ದೇಶ-ಪ್ರಪಂಚಬೆಂಗಳೂರುರಾಜಕೀಯ

ಅಡುಗೆ ಅನಿಲ ಬೆಲೆ ಏರಿಕೆಗೆ ಮಲ್ಲಿಕಾರ್ಜುನ ಖರ್ಗೆ ಕಿಡಿ

ನ್ಯೂಸ್‌ನಾಟೌಟ್‌: ಇಂದಿನಿಂದ ಅಡುಗೆ ಅನಿಲ ಸಿಲಿಂಡರ್‌ ಬೆಲೆಯಲ್ಲಿ ಐವತ್ತು ರೂಪಾಯಿ ಮತ್ತು ವಾಣಿಜ್ಯ ಬಳಕೆಯ ಸಿಲಿಂಡರ್‌ ಬೆಲೆಯಲ್ಲಿ 350 ರೂಪಾಯಿ ಹೆಚ್ಚಳವಾಗಿದ್ದು, ತೈಲ ಕಂಪನಿಗಳ ಬೆಲೆ ಏರಿಕೆಗೆ ಲಗಾಮು ಹಾಕದ ಕೇಂದ್ರ ಸರ್ಕಾರದ ಕ್ರಮಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈಗಾಗಲೇ ಬೆಲೆ ಏರಿಕೆಯಿಂದ ನೊಂದಿರುವ ಜನಸಾಮಾನ್ಯರಿಗೆ ಮೇಲಿಂದ ಮೇಲೆ ಹೊಡೆತ ಬೀಳುತ್ತಲೇ ಇದೆ.

ಇನ್ನು ಕೆಲವೇ ದಿನಗಳಲ್ಲಿ ಹಲವು ರಾಜ್ಯಗಳಲ್ಲಿ ಚುನಾವಣೆ ನಡೆಯಲಿದ್ದು, ಈ ಅವಧಿಯಲ್ಲೇ ಗ್ಯಾಸ್‌ ಬೆಲೆ ಹೆಚ್ಚಳವಾಗಿರುವುದು ವಿಪಕ್ಷಗಳಿಗೆ ಪ್ರಮುಖ ಅಸ್ತ್ರ ಸಿಕ್ಕಂತಾಗಿದೆ. ಅಡುಗೆ ಅನಿಲ ಬೆಲೆ ಏರಿಕೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿ ಟ್ವೀಟ್‌ ಮಾಡಿದ್ದಾರೆ.

ಮಾಡಿರುವ ಅವರು, ಹೋಳಿ ಹಬ್ಬಕ್ಕೂ ಮೊದಲೇ ಗೃಹ ಬಳಕೆ ಮತ್ತು ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‍ ದರ ಏರಿಕೆಯಾಗಿದೆ. ಪದೇ ಪದೇ ಈ ರೀತಿ ದರ ಏರಿಕೆ ಮಾಡಿದರೆ ಜನರು ಅಡುಗೆ ಮಾಡುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ.

ಸದ್ಯ ಹೋಳಿ ಹಬ್ಬ ಸನಿಹವಾಗುತ್ತಿದೆ. ಹೋಳಿ ಹಬ್ಬ ಎಂದರೆ ಸಂಭ್ರಮದ ಹಬ್ಬ. ಜನ ವಿವಿಧ ಖಾದ್ಯಗಳನ್ನು ತಯಾರಿಸಿ ಹಬ್ಬದೂಟ ಮಾಡುವುದು ಸಾಮಾನ್ಯ. ಆದರೆ ಅಡುಗೆ ಅನಿಲ ಬೆಲೆ ಏರಿಕೆಯಿಂದ ಹಬ್ಬದೂಟಕ್ಕೂ ಸಂಕಷ್ಟ ಎದುರಾಗಿದೆ. ಜನ ತಿನ್ನೋದು ಬೇಡವೇ? ಇಂತಹ ಲೂಟಿಗೆ ಕೊನೆ ಯಾವಾಗ ಎಂದು ಕೇಳಿದ್ದಾರೆ. ಮೋದಿ ಸರ್ಕಾರದಲ್ಲಿ ಜನರು ಇನ್ನೆಷ್ಟು ಕಷ್ಟ ಪಡಬೇಕೋ ತಿಳಿಯದು ಎಂದು ಖರ್ಗೆ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Related posts

ಹೊಸ ವರ್ಷಾಚರಣೆ ವಿರೋಧಿಸಿ ಹೋಟೆಲ್, ಮಾಲ್ ಗಳಲ್ಲಿ ಪೋಸ್ಟರ್ ಅಂಟಿಸಿದ ಬಜರಂಗ ದಳ ಕಾರ್ಯಕರ್ತರು

ಮಹಿಳೆ ಮೇಲೆ ಪ್ರಯಾಣದ ವೇಳೆ ಮೂತ್ರ ವಿಸರ್ಜನೆ:೩೦ ಲಕ್ಷ ದಂಡ ವಿಧಿಸಿದ ಏರ್ ಇಂಡಿಯಾ

ಸಲ್ಮಾನ್ ಖಾನ್ ಮನೆ ಮುಂದೆ ಗುಂಡಿನ ದಾಳಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್..! ಬಂಧನವಾಗಿದ್ದ ವ್ಯಕ್ತಿ ಜೈಲಿನೊಳಗೆ ಆತ್ಮಹತ್ಯೆ..!