ಕರಾವಳಿಸುಳ್ಯ

ವಿ.ಆರ್.ಡಿ.ಎಫ್ ಜಾಲ್ಸೂರು ಸಮಿತಿ ಸದಸ್ಯರ ಕೃಷಿ ಅಧ್ಯಯನ ಪ್ರವಾಸ,ಬೆಳ್ತಂಗಡಿಯ ಕಡಮ್ಮಾಜೆ ಮತ್ತು ಮೂಡಬಿದ್ರೆಯ ಸೋನ್ಸ್ ಫಾರ್ಮ್ ಗೆ ಭೇಟಿ

ನ್ಯೂಸ್ ನಾಟೌಟ್ : ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ (ರಿ), ಮಂಗಳೂರು ಇದರಿಂದ ಪ್ರವರ್ತಿಸಲ್ಪಟ್ಟ ವಿಜಯ ಗ್ರಾಮಾಭಿವೃದ್ಧಿ ಜಾಲ್ಸೂರು ಸಮಿತಿಯ ಸದಸ್ಯರು ಬೆಳ್ತಂಗಡಿ ತಾಲೂಕಿನ ಕಡಮ್ಮಾಜೆ ಫಾರ್ಮ್ ಹಾಗೂ ಮೂಡಬಿದ್ರೆಯ ಸೋನ್ಸ್ ಫಾರ್ಮ್ ಗೆ ಸೆ.14 ರಂದು ಭೇಟಿ ನೀಡಿದರು.

ಕಡಮ್ಮಾಜೆ ಫಾರ್ಮ್ ನಲ್ಲಿ ವಿವಿಧ ತಳಿಯ ಮೀನು,ಕೋಳಿ,ಪಕ್ಷಿ ಹಾಗೂ ಸಾವಯವ ಕೃಷಿ ಬಗ್ಗೆ ಸದಸ್ಯರು ತಿಳಿದುಕೊಂಡು ಮೆಚ್ಚುಗೆ ಸೂಚಿಸಿದರು. ಕಡಮ್ಮಾಜೆ ಫಾರ್ಮ್ ನ ಪ್ರಗತಿಪರ ಕೃಷಿಕ ದೇವಿಪ್ರಸಾದ್ ಮೊಗ್ರು ಮಾಹಿತಿ ನೀಡಿ ಹಲವು ವಿಚಾರಗಳನ್ನು ಹಂಚಿಕೊಂಡರು. ಈ ಸಂದರ್ಭ ದೇವಿಪ್ರಸಾದ್ ಮೊಗ್ರು ಹಾಗೂ ಮನೆಯವರನ್ನು ಸಮಿತಿಯ ಪರವಾಗಿ ಗೌರವಿಸಲಾಯಿತು.

ಬಳಿಕ ಮೂಡಬಿದಿರೆಯ ಸೋನ್ಸ್ ಫಾರ್ಮ್ ಗೆ ಭೇಟಿ ನೀಡಿದ ಸಮಿತಿಯ ಸದಸ್ಯರು ಅಲ್ಲಿ ವಿವಿಧ ರೀತಿಯ ಹಣ್ಣುಗಳ ಗಿಡ- ಮರಗಳನ್ನು, ವಿವಿಧ ಜಾತಿಯ ಬಿದಿರು ಹಿಂಡುಗಳನ್ನು, ಸಮಗ್ರ ಕೃಷಿಯನ್ನು ವೀಕ್ಷಿಸಿ ಸಂತಸ ವ್ಯಕ್ತ ಪಡಿಸಿದರು. ಫಾರ್ಮ್ ಮಾಲಕ ವಿನೋದ್ ರವರು ಸಮಗ್ರ ಮಾಹಿತಿ ನೀಡಿದರು. ಈ ವೇಳೆ ಸಮಿತಿಯ ವತಿಯಿಂದ ಅವರನ್ನು ಗೌರವಿಸಲಾಯಿತು.

ಕೃಷಿ ಅಧ್ಯಯನ ಪ್ರವಾಸದಲ್ಲಿ ಸುಮಾರು 20 ಮಂದಿ ಸದಸ್ಯರು ಭಾಗವಹಿಸಿದ್ದರು.

Related posts

ಮೇ 20ರಂದು ಮುಳಿಯ ಚಿನ್ನೋತ್ಸವದಲ್ಲಿ ಮೆಹಂದಿ ಸಂಭ್ರಮ

ನೆಲ್ಯಾಡಿ: ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ, ಚಿಂತಾಜನಕ ಸ್ಥಿತಿಯಲ್ಲಿದ್ದ ಬೈಕ್ ಸವಾರ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಮೃತ್ಯು

ಬೆಳ್ತಂಗಡಿ: ಅಕ್ರಮ ಕಳ್ಳಭಟ್ಟಿ ಸಾರಾಯಿ ವಶಪಡಿಸಿಕೊಂಡ ಅಬಕಾರಿ ಅಧಿಕಾರಿಗಳು! ಪರಾರಿಯಾದವರ ವಿರುದ್ಧ ಕೇಸ್ ದಾಖಲು!