ದೇಶ-ವಿದೇಶವೈರಲ್ ನ್ಯೂಸ್

ಅಮೆರಿಕದ ರಾಜ್ಯಗಳಲ್ಲಿ ಚಳಿಗೆ ತುರ್ತು ಪರಿಸ್ಥಿತಿ ಘೋಷಣೆ..! ದಶಕದಲ್ಲೇ ಅತಿಹೆಚ್ಚು ಹಿಮಪಾತ..!

ನ್ಯೂಸ್ ನಾಟೌಟ್ : ದಟ್ಟವಾದ ಹಿಮಪಾತ, ಮಂಜುಗಡ್ಡೆ, ಶೀತಗಾಳಿ ಹಾಗೂ ತಾಪಮಾನ ಗಣನೀಯವಾಗಿ ಕುಸಿದಿರುವ ಪರಿಣಾಮ ಕೇಂದ್ರ ಅಮೆರಿಕದ ಬಹುತೇಕ ಕಡೆಗಳಲ್ಲಿ ಅಪಾಯಕಾರಿ ಪ್ರಯಾಣ ಪರಿಸ್ಥಿತಿ ನಿರ್ಮಾಣವಾಗಿದೆ. ಶೀತಗಾಳಿಯಿಂದಾಗಿ ದಶಕದಲ್ಲೇ ಅತಿಹೆಚ್ಚು ಹಿಮಪಾತಕ್ಕೆ ಕಾರಣವಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

ಕಾನ್ಸಸ್, ಪಶ್ಚಿಮ ನೆಬ್ರಸ್ಕಾ ಮತ್ತು ಇಂಡಿಯಾನಾ ಪ್ರದೇಶದ ಎಲ್ಲ ಪ್ರಮುಖ ಹೆದ್ದಾರಿಗಳಲ್ಲಿ ದಟ್ಟವಾದ ಮಂಜು ಹಾಗೂ ಮಂಜುಗಡ್ಡೆಯ ಹೊದಿಕೆ ಕಂಡುಬರುತ್ತಿದೆ. ಸಂಚಾರದಲ್ಲಿ ಸಿಲುಕಿಕೊಳ್ಳುವ ವಾಹನ ಸವಾರರ ರಕ್ಷಣೆಗಾಗಿ ರಾಷ್ಟ್ರೀಯ ಪಡೆ ಕಾರ್ಯನಿರ್ವಹಿಸುತ್ತಿದೆ.

ಕಾನ್ಸಸ್ ಮತ್ತು ಮಿಸ್ಸೋರಿ ಭಾಗದಲ್ಲಿ ಕನಿಷ್ಠ 8 ಇಂಚು ಮಂಜುಗಡ್ಡೆಯ ಪದರ ನಿರ್ಮಾಣವಾಗುವ ಸಾಧ್ಯತೆಯನ್ನು ರಾಷ್ಟ್ರೀಯ ಹವಾಮಾನ ಸೇವೆಗಳ ವಿಭಾಗ ಅಂದಾಜಿಸಿದೆ. ಈ ಮೈಕೊರೆಯುವ ಚಳಿಯ ತೀವ್ರತೆ ಹೆಚ್ಚಲಿದ್ದು, 72 ಕಿ.ಮೀ ವೇಗದ ಶೀತಗಾಳಿ ಬೀಸುವ ನಿರೀಕ್ಷೆ ಇದೆ. ನ್ಯೂಜೆರ್ಸಿಯಲ್ಲಿ ಮಂಗಳವಾರವರೆಗೂ ಈ ಪರಿಸ್ಥಿತಿ ಮುಂದುವರಿಯಲಿದೆ ಎನ್ನಲಾಗಿದೆ.

Click

https://newsnotout.com/2025/01/instagram-love-by-16-and-10-year-old-childs-news-s/
https://newsnotout.com/2025/01/bengaluru-8-month-old-baby-got-influenced-by-hmpv-viral-bengaluru/

Related posts

ನಕ್ಸಲರ ಎನ್‌ ಕೌಂಟರ್ ವೇಳೆ ಪೊಲೀಸ್ ಸಿಬ್ಬಂದಿ ಸಾವು..! 4 ನಕ್ಸಲರ ಮೃತದೇಹಗಳನ್ನು ವಶಪಡಿಸಿಕೊಂಡ ಅಧಿಕಾರಿಗಳು..!

ರೇಣುಕಾಸ್ವಾಮಿ ಹತ್ಯೆ ಕೇಸ್‌ ನಲ್ಲಿ ಮೊದಲ ಜಾಮೀನು ಮಂಜೂರು..! ಇಲ್ಲಿದೆ ಸಂಪೂರ್ಣ ಮಾಹಿತಿ

ಬಸ್​ ಚಾಲಕನಿಗೆ ಎದೆ ನೋವು ಕಾಣಿಸಿಕೊಂಡು ಅಸ್ವಸ್ಥ..! ಚಲಿಸುತ್ತಿದ್ದ ಬಸ್ ಹತ್ತಿ ಸಿನಿಮೀಯ ರೀತಿಯಲ್ಲಿ ರಕ್ಷಿಸಿದ ಟ್ರಾಫಿಕ್​ ಪೊಲೀಸ್..!