ನ್ಯೂಸ್ ನಾಟೌಟ್: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಯಶಸ್ವಿಯಾಗಿ ನಡೆಯಬೇಕೆಂದರೆ ಆರ್ಥಿಕ ಶಿಸ್ತು ಅತ್ಯಗತ್ಯ. ಅಂತಹ ಶಿಸ್ತನ್ನು ರೂಢಿಸಿಕೊಂಡು ಸದಸ್ಯರ, ರೈತರ ವಿಶ್ವಾಸಕ್ಕೆ ಪಾತ್ರವಾಗಿರುವ ಸಂಸ್ಥೆಗಳಲ್ಲಿ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅಗ್ರಸ್ಥಾನ ಸಲ್ಲುತ್ತದೆ. ಈ ಸಂಸ್ಥೆ ಇಷ್ಟೊಂದು ಎತ್ತರಕ್ಕೆ ಬೆಳೆದದ್ದು ಹೇಗೆ ಅನ್ನುವುದರ ಬಗೆಗಿನ ನ್ಯೂಸ್ ನಾಟೌಟ್ ಗ್ರೌಂಡ್ ರಿಪೋರ್ಟ್ ಇಲ್ಲಿದೆ ಓದಿ.
ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಜನಮೆಚ್ಚಿದ್ದು ಹೇಗೆ ಅನ್ನುವುದು ನಿಮ್ಮೆಲ್ಲರ ಪ್ರಶ್ನೆ ಇರಬಹುದು. ಈ ಸಂಸ್ಥೆ ಇಷ್ಟೊಂದು ಎತ್ತರಕ್ಕೆ ಬೆಳೆಯಲು ಹಿಂದಿರುವ ಕಾರಣ ನಿಮಗೆ ಅಚ್ಚರಿ ತರುತ್ತದೆ. ಜನರ ನಂಬಿಕೆ, ವಿಶ್ವಸಾರ್ಹತೆಗೆ ಪಾತ್ರವಾಗಿರುವ ಸಂಸ್ಥೆಯು 91.39 ಕೋಟಿ ರೂ. ಠೇವಣಿ ಹೊಂದಿದೆ. ಅಷ್ಟು ಮಾತ್ರವಲ್ಲ ಒಟ್ಟಾರೆ 553.28 ಕೋಟಿ ರೂ. ವಾರ್ಷಿಕ ವ್ಯವಹಾರವನ್ನು ಹೊಂದಿದೆ. ದೊಡ್ಡ ಮಟ್ಟದ ವ್ಯವಹಾರವನ್ನು ಅದು ಹೊಂದಿದೆ. ಪ್ರಸಕ್ತ ವರ್ಷದಲ್ಲಿ ಒಟ್ಟು 6260 ಮಂದಿ ಸದಸ್ಯರನ್ನು ಹೊಂದಿದೆ. ಸಾಲ ವಸೂಲಾತಿ ಶೇ.98.56ರಷ್ಟಿದ್ದು 2023-24ರಲ್ಲಿ 2 ಕೋಟಿ ರೂವಿಗೂ ಅಧಿಕ ಲಾಭವನ್ನು ಸಂಘ ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಎಲ್ಲರೂ ಈ ಸಂಘದ ಬೆಳವಣಿಗೆಯನ್ನು ತಿರುಗಿ ನೋಡುವಂತಾಗಿದೆ. ಸಂಘದ ಪ್ರತಿಯೊಬ್ಬರ ಸಹಕಾರದಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ಹಾಲಿ ಅಧ್ಯಕ್ಷರಾದ ಧರ್ಮಪಾಲ ರಾವ್ ಕೆ. ಹಾಗೂ ಉಪಾಧ್ಯಕ್ಷರಾದ ಪ್ರದೀಪ್ ರೈ ಎಂ. ಅವರು ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.
ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವ್ಯಾಪ್ತಿಯಲ್ಲಿರುವ ರೈತರು ಅದೃಷ್ಟವಂತರು ಅಂತ ಹೇಳಬಹುದು. ಈ ಸಂಸ್ಥೆ ರೈತರಿಗಾಗಿ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ. ಕ್ಯಾಂಪ್ಕೋ ಸಂಸ್ಥೆ ಜೊತೆಗೂಡಿ ರಬ್ಬರ್, ಕಾಳುಮೆಣಸು ಹಾಗೂ ಕೊಕ್ಕೊವನ್ನು ಮಾರಾಟ ಮಾಡುವ ಕೆಲಸಕ್ಕೆ ಕೈ ಹಾಕಲಾಗಿದೆ. ರೈತರು ಬೆಳೆದ ಬೆಳೆಗೆ ಯೋಗ್ಯ ಬೆಲೆ ದೊರಕಿಸಿಕೊಡುವ ನಿಟ್ಟಿನಲ್ಲಿ ದಾಸ್ತಾನು ಮಳಿಗೆ ನಿರ್ಮಿಸಲಾಗಿದೆ. ಇದರ ಉಪಯೋಗವನ್ನು ಪಡೆದುಕೊಳ್ಳುತ್ತಿದ್ದು ರೈತರ ಮುಖದಲ್ಲಿ ಖುಷಿ ಕಾಣಿಸುತ್ತಿದೆ.
ಸಂಘದಿಂದ ಎಲ್ಲ ತರದ ಕೃಷಿ, ಕೃಷಿ ಅಭಿವೃದ್ಧಿ ಸಾಲ, ಕೃಷಿಯೇತರ ಸಾಲ, ಚಿನ್ನಾಭರಣ ಈಡಿನ ಸಾಲ, ಉತ್ಪತ್ತಿ ಈಡಿನ ಸಾಲವನ್ನು ನೀಡಲಾಗುತ್ತಿದೆ. ಅಲ್ಲದೆ ರೈತರಿಗೆ ಬೇಕಾದ ಹಾಗೂ ರಾಸಾಯಾನಿಕ ಗೊಬ್ಬರ, ಕ್ರಿಮಿ ಕೀಟನಾಶಕ, ಕೃಷಿ ಉಪಕರಣ ಇತ್ಯಾದಿಗಳನ್ನು ಒದಗಿಸುತ್ತಿದೆ. ಗ್ರಾಹಕರಿಗೆ ಅಗ್ಗದ ದರದಲ್ಲಿ ದಿನಸಿ ಮಾರಾಟ ವಿಭಾಗವನ್ನು , ಕೊಂಕಣ್ ಗ್ಯಾಸ್ ಸೌಲಭ್ಯವನ್ನು ನೀಡಲಾಗುತ್ತಿದೆ. ರೈತರ ಅನುಕೂಲಕ್ಕಾಗಿ ಸರಕು ಸಾಗಾಟ ವಾಹನವನ್ನು ಮಿತ ದರದಲ್ಲಿ ಬಾಡಿಗೆ ನೀಡಲಾಗುತ್ತಿದೆ. ಕಾಳು ಮೆಣಸು ಬೇರ್ಪಡಿಸುವ ಯಂತ್ರವೂ ಮಿತ ದರದಲ್ಲಿ ನೀಡಲಾಗುತ್ತಿದೆ.
*ಶೇ.11ರಷ್ಟು ಸಂಘದ ಸದಸ್ಯರಿಗೆ ಡಿವಿಡೆಂಟ್ ಹಂಚಿಕೆ
*6260 ಮಂದಿ ಸಂಘದ ಸದಸ್ಯರು
*553.28 ಕೋಟಿ ರೂ. ವಾರ್ಷಿಕ ವ್ಯವಹಾರ
*91.39 ಕೋಟಿ ರೂ. ಠೇವಣಿ
*ಶೇ.98.56ರಷ್ಟು ಸಾಲ ವಸೂಲಾತಿ
*2 ಕೋಟಿ ರೂ.ವಿಗೂ ಅಧಿಕ ಲಾಭಾಂಶ
*ಕ್ಯಾಂಪ್ಕೋ ಸಂಸ್ಥೆ ಜೊತೆಗೂಡಿ ರಬ್ಬರ್, ಕಾಳುಮೆಣಸು ಹಾಗೂ ಕೊಕ್ಕೊ ಮಾರಾಟ