Uncategorized

ಪಾತಾಳಕ್ಕಿಳಿದ ಟೊಮೇಟೋ ಬೆಲೆ;25 ಕೆ.ಜಿ.ಗೆ 70 ರೂಪಾಯಿ:ರೈತರ ಶ್ರಮಕ್ಕೆ ಬೆಲೆ ಇಲ್ಲವೇ

ನ್ಯೂಸ್ ನಾಟೌಟ್ : ದಿನದಿಂದ ದಿನಕ್ಕೆ ತರಕಾರಿಗಳ ಬೆಲೆ ಗಗನಕ್ಕೇರುತ್ತಿದೆ. ಇದೀಗ ಟೊಮೆಟೊ ಬೆಲೆ ಪಾತಾಳಕ್ಕೆ ಕುಸಿದಿದೆ.ರೈತರು ಆತಂಕಕ್ಕೀಡಾಗಿದ್ದಾರೆ.ಬೆಳೆದ ಕೃಷಿಗೆ ಸರಿಯಾದ ಬೆಲೆ ಸಿಗದೇ ರೈತರು ಸಂಕಷ್ಟಕ್ಕೀಡಾಗಿದ್ದಾರೆ.

25 ಕೆ.ಜಿ.ಗೆ 70 ರೂಪಾಯಿ:

ಮಾರುಕಟ್ಟೆಯಲ್ಲಿ ಟೊಮೆಟೋ ಬೆಲೆ ಕುಸಿದಿರುವ ಕಾರಣ ರೈತರು ನಿರಾಶೆಗೊಳಗಾಗಿದ್ದಾರೆ. ಟೊಮೆಟೋ ಬೆಳೆಯಲು ನಾವು ಮಾಡಿದ ಖರ್ಚು ನಮ್ಮ ಕೈ ಸೇರಿಲ್ಲವೆಂದು ಆತಂಕ ವ್ಯಕ್ತ ಪಡಿಸಿದ್ದಾರೆ. ಕಳೆದ ಒಂದು ತಿಂಗಳಿನಿಂದ ಪ್ರತಿ 25 ಕೆ.ಜಿ.ಯ ಟೊಮೆಟೋ ಕ್ಯಾನ್ ಕೇವಲ 70 ರೂಪಾಯಿಗೆ ಮಾರಾಟ ಆಗಿತ್ತು. ಮನೆ ಖರ್ಚು ಸೇರಿದಂತೆ ಇತರ ಖರ್ಚುಗಳಿರುವುದರಿಂದ ಈ ಕೃಷಿಯನ್ನೇ ನಂಬಿ ಬದುಕುವ ನಾವು ನಾವೇನು ಮಾಡಬೇಕು? ಎಂದು ರೈತರು ಪ್ರಶ್ನಿಸುತ್ತಿದ್ದಾರೆ. ದುಬಾರಿ ದುನಿಯಾದಲ್ಲಿ 70 ರೂಪಾಯಿಯಲ್ಲೇನು ಬರೋದಕ್ಕೆ ಸಾಧ್ಯ ಎಂದು ರೈತರು ಕಣ್ಣೀರು ಹಾಕುತ್ತಿದ್ದಾರೆ.

ಬಹುಮುಖ್ಯವಾಗಿ ರಾಯಚೂರು ಜಿಲ್ಲೆಯ ದೇವದರ್ಗ ತಾಲೂಕಿನ ವ್ಯಾಪ್ತಿಯಲ್ಲಿ ಇದೀಗ ಟೊಮೆಟೋ ಬೆಲೆ ಕುಸಿತಗೊಂಡಿದೆ. ಅರಕೇರಾ, ಇರಬಗೇರ, ಮಾನಸಗಲ್, ಕೋತಿಗುಡ್ಡ, ಗೌರಂಪೇಟ, ಇಂದಿರಾನಗರ ಸೇರಿದಂತೆ ಇನ್ನಿತರ ತಾಲೂಕಿನ ತಾಂಡ ಮತ್ತು ದೊಡ್ಡಿಯ ಕೆಲವು ರೈತರು ಟೊಮೆಟೋ ಬೆಲೆ ಕುಸಿತದಿಂದ ಆತಂಕಕ್ಕೆ ಒಳಗಾಗಿದ್ದಾರೆ. ಬೆಲೆ ಕುಸಿತದಿಂದ ಮಾರುಕಟ್ಟೆಗೆ ಸಾಗಿಸುವ ವೆಚ್ಚವೂ ಬರುವುದಿಲ್ಲ ಹೀಗಾಗಿ ಕಟಾವು ಮಾಡದೇ ಹೊಲದಲ್ಲಿಯೇ ಬಿಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಆತಂಕಕ್ಕೊಳಗಾದ ಅನ್ನದಾತ….!

12 ಹೆಕ್ಟೇರ್ ಪ್ರದೇಶದಲ್ಲಿ ಟೊಮೆಟೋ ಬೆಳೆಯನ್ನು ಬೆಳೆದಿದ್ದೇವೆ. ಇಳುವರಿಯೂ ಕೂಡ ಚೆನ್ನಾಗಿ ಬಂದಿದೆ. ಆದರೆ ಬೆಳೆಗೆ ತಕ್ಕಂತೆ ಸರಿಯಾದ ದರ ಸಿಗುತ್ತಿಲ್ಲ. ಇದರಿಂದಾಗಿ 15ರಿಂದ 20 ಲಕ್ಷ ರೂಪಾಯಿ ನಷ್ಟವಾಗಿದೆ. ಸ್ಥಳೀಯ ಮಾರುಕಟ್ಟೆಯವರು ಟೊಮೆಟೋ ಖರೀದಿಗೆ ಮುಂದೆ ಬಾರದ ಹಿನ್ನಲೆ ಹೈದರಾಬಾದ್ ಮೂಲದ ಮಾರುಕಟ್ಟೆಗೆ 70 ರೂಪಾಯಿಗೆ ಒಂದು ಕ್ಯಾನ್ (25 ಕೆ.ಜಿ) ನೀಡುತ್ತಿದ್ದೇವೆ. ಇದರಿಂದ ಬಂದಂತಹ ಹಣ ಕೂಲಿಯವರಿಗೆ ನೀಡಲೂ ಸಾಕಾಗುವುದಿಲ್ಲ ಎಂದು ಗೌರಂಪೇಟ ರೈತರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.

Related posts

ಜಮ್ಮು-ಕಾಶ್ಮೀರ: ಕರ್ತವ್ಯದಲ್ಲಿದ್ದಾಗ ಹಾವು ಕಚ್ಚಿ ಮೃತಪಟ್ಟ ಯೋಧ, ಕಣ್ಣೀರಾದ ಕುಟುಂಬ

ರಾಜ್ಯ ಬಿಜೆಪಿಯ ಸಂಘಟನಾ ಕಾರ್ಯದರ್ಶಿಯಾಗಿ ರಾಜೇಶ್ ಕುಂತೂರು ನೇಮಕ

ಕೊಕ್ಕಡ: ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಅವ್ಯವಹಾರದ ಘಮ..ಘಮ..! ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿ ಪ್ರತಿಭಟನೆ