ್ಮಿಶ್ರ ಸರ್ಕಾರ ರಚನೆಯಾಗುತ್ತಿದೆ.

ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಮತ್ತೆ ಮುಖ್ಯಮಂತ್ರಿಯಾಗುತ್ತಿದ್ದು, ನಾಳೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಚಂದ್ರಬಾಬು ನಾಯ್ಡು ಸರ್ಕಾರದಲ್ಲಿ ಮಹತ್ವದ ಸ್ಥಾನವನ್ನು ಪವನ್​ ಕಲ್ಯಾಣ್​ ವಹಿಸಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಈಗ ಪವನ್​ ಕಲ್ಯಾಣ್​ ಉಪ ಮುಖ್ಯಮಂತ್ರಿಯಾಗಲಿದ್ದಾರೆ ಎನ್ನಲಾಗುತ್ತಿದೆ. ನಾಳೆ ನಾಯ್ಡು ಜೊತೆ ಪವರ್​ ಕಲ್ಯಾಣ್​ ಕೂಡ ಪ್ರಮಾಣವಚನ ಸ್ವೀಕರಿಲಿದ್ದಾರೆ ಎನ್ನಲಾಗುತ್ತಿದೆ. ಪವನ್​ ಕಲ್ಯಾಣ್ ಉಪ ಮುಖ್ಯಮಂತ್ರಿ ಸ್ಥಾನವನ್ನು ವಹಿಸಿಕೊಳ್ಳಲು ಆಸಕ್ತಿಯನ್ನು ವ್ಯಕ್ತಪಡಿಸಿದ್ದಾರಂತೆ ಎನ್ನಲಾಗಿದೆ.

Click 👇

https://newsnotout.com/2024/06/mangaluru-daiva-temple-kannada-news-n
https://newsnotout.com/2024/06/challenging-star-darshan-arrested-in-process
https://newsnotout.com/2024/06/bike-father-sister-and-son-conflict-kannada-news
https://newsnotout.com/2024/06/kannada-news-hd-devegowda-and-narendra-modi-call

Related posts

70ಕ್ಕೂ ಹೆಚ್ಚು ಉಗ್ರರನ್ನು ಇರಿಸಲಾಗಿದ್ದ ಕೇಂದ್ರ ಕಾರಾಗೃಹದ ಬಳಿ ಚೀನಾ ನಿರ್ಮಿತ ಡ್ರೋನ್ ಪತ್ತೆ..! ತಾಂತ್ರಿಕ ತಜ್ಞರಿಂದ ತನಿಖೆ..!

ಭಾರತ ಮಾತೆಯ ಫೋಟೋ ಅಶ್ಲೀಲವಾಗಿ ಎಡಿಟ್ ಮಾಡಿ ವಿಕೃತಿ..! ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹರಿಬಿಟ್ಟ ವ್ಯಕ್ತಿಯ ಬಂಧನ

ಗಣಪತಿ ತರಲು ಹೋದವರು ಮರಳಿ ಬರಲೇ ಇಲ್ಲ..! ಬೆಳ್ಳಂಬೆಳಗ್ಗೆ ಆಟೋದಲ್ಲಿ ತೆರಳಿದ್ದ 9 ಜನ ಯುವಕರು..!