ದೇಶ-ಪ್ರಪಂಚವೈರಲ್ ನ್ಯೂಸ್

ಏರ್ ಇಂಡಿಯಾ ವಿಮಾನದಲ್ಲಿ ಮಹಿಳೆಗೆ ಕಚ್ಚಿದ ವಿಷಕಾರಿ ಚೇಳು! ವಿಮಾನದೊಳಗೆ ಹೊಗೆ ಹಾಕಿದ ಇಂಜಿನಿಯರ್ಸ್..!

ನ್ಯೂಸ್ ನಾಟೌಟ್:  ಕಳೆದ ವರ್ಷ ಡಿಸೆಂಬರ್‌ನಲ್ಲಿ ಕ್ಯಾಲಿಕಟ್‌ನಿಂದ ದುಬೈ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಕಾರ್ಗೋ ಹೋಲ್ಡ್‌ನಲ್ಲಿ ಹಾವುವೊಂದು ಪತ್ತೆಯಾಗಿತ್ತು , ಈಗ ಅದೇ ರೀತಿ ಕಳೆದ ತಿಂಗಳು ನಾಗ್ಪುರದಿಂದ ಮುಂಬೈಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರಿಗೆ ಚೇಳು ಕಚ್ಚಿದ ಅಪರೂಪದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಎ. 23, 2023 ರಂದು ವಿಮಾನ AI 630 ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರಿಗೆ ಚೇಳು ಕಚ್ಚಿದ್ದು ಅತ್ಯಂತ ಅಪರೂಪದ ಮತ್ತು ದುರದೃಷ್ಟಕರ ಘಟನೆ ನಡೆದಿದೆ” ಎಂದು ಏರ್ ಇಂಡಿಯಾ ಹೇಳಿದೆ.

ವಿಮಾನದಿಂದ ಇಳಿದ ತಕ್ಷಣ ಮಹಿಳಾ ಪ್ರಯಾಣಿಕರಿಗೆ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿತ್ತು. ಇದೀಗ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಮದು ವರದಿ ತಿಳಿಸಿದೆ.

ಘಟನೆಯ ಮಾಹಿತಿ ಪಡೆದ ಏರ್ ಇಂಡಿಯಾದ ಇಂಜಿನಿಯರಿಂಗ್ ತಂಡವು ವಿಮಾನವನ್ನ ಸಂಪೂರ್ಣ ತಪಾಸಣೆ ನಡೆಸಿ ಚೇಳನ್ನು ಪತ್ತೆಹಚ್ಚಿದ ನಂತರ ವಿಮಾನದೊಳಗೆ ಸಂಪೂರ್ಣವಾಗಿ ಹೊಗೆ ಹಾಕುವ ಪ್ರಕ್ರಿಯೆ ನಡೆಸಲಾಯಿತು.

Related posts

“ರಜನಿಕಾಂತ್‌ ನನ್ನನ್ನು ರಹಸ್ಯವಾಗಿ ಮದುವೆಯಾಗಿದ್ದಾರೆ” ಎಂದ ಈ ನಟಿ ಯಾರು?ಏನಿದು ವಿವಾದ..? ಈ ಬಗ್ಗೆ ನಟಿ ಹೇಳಿದ್ದೇನು?

ಪಾರಿವಾಳ ಹಾರಿಸಿ ಮನೆಯಲ್ಲಿದ್ದ ಚಿನ್ನ-ಹಣ ಕದಿಯುತ್ತಿದ್ದ ವಿಚಿತ್ರ ಕಳ್ಳ..! 30ಕ್ಕೂ ಅಧಿಕ ಮನೆ ಕಳವು..!

ಚೆಂಬು: ‘ನಮಗೆ ಯಾವ ಧನ್ಯವಾದವೂ ಬೇಡ, ಪ್ರಣವ ಫೌಂಡೇಷನ್ ಗೆ ದೊಡ್ಡ ಧನ್ಯವಾದಗಳನ್ನು ಸಲ್ಲಿಸಿ, ‘ಬೆಳಕು’ ಕಾರ್ಯಕ್ರಮದ ಮೂಲಕ ಅತ್ಯಾಡಿ ಜನರ ಬದುಕು ಬೆಳಗಿದ ಪಬ್ಲಿಕ್ ಟಿವಿ ಎಚ್ .ಆರ್ ರಂಗನಾಥ್ ಹೇಳಿಕೆ, ವಿಡಿಯೋ ವೀಕ್ಷಿಸಿ