Uncategorized

ಈ ಮದ್ಯಪಾನಕ್ಕೆ ಹಣ ಹೂಡಿದ್ರೆ ಮುಂದಿನ ವರ್ಷ ನಿಮಗೆ ಕೈ ತುಂಬಾ ಕಾಸು..!

ನ್ಯೂಸ್ ನಾಟೌಟ್: ಕಂಠಪೂರ್ತಿ ಹೆಂಡ ಕುಡಿದು ಹೆಂಡತಿ ಮಕ್ಕಳಿಗೆ ಬಡಿದು ಬೀದಿ ಪಾಲು ಮಾಡಿದ ಅದೆಷ್ಟೋ ಗಂಡಸರು ನಮ್ಮ ಮುಂದಿದ್ದಾರೆ. ಹೀಗೆ ಬೀದಿ ಪಾಲಾದ ಹೆಂಗಸರು ಹಾಳು ಹೆಂಡಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಆದರೆ ಇದೀಗ ಗಂಡಸರು ಕುಡಿತಕ್ಕಿಂತ ಹೆಚ್ಚಾಗಿ ಈ ಮದ್ಯ (ಹೆಂಡ)ದ ಹಿಂದೆ ಬಿದ್ದಿದ್ದಾರೆ. ಅಚ್ಚರಿಯಾದರೂ ನೀವು ಇದನ್ನು ನಂಬಲೇಬೇಕು. ಇಂತಹದ್ದೊಂದು ಬ್ರ್ಯಾಂಡ್ ಕಂಪನಿ ನಮ್ಮ ಮುಂದೆ ಇದೀಗ ಬಂದಿದೆ.

ಯಾವುದು ಈ ಕಂಪನಿ?

ಹರಿಯಾಣದ ಹಿಸ್ಸಾರ್‌ನಲ್ಲಿ ಮುಖ್ಯ ಕಚೇರಿ ಹೊಂದಿರುವ ಗ್ಲೋಬಸ್ ಸ್ಪಿರಿಟ್ಸ್ ಮದ್ಯ ತಯಾರಕ ಕಂಪನಿಯೊಂದು ಭಾರಿ ಸುದ್ದಿಯಲ್ಲಿದೆ. ಕಾಳುಗಳ ಭಟ್ಟಿಯಿಂದ ತಯಾರಿಸುವ ಇನ್ಎ ಮದ್ಯದ ಉತ್ಪಾದನೆಯಲ್ಲಿ ಭಾರತದ ನಂಬರ್ ಒನ್ ಸಂಸ್ಥೆಯಾಗಿದ್ದು ಇನ್ ಎಂದರೆ ಎಕ್ಸ್‌ಟ್ರಾ ನ್ಯೂಟ್ರಲ್ ಅಸ್ಕೋಹಾಲ್. ಇದರ ಡಿಸ್ಟಿಲರಿ ಘಟಕಗಳಲ್ಲಿ 25 ಕೋಟಿ ಲೀಟರ್ ಇಎನ್ಎ ಆಲೋಹಾಲ್ ತಯಾರಿಸುವ ಸಾಮರ್ಥ್ಯ ಇದೆ. ಭಾರತದಲ್ಲಿ ಐಎಂಐಎಲ್ ಬ್ಯಾಂಡ್‌ನ ಮದ್ಯವನ್ನು ಸರಬರಾಜು ಮಾಡುತ್ತದೆ. ರಾಜಸ್ಥಾನದಲ್ಲಿ ಇದರ ಹೆಚ್ಚಿನ ಮಾರಾಟ ನಡೆಯುತ್ತದೆ.

ಷೇರುಪೇಟೆಯಲ್ಲಿ ಗ್ಲೋಬಸ್ ಸ್ಪಿರಿಟ್ಸ್‌ನ ಒಟ್ಟು ಬಂಡವಾಳ 2 ಸಾವಿರ ಕೋಟಿ ರೂಗಿಂತ ಹೆಚ್ಚು ಇದೆ. ಸೆಪ್ಟೆಂಬರ್ ಅಂತ್ಯದ ತ್ರೈಮಾಸಿಕದಲ್ಲಿ ಇದರ ನಿವ್ವಳ ಆದಾಯ 480 ಕೋಟಿ ರೂ ಇದೆ. ಬಡ್ಡಿ, ತೆರಿಗೆ, ಡಿಪ್ರಿಶಿಯೇಶನ್ (ಸವಕಳಿ) ಇತ್ಯಾದಿ ಕಳೆಯುವ ಮುಂಚಿನ ಗಳಿಕೆ ಕೂಡ ಹಿಂದಿನ ತ್ರೈಮಾಸಿಕಕ್ಕಿಂತ ಶೇ. 35ರಷ್ಟಿದೆ. ತೆರಿಗೆ ಮುಂದಿನ ಲಾಭ (ಪಿಎಟಿ) 22 ಕೋಟಿ ರೂ. ಇದೆ. ಈ ಕಂಪನಿಯ ಷೇರಿನ ಬಗ್ಗೆ ನಮಗೆ ಸಕಾರಾತ್ಮಕ ಅನಿಸಿಕೆ ಬಂದಿದ್ದು ಮುಂದಿನ 12 ತಿಂಗಳಲ್ಲಿ ಇದರ ಷೇರು ಬೆಲೆ 1000 ರೂ ಆಗಬಹುದು ಎಂದು ಅಂದಾಜಿಸಲಾಗಿದೆ. ಅಷ್ಟೇನೂ ಲಾಭ ತೋರಿಸದ ಕಂಪನಿಯ ಷೇರುಗಳ ಮೇಲೆ ಹೂಡಿಕೆ ಮಾಡುವುದರಲ್ಲಿ ಅರ್ಥ ಏನಿದೆ ಎನಿಸಬಹುದು. ಆದರೆ, ಕಂಪನಿಯ ಈಗಿನ ಸ್ಥಿತಿ ಹೇಗಿದೆ ಎನ್ನುವುದಕ್ಕಿಂತ ಅದರ ಭವಿಷ್ಯದ ದಾರಿ ಹೇಗಿದೆ ಎಂಬುದು ಮುಖ್ಯ. ಭಾರತೀಯ ಆಹಾರ ನಿಗಮದಿಂದ (ಎಫ್‌ಸಿಐ) ಹೆಚ್ಚಿನ ಬೆಲೆಗೆ ಅಕ್ಕಿಯನ್ನು ಖರೀದಿಯಾಗಿರುವುದು ಮತ್ತು ವಿವಿಧ ಉತ್ಪನ್ನಗಳ ಲಭ್ಯತೆ ಇವೆಲ್ಲವೂ ಗ್ಲೋಬಸ್ ಸ್ಪಿರಿಟ್ಸ್‌ನ ಆದಾಯ ಮತ್ತು ಲಾಭ ಹೆಚ್ಚಿಸಲಿವೆ. ಹಾಗೆಯೇ, ಭತ್ತದ ಹುಲ್ಲುಗಳನ್ನು ವಿದ್ಯುತ್ ಉತ್ಪಾದನೆಗೆ ಎಷ್ಟರಮಟ್ಟಿಗೆ ಬಳಲಾಗುತ್ತದೆ, ಕಲ್ಲಿದ್ದಲು ಎಷ್ಟು ಕಡಿಮೆ ಬೆಲೆಗೆ ಸಿಗುತ್ತದೆ ಇವು ಈ ಕಂಪನಿಯ ಆದಾಯ ಮತ್ತು ಲಾಭದ ಹಣೆಬರಹ ಬರೆಯಬಹುದು ಎಂಬುದು ಐಸಿಸಿಐ ಡೈರೆಕ್ಟ್‌ನ ಹೂಡಿಕೆ ತಜ್ಞರ ಅಭಿಪ್ರಾಯ.

Related posts

ಮಹಾರಾಷ್ಟ್ರ ಕಿರಿಕ್ ಮಾಡಿದ್ರೆ ಈ ಹಳ್ಳಿಗಳೆಲ್ಲ ಕರ್ನಾಟಕದ ಪಾಲು..!

ಭಾರತದ 5 ನಗರಗಳಿಗೆ ಭೂಕಂಪ ಅಪ್ಪಳಿಸುವ ಸಾಧ್ಯತೆ, ಟರ್ಕಿ ಮಾದರಿಯಲ್ಲೇ ಭೂಕಂಪದ ಆತಂಕ

ಸೈನಿಕರ ಮಕ್ಕಳಿಗೆ ಉಚಿತ ಕಂಪ್ಯೂಟರ್ ಶಿಕ್ಷಣ