Uncategorized

ಪ್ರಶಸ್ತಿ ವಿಜೇತ ಶಿಕ್ಷಕಿಯಿಂದ ವಿದ್ಯಾರ್ಥಿ ಜತೆ ಸೆಕ್ಸ್..!

ನ್ಯೂಸ್ ನಾಟೌಟ್: 17 ವರ್ಷದ ವಿದ್ಯಾರ್ಥಿಯೊಂದಿಗೆ ಸಂಬಂಧ ಹೊಂದಿದ್ದ ಕಾರಣಕ್ಕೆ ಮಹಿಳಾ ಶಿಕ್ಷಕಿಯನ್ನು ಪೊಲೀಸರು ಬಂಧಿಸಿದ್ದಾರೆ. ಶಾಲೆಯಲ್ಲಿ ದೈಹಿಕ ಶಿಕ್ಷಕಿಯಾಗಿದ್ದ ಅವರು 17 ವರ್ಷದ ವಿದ್ಯಾರ್ಥಿಯ ಜೊತೆ ತಮ್ಮ ಕಚೇರಿಯಲ್ಲಿಯೇ ಸೆಕ್ಸ್‌ ನಡೆಸಿದ್ದರು ಎಂದು ಆರೋಪಿಸಲಾಗಿದೆ.

ವಿಶೇಷವೆಂದರೆ ಮಹಿಳಾ ಶಿಕ್ಷಕಿ ಸುಮಾರು 20 ವರ್ಷಗಳಿಂದ ಇದೇ ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡುತ್ತಿದ್ದರು. ಟೀಚರ್‌ ಆಫ್‌ ದ ಇಯರ್‌ ಪ್ರಶಸ್ತಿಯನ್ನೂ ಪಡೆದಿದ್ದರು. ಇದು ಅಮೆರಿಕದಲ್ಲಿ ನಡೆದಿರುವ ಪ್ರಕರಣವಾಗಿದೆ. ಆರೋಪಿ ಮಹಿಳಾ ಶಿಕ್ಷಕಿಯ ಹೆಸರು ಲಿಯಾ ಕ್ವೀನ್. ಆಕೆಗೆ ಈಗ 43 ವರ್ಷ. ಜೆಂಟ್ರಿ ಇಂಟರ್ ಮೀಡಿಯೇಟ್ ಶಾಲೆಯ ಶಿಕ್ಷಕಿಯಾಗಿರುವ ಲಿಯಾ ಅವರನ್ನು ಸೆಪ್ಟೆಂಬರ್ 15 ರಂದು ಬಂಧಿಸಲಾಯಿತು. ಅಕ್ರಮ ಪದಾರ್ಥಗಳನ್ನು ಸೇವಿಸಿದ ಆರೋಪವೂ ಅವರ ಮೇಲಿದೆ. ಅಚ್ಚರಿಯ ವಿಚಾರವೆಂದರೆ, ಈ ಪ್ರಕರಣ ನಡೆದು 12 ವರ್ಷಗಳಾಗಿವೆ. ಸುಮಾರು 40 ಲಕ್ಷ ರೂಪಾಯಿಗಳನ್ನು ಪಾವತಿಸಿದ ನಂತರ, ಲಿಯಾ ಕೂಡ ಸೆಪ್ಟೆಂಬರ್ 17 ರಂದು ಜಾಮೀನಿನ ಮೇಲೆ ಜೈಲಿನಿಂದ ಹೊರಬಂದರು. ಜೆಂಟ್ರಿ ಪೊಲೀಸ್ ಇಲಾಖೆಯ ಪ್ರಕಾರ, 2010 ರ ಘಟನೆಯ ಮೇಲೆ ಲೇಹ್ ಅವರನ್ನು ಬಂಧಿಸಲಾಯಿತು. ಆಗ ಈಕೆ 17 ವರ್ಷದ ವಿದ್ಯಾರ್ಥಿಯೊಂದಿಗೆ ಲೈಂಗಿಕ ಸಂಬಂಧ ಬೆಳೆಸಿದ್ದರು ಎನ್ನಲಾಗಿದ್ದು, ಇದೀಗ ಈ ವಿಷಯ ಬಹಿರಂಗವಾಗಿದೆ.

ಸಂತ್ರಸ್ತ ವಿದ್ಯಾರ್ಥಿಯ ಆರೋಪಕ್ಕೆ ಸಂಬಂಧಿಸಿದಂತೆ ಸಾಕಷ್ಟು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ವಿದ್ಯಾರ್ಥಿಯ ಪೋಷಕರು, ಮಾಜಿ ಶಿಕ್ಷಕನೂ ಆಗಿರುವ ಲಿಯಾಳ ಮಾಜಿ ಪತಿಯಿಂದ ಪೊಲೀಸರು ಈ ಸಾಕ್ಷ್ಯವನ್ನು ಸಂಗ್ರಹಿಸಿದ್ದಾರೆ. ವಿದ್ಯಾರ್ಥಿಯನ್ನು ತನ್ನ ಮನೆಗೆ ಆಹ್ವಾನಿಸಿದ ಆರೋಪವೂ ಲಿಯಾಳ ಮೇಲಿದೆ. ಲಿಯಾ ಇತರ ಹಲವಾರು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

Related posts

ಇಂದಿನಿಂದ ಬ್ಯಾಂಕ್ ಮುಷ್ಕರ: ಸೇವೆಯಲ್ಲಿ ವ್ಯತ್ಯಯ, ಗ್ರಾಹಕರ ಪರದಾಟ

ಬೇರೆಯವರ ಪತ್ನಿ ಮೇಲೆ ಕಣ್ಣು ಹಾಕಿದ ಯುವಕ,ಪತಿಗೆ ಪೋಟೋ ಕಳುಹಿಸಿಕೊಟ್ಟು ತನ್ನ ಸಾವಿಗೆ ತಾನೇ ಕಾರಣವಾದ

ಶಾಲಾ ಕಾಲೇಜಿನಲ್ಲಿ ಹಿಜಾಬ್ ಗೆ ಅವಕಾಶವಿಲ್ಲ: ಹೈಕೋರ್ಟ್