ಕರಾವಳಿ

ಬೆಳ್ತಂಗಡಿ: ಆಂಬ್ಯುಲೆನ್ಸ್ ನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ!

ನ್ಯೂಸ್ ನಾಟೌಟ್: ಹೆರಿಗೆ ನೋವು ಕಾಣಿಸಿಕೊಂಡು 108 ಆಂಬ್ಯುಲೆನ್ಸ್ ಅಲ್ಲಿ ಹೋಗುತ್ತಿದ್ದ ವೇಳೆ ದಾರಿ ಮಧ್ಯೆಯೇ ಮಹಿಳೆಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ಬೆಳ್ತಂಗಡಿಯ ಪಡಂಗಡಿ ಎಂಬಲ್ಲಿ ಮಾರ್ಚ್ ೧೯ ರಂದು ನಡೆದಿದೆ.

ವೇಣೂರು ಸನಿಹದ ಗೋಳಿಯಂಗಡಿಯಾಲದ ನಿವಾಸಿ ಭಾಸ್ಕರ ಅವರ ಪತ್ನಿ ಗೀತಾ ಅವರಿಗೆ ತಡರಾತ್ರಿ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆಯೇ ಮಗುವಿಗೆ ಜನ್ಮ ನೀಡಿದ್ದಾರೆ.

ತುರ್ತು ಕರೆ ಆಧರಿಸಿ 108 ಆಂಬ್ಯುಲೆನ್ಸ್ ನಲ್ಲಿ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯೆಯೇ ಪಡಂಗಡಿ ತಲುಪುತ್ತಿದ್ದಂತೆ ತಡರಾತ್ರಿ 2.57 ರ ಹೊತ್ತಿಗೆ ಆಂಬ್ಯುಲೆನ್ಸ್ ವಾಹನದಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಾರೆ.

ನಾರಾವಿ ಕೇಂದ್ರದ ಆಂಬ್ಯುಲೆನ್ಸ್ ಇದಾಗಿದ್ದು ಆರೋಗ್ಯ ಶಶ್ರೂಷಕಿ ಪೂರ್ಣಿಮಾ ಮತ್ತು ವಾಹನ ಚಾಲಕ ಭೂದೇವಪ್ಪ ಈ ಸಂದರ್ಭದಲ್ಲಿ ಸಕಾಲಿಕ ನೆರವು ನೀಡಿದ್ದಾರೆ. ಪ್ರಾಧಮಿಕ ಚಿಕಿತ್ಸೆ ನೀಡಿದ ಬಳಿಕ ತಾಯಿ ಮಗು ಇಬ್ಬರನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತಾಯಿ ಮಗು ಇಬ್ಬರೂ ಕ್ಷೇಮವಾಗಿದ್ದಾರೆ ಎಂದು ವರದಿ ತಿಳಿಸಿದೆ.

Related posts

ಭಾರಿ ಮಳೆಯ ಅಬ್ಬರ, ರೆಡ್ ಅಲರ್ಟ್ ಹಿನ್ನೆಲೆ, ನಾಳೆ ( ಜು.9) ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಶಾಲಾ-ಕಾಲೇಜುಗಳಿಗೆ ರಜೆ

ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣ,ಶಂಕಿತ ಉಗ್ರ ಶಾರಿಕ್ ಗೆ ಜೀವಬೆದರಿಕೆ,ಜೈಲಿನಲ್ಲಿ ವಿಶೇಷ ಭದ್ರತೆ ವ್ಯವಸ್ಥೆ!

ತಾಯಿಗೆ ಪಿಂಡ ಪ್ರದಾನ ಮಾಡಲು ಹೋದ ಮಗ ಕೆರೆಗೆ ಬಿದ್ದು ದುರಂತ ಅಂತ್ಯ