ಸಾಧಕರ ವೇದಿಕೆ

ಅಮೆರಿಕದಲ್ಲಿ ಪೈಲಟ್ ಆದ ಗುಜರಾತ್‌ ನ ರೈತನ ಮಗಳು, ಮಗಳ ಕನಸಿಗಾಗಿ ಅಪ್ಪ ಮಾಡಿದ ತ್ಯಾಗ ಎಂತಹದ್ದು ಗೊತ್ತಾ?

266
Spread the love

ನ್ಯೂಯಾರ್ಕ್: ಗುಜರಾತಿನ ರೈತನ ಮಗಳು ಕೇವಲ 19 ನೇ ವಯಸ್ಸಿನಲ್ಲಿ ಅಮೆರಿಕದಲ್ಲಿ ಪೈಲಟ್ ಆಗಿ ಇತಿಹಾಸ ನಿರ್ಮಿಸಿದ್ದಾರೆ. ಹೆಸರು ಮೈತ್ರಿ ಪಟೇಲ್. ಶಾಲಾ ದಿನಗಳಲ್ಲಿ ವಿಮಾನ ನೋಡಿ ಮುಂದೊಂದು ದಿನ ನಾನೂ ಪೈಲಟ್ ಆಗಬೇಕು ಅನ್ನುವ ಕನಸು ಕಂಡಿದ್ದರು. ಇಂದು ಆ ಕನಸನ್ನು ಅವರು ನನಸು ಮಾಡಿಕೊಂಡಿದ್ದಾರೆ. 2018 ರಲ್ಲಿ ಮೈತ್ರಿ ಪೈಲಟ್ ತರಬೇತಿಗಾಗಿ ಅಮೆರಿಕಕ್ಕೆ ಹೋಗಿದ್ದರು. ಅಲ್ಲಿ ಅವರು 18  ತಿಂಗಳ ತರಬೇತಿ ಪೂರೈಸಿದ್ದರು. ಅಲ್ಲಿಯೇ ವಿಮಾನ ಓಡಿಸುವ ವಾಣಿಜ್ಯ ಪರವಾನಗಿ ಪಡೆದರು. ಮೈತ್ರಿ ಈಗ ಭಾರತದಲ್ಲಿ ವಿಮಾನ ಹಾರಿಸಲು ಬಯಸಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ಪರವಾನಗಿ ಪಡೆಯುವುದಕ್ಕೆ ಅವರು ಪ್ರಯತ್ನ ಪಡುತ್ತಿದ್ದಾರೆ.

ಮಗಳ ಕನಸಿಗಾಗಿ ಆಸ್ತಿಯನ್ನೇ ಮಾರಿದ ತಂದೆ

ಮಗಳನ್ನು ಪೈಲಟ್‌ ಮಾಡುವುದಕ್ಕಾಗಿ ಗುಜರಾತ್‌ ನ ರೈತ ಕಾಂತಿಭಾಯಿ ಪಟೇಲ್  ತಮ್ಮೆಲ್ಲ ಆಸೆಗಳನ್ನು ಕಟ್ಟಿಟ್ಟಿದ್ದರು. ದುಬಾರಿ ವೆಚ್ಚದ ತರಬೇತಿಗಾಗಿ ಹಣ ಹೊಂದಿಸುವುದಕ್ಕಾಗಿ ಎಲ್ಲ ಕಡೆಯೂ ಓಡಾಡಿದರು. ಆದರೆ ಅವರಿಗೆ ಎಲ್ಲಿಯೂ ಹಣವೇ ಸಿಗಲಿಲ್ಲ. ಕೊನೆಗೆ ಅವರು ಬೇರೆ ದಾರಿ ಇಲ್ಲದೆ ತಮ್ಮ ಜಮೀನನ್ನೇ ಮಾರಿ ಅಮೆರಿಕದಲ್ಲಿ ಮಗಳಿಗೆ ತರಬೇತಿ ಕೊಡಿಸಿದರು.

See also  ಅಪರಾಧ ಪ್ರಕರಣ ಭೇದಿಸಿದ ಸುಳ್ಯದ ಸರ್ಕಲ್ ಇನ್ಸ್‌ಪೆಕ್ಟರ್‌ , ಎಸ್‌ಐಗೆ ಗೃಹ ಸಚಿವರಿಂದ ಬೆಳ್ಳಿ ಪದಕ
  Ad Widget   Ad Widget   Ad Widget