ಕ್ರೈಂದೇಶ-ಪ್ರಪಂಚದೇಶ-ವಿದೇಶವೈರಲ್ ನ್ಯೂಸ್

ವಿಮಾನದೊಳಗೂ ಸೀಟಿಗಾಗಿ ಹೊಡೆದಾಟ..! ಇಲ್ಲಿದೆ ವೈರಲ್ ವಿಡಿಯೋ

ನ್ಯೂಸ್ ನಾಟೌಟ್: ಬಸ್‌ ರೈಲಿನಲ್ಲಿ ಸೀಟಿಗಾಗಿ ಪ್ರಯಾಣಿಕರ ನಡುವೆ ಜಗಳ ಆಗುವುದನ್ನು ಕಂಡಿರುತ್ತೇವೆ. ವಿಮಾನದಲ್ಲಿಯೂ ಪ್ರಯಾಣಿಕರು ಸೀಟಿಗಾಗಿ ಹೊಡೆದಾಟ ನಡೆಸಿರುವ ಘಟನೆ ವರದಿಯಾಗಿದೆ. ತೈವಾನ್‌ ನಿಂದ ಕ್ಯಾಲಿಫೋರ್ನಿಯಾಗೆ ಹೋಗುತ್ತಿದ್ದ EVA ವಿಮಾನದಲ್ಲಿ ಪ್ರಯಾಣಿಕರಿಬ್ಬರು ಸೀಟಿಗಾಗಿ ಹೊಡೆದಾಡಿಕೊಂಡಿದ್ದಾರೆ. ಈ ಗಲಾಟೆಯ ದೃಶ್ಯವನ್ನು ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ಸುಮಾರು 11.5 ಗಂಟೆಗಳ ಸುದೀರ್ಘ ಪ್ರಯಾಣ ಬೆಳೆಸಿದ್ದ EVA ವಿಮಾನದಲ್ಲಿ ಮಂಗಳವಾರ(ಮೇ.೭) ಈ ಘಟನೆ ನಡೆದಿದೆ. ಪಕ್ಷದಲ್ಲಿ ಕುಳಿತಿದ್ದ ವ್ಯಕ್ತಿ ನಿರಂತರವಾಗಿ ಕೆಮ್ಮುತ್ತಿದ್ದ ಕಾರಣ ಒಬ್ಬ ಪ್ರಯಾಣಿಕ ಖಾಲಿ ಇದ್ದ ಸೀಟ್‌ ನಲ್ಲಿ ಹೋಗಿ ಕುಳಿತುಕೊಳ್ಳುತ್ತಾನೆ. ಆಗ ಮೊದಲೇ ಆ ಸೀಟ್‌ನಲ್ಲಿ ಕುಳಿತಿದ್ದ ವ್ಯಕ್ತಿ ಅಲ್ಲಿಗೆ ಬಂದು ತಕರಾರು ತೆಗೆದಿದ್ದಾನೆ. ಆಗ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಜಗಳ ವಿಕೋಪಕ್ಕೆ ತಿರುಗಿ ಇಬ್ಬರೂ ಪರಸ್ಪರ ಬಡಿದಾಡಿಕೊಂಡಿದ್ದಾರೆ. ಪ್ರಯಾಣಿಕರ ಜಗಳ ಬಿಡಿಸಲು ವಿಮಾನ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ.

ಇಬ್ಬರನ್ನೂ ಹಿಡಿದೆಳೆದು ಜಗಳ ನಿಲ್ಲಿಸಲು ಎಲ್ಲಾ ಪ್ರಯಾತ್ನ ನಡೆಸಿದರು. ಮತ್ತೊಂದೆಡೆ ಇವರಿಬ್ಬರ ಜಗಳ ಕಂಡು ಇತರೆ ಪ್ರಯಾಣಿಕರು ಗಾಬರಿಗೊಂಡು ಕಿರುಚಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಕೊನೆಗೆ ಇಬ್ಬರು ಸಮಾಧಾನಪಡಿಸಲಾಗಿದೆ. ಸ್ಯಾನ್‌ ಫ್ರಾನ್ಸಿಸ್ಕೋಕ್ಕೆ ವಿಮಾನ ಬಂದಿಳಿಯುತ್ತಿದ್ದಂತೆ ಇಬ್ಬರನ್ನೂ ಪೊಲೀಸರಿಗೆ ಒಪ್ಪಿಸಲಾಗಿದೆ.

Related posts

ಫೇಸ್ ಬುಕ್ ಮೆಟಾದಲ್ಲಿ ಭಾರಿ ಉದ್ಯೋಗ ಕಡಿತ! ಕೆಲಸ ಕಳೆದುಕೊಂಡ ಭಾರತೀಯರು ಮಾಹಿತಿ ಕೇಳಿ ಸಂಪರ್ಕಿಸಿದರೂ ಉತ್ತರವಿಲ್ಲ!

ಕಳ್ಳತನ ಮಾಡಿದ್ದಾಳೆಂದು ಸಮವಸ್ತ್ರ ಬಿಚ್ಚಿಸಿ ಪರಿಶೀಲಿಸಿದ ಶಿಕ್ಷಕಿ..! 8ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ..!

‘ಪ್ರತಾಪ್ ಸಿಂಹ ಅವರೇ ಸ್ವಲ್ಪ ಬಾಯಿ ಮುಚ್ಚಿಕೊಂಡು ಇರಬೇಕು’, ಶಾಸಕ ಪ್ರದೀಪ್ ಈಶ್ವರ್ ಹೀಗೆ ಹೇಳಿದ್ಯಾಕೆ?