ನ್ಯೂಸ್ ನಾಟೌಟ್: ಉದ್ಯಾನನಗರಿ ಬೆಂಗಳೂರಿನಲ್ಲಿ ನಡೆದ ಯೋಗ ಚಾಂಪಿಯನ್‌ಶಿಪ್‌ನಲ್ಲಿ ಅಮರ ಯೋಗ ಗುತ್ತಿಗಾರು ಕೇಂದ್ರದ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ.
ಆಚಾರ್ಯ ಯೋಗ ಯೂತ್ ಕ್ಲಬ್ (ರಿ) ಬೆಂಗಳೂರು ಜು.30ರಂದು ಶ್ರೀರಾಜೇಶ್ವರಿ ವಿದ್ಯಾ ಶಾಲಾ ಕೆಂಚೇನಹಳ್ಳಿಯಲ್ಲಿ ಯೋಗ ಕೂಟವನ್ನು ಆಯೋಜಿಸಿದ್ದರು. ಇದರಲ್ಲಿ ಪಾಲ್ಗೊಂಡಿದ್ದ ಗುತ್ತಿಗಾರಿನ ವಿದ್ಯಾರ್ಥಿಗಳಾದ ಹವ್ಯಾಸ್ ಕೆ.ಟಿ ಕೊರತ್ಯಡ್ಕ (9 ನೇ ಸ್ಥಾನ), ಗೌರಿತ. ಕೆ.ಜೆ (8ನೇ ಸ್ಥಾನ), ಕೆ. ಸಿ. ಮಣಿಪ್ರಕಾಶ್ ಕಡೋಡಿ (9ನೇ ಸ್ಥಾನ) ಆಕರ್ಷಕ ಪ್ರದರ್ಶನ ನೀಡಿದರು. ಉಳಿದಂತೆ “ಎ”ಗ್ರೇಡ್ ವಿಭಾಗದಲ್ಲಿ ಗೌರಿತ ಕೆ. ಜೆ, ಜಿಶಾ ಕೊರಂಬಡ್ಕ, ಹವ್ಯಾಸ್ ಕೊರೆತ್ಯಡ್ಕ, ಹರ್ಷಿಣಿ ಕೊರ್ತೆಡ್ಕ, ಮನ್ವಿಶ್ ಕೋಡೊಂಬು, ರಮಿಕ್ಷಾ ಮೀನಾಜೆ, ರೇಷ್ಮಾ ಮಾಡಬಾಕಿಲು, ನಿಹಾನಿ ವಾಲ್ತಾಜೆ, ಮಣಿಪ್ರಕಾಶ್ ಕಡೋಡಿ, ಹವೀಕ್ಷ ಯಸ್. ಆರ್. ಹನಿಕ್ಷ.ಕುಲಶೆಟ್ಟಿ ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳಿಗೆ ಯೋಗ ಶಿಕ್ಷಣ ಶಿಕ್ಷಕ ಶರತ್ ಮರ್ಗಿಲಡ್ಕ ತರಬೇತಿ ನೀಡಿದ್ದಾರೆ.