Uncategorized

ಪ್ರತಿಷ್ಠಿತ ಪಿ.ಇ.ಎಸ್. ಯುನಿವರ್ಸಿಟಿಯಲ್ಲಿ ಪ್ರಾಧ್ಯಾಪಕರಾಗಿ ಸುಳ್ಯದ ಅಕ್ಷರ ದಾಮ್ಲೆ ನೇಮಕ, ಕೊಳೆಗೇರಿಗಳಲ್ಲಿರುವವರಿಗೆ ಉಚಿತ ಮಾನಸಿಕ ಚಿಕಿತ್ಸೆ ನೀಡಿದ್ದ ಅಕ್ಷರ ದಾಮ್ಲೆಗೆ ಉನ್ನತ ಸ್ಥಾನ

ನ್ಯೂಸ್ ನಾಟೌಟ್: ಬೆಂಗಳೂರಿನ ಪ್ರತಿಷ್ಠಿತ ಪಿ. ಇ. ಎಸ್. ಯುನಿವರ್ಸಿಟಿಯ ಪ್ರದರ್ಶನ ಕಲೆಗಳ ವಿಭಾಗದಲ್ಲಿ ಮನಃಶಾಸ್ತ್ರದ ಪ್ರಾಧ್ಯಾಪಕರಾಗಿ ಸುಳ್ಯದ ಅಕ್ಷರ ದಾಮ್ಲೆ ನೇಮಕಗೊಂಡಿದ್ದಾರೆ.

’ಮನೋಸಂವಾದ’ ಸಂಸ್ಥೆಯ ಸ್ಥಾಪಕರಾಗಿರುವ ಅಕ್ಷರ ದಾಮ್ಲೆ ಬೆಂಗಳೂರಿನ ವಿವಿಧ ಕಾಲೇಜುಗಳ ವಿಚಾರ ಸಂಕಿರಣಗಳಲ್ಲಿ ಉಪನ್ಯಾಸ ನೀಡಿ ಹೆಸರುಗಳಿಸಿದ್ದಾರೆ. ಕೋವಿಡ್ ನಿಯಂತ್ರಣದ ವೈದ್ಯಕೀಯ ಸಿಬ್ಬಂದಿಗಳಿಗೆ ಕೌನ್ಸೆಲಿಂಗ್ ಮಾಡಿ ಕೊರೊನಾ ವಾರಿಯರ್ ಪ್ರಶಸ್ತಿಯನ್ನು ಪಡೆದ ಹೆಗ್ಗಳಿಕೆ ಇವರು ಪಿ.ಇ.ಎಸ್. ಯುನಿವರ್ಸಿಟಿಯಲ್ಲಿ ಪ್ರಾಧ್ಯಾಪಕರಾಗಿ ನೇಮಕಗೊಂಡಿದ್ದಾರೆ.

ಸ್ವಯಂ ಸೇವಾ ಸಂಸ್ಥೆಗಳೊಂದಿಗೆ ಸೇರಿ ಬೆಂಗಳೂರಿನ ಕೊಳೆಗೇರಿಗಳಲ್ಲಿರುವವರಿಗೆ ಉಚಿತ ಮಾನಸಿಕ ಚಿಕಿತ್ಸೆ ನೀಡಿದ್ದಾರೆ. ಪ್ರಸ್ತುತ ಬೆಂಗಳೂರಿನ ರೋಟರಿ ‘E- Club of Rotary Bangalore Green City’ ಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Click

https://newsnotout.com/2024/08/bharath-shetty-get-fired-on-ivan-disoza-kannada-news-about-allegations/
https://newsnotout.com/2024/08/mangaluru-ivan-desoza-governer-house-stone-thrown/
https://newsnotout.com/2024/08/nivedhita-gowda-chandan-2-marriage-issue-blue-saree-kananda-news/
https://newsnotout.com/2024/08/bengal-tiger-tiger-women-viral-video-kannada-news-america/
https://newsnotout.com/2024/08/school-bus-under-fire-by-protester-kannada-news-viral-video-police-fir/
https://newsnotout.com/2024/08/shinde-house-demolish-by-people-kannada-news-viral-72-membars-under-custody/

Related posts

ಪುತ್ತೂರು:ಸ್ಕಾರ್ಪಿಯೋ ಕಾರಿನಲ್ಲೇ 41 ದೇಶ ಸುತ್ತಿದ ಯುವಕ..! ಸಾಹಸಿ ಸಿನಾನ್‍‌ನ್ನು ಶ್ಲಾಘಿಸಿದ ಬಿಜೆಪಿ ಮುಖಂಡ..!

ಗ್ರಾಮ ದೇವತೆ ದೇವಸ್ಥಾನ ಧ್ವಂಸ, ಲೇಡಿ ತಹಶೀಲ್ದಾರ್ ಎತ್ತಂಗಡಿ

ಮಂಗಳೂರು: ನಕಲಿ ದಾಖಲೆ ನೀಡಿ ಪಾಸ್‌ಪೋರ್ಟ್ ಪಡೆದ ಬಾಂಗ್ಲಾ ಪ್ರಜೆ..! ಪಶ್ಚಿಮ ಬಂಗಾಳದ ಮೂಲಕ ಭಾರತ ಪ್ರವೇಶಿಸಿ ಉಡುಪಿಗೆ ಬಂದಿದ್ದ ಆರೋಪಿ..!