ಕರಾವಳಿಕಾಸರಗೋಡುಕ್ರೈಂದೇಶ-ಪ್ರಪಂಚದೇಶ-ವಿದೇಶ

ಗುದನಾಳದಲ್ಲಿ 1kg ಚಿನ್ನ ಬಚ್ಚಿಟ್ಟುಕೊಂಡಿದ್ದ ಗಗನಸಖಿ..! ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದದ್ದೇಗೆ..?

ನ್ಯೂಸ್‌ ನಾಟೌಟ್‌: ವಿದೇಶದಿಂದ ಚಿನ್ನ ಕಳ್ಳಸಾಗಣೆ ದಿನೇ ದಿನೇ ಹೆಚ್ಚುತ್ತಿದ್ದು, ಈ ಹಿಂದೆ ಪ್ರಯಾಣಿಕರು ವಿದೇಶದಿಂದ ಅಕ್ರಮವಾಗಿ ಚಿನ್ನ ತರುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿತ್ತು. ಈಗ ವಿಮಾನದ ಗಗನ ಸಖಿ ಭಾಗಿಯಾಗಿರುವುದು ಹಲವು ಚರ್ಚೆಗೆ ಕಾರಣವಾಗಿದೆ. ಅದರಂತೆ ಮಸ್ಕತ್ ನಿಂದ ಕೇರಳ ರಾಜ್ಯದ ಕಣ್ಣೂರಿಗೆ ತೆರಳುತ್ತಿದ್ದ ವಿಮಾನದಲ್ಲಿ ಕೆಲಸ ಮಾಡುತ್ತಿದ್ದ ಗಗನಸಖಿಯೊಬ್ಬರು ಚಿನ್ನ ಕಳ್ಳಸಾಗಣೆ ಮಾಡುತ್ತಿರುವ ಬಗ್ಗೆ ಕೊಚ್ಚಿ ಫ್ಲೈಟ್ ಇಂಟೆಲಿಜೆನ್ಸ್ ವಿಭಾಗದ ಅಧಿಕಾರಿಗಳಿಗೆ ಮಾಹಿತಿ ಲಭಿಸಿದೆ ಎನ್ನಲಾಗಿದೆ.

ಈ ಕುರಿತು ಅಲರ್ಟ್ ಆಗಿದ್ದ ಕಸ್ಟಮ್ಸ್ ಅಧಿಕಾರಿಗಳು ಗಗನಸಖಿಯನ್ನು ತಪಾಸಣೆ ನಡೆಸಿದ್ದಾರೆ ಅದರಂತೆ ಆಕೆಯ ಗುದನಾಳದಲ್ಲಿ ಸುಮಾರು ೯೬೦ ಗ್ರಾಂ ತೂಕದ ಚಿನ್ನ ಪತ್ತೆಯಾಗಿದೆ ಎಂದು ವರದಿ ತಿಳಿಸಿದೆ. ಕೂಡಲೇ ಅಧಿಕಾರಿಗಳು ಗಗನಸಖಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸುರಭಿ ಎಂಬಾಕೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಕೆಲಸ ಮಾಡುತ್ತಿದ್ದು, ಮೇ 28 ರಂದು ಮಸ್ಕತ್‌ನಿಂದ ಕಣ್ಣೂರಿಗೆ ಬಂದಿಳಿದಿದ್ದಾರೆ ಈ ವೇಳೆ ಅವರನ್ನು ತಪಾಸಣೆಗೆ ಒಳಪಡಿಸಿದಾಗ ಅಕ್ರಮವಾಗಿ ಚಿನ್ನ ಸಾಗಾಟ ಮಾಡುವ ವಿಚಾರ ಬೆಳಕಿಗೆ ಬಂದಿದೆ. ಕಣ್ಣೂರು ವಿಮಾನ ನಿಲ್ದಾಣದಲ್ಲಿ ಡಿಆರ್‌ಐ ಅಧಿಕಾರಿಗಳು ಚಿನ್ನವನ್ನು ವಶಪಡಿಸಿಕೊಂಡಿದ್ದು. ನಂತರ ಸುರಭಿ ಖತುನ್ ಅವರನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದ್ದು ಈ ವೇಳೆ ಅವರನ್ನು 14 ದಿನಗಳ ಕಸ್ಟಡಿಗೆ ನೀಡಲಾಗಿದೆ.

Click 👇

https://newsnotout.com/2024/05/sti-arrested-prajwal-with-lady-officers
https://newsnotout.com/2024/05/hd-kumaraswamy-went-for-resort-from-bengaluru
https://newsnotout.com/2024/05/police-and-misbehaviour-with-doubter-kannada-news

Related posts

ದಿಲ್ಲಿಯಿಂದ ಲಂಡನ್ ಗೆ ತೆರಳುತ್ತಿದ್ದ ವಿಮಾನಕ್ಕೆ ಬಾಂಬ್ ಬೆದರಿಕೆ, ತುರ್ತು ಭೂ ಸ್ಪರ್ಶದ ಬಳಿಕ ತಿಳಿದು ಬಂದಿದ್ದೇನು..?

ಸ್ಕಾರ್ಫಿಯೊ ಕಾರಿನಲ್ಲಿ ಬಂದು ಶಾಸಕ ಹರೀಶ್ ಪೂಂಜಾರ ಕಾರಿನತ್ತ ತಲ್ವಾರ್ ಝಳಪಿಸಿದವ ಯಾರು?

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಪಿಎಲ್ ಕಾರ್ಡ್ ಪರಿಶೀಲನೆಗೆ ಮುಂದಾದ ಸರ್ಕಾರ, ಸುಳ್ಯ, ಪುತ್ತೂರು ಸೇರಿದಂತೆ ಹಲವು ತಾಲೂಕಿನ ಬಿಪಿಎಲ್ ಅನರ್ಹರ ಪಟ್ಟಿ ರೆಡಿ, ನಿಮ್ಮ ಕಾರ್ಡ್ ಕೂಡ ಇದೆಯೇ..?