ನ್ಯೂಸ್ ನಾಟೌಟ್: ಪಾಕಿಸ್ತಾನದಲ್ಲಿ ಉಗ್ರರ ಅಟ್ಟಹಾಸ ಮತ್ತೆ ಜೋರಾಗಿದ್ದು, ಅಪರಿಚಿತ ದಾಳಿಕೋರರು ಮತ್ತು ಬಲೂಚಿಸ್ತಾನ್ ಲಿಬರೇಶನ್ ಆರ್ಮಿ ಹೋರಾಟಗಾರರು ಪಾಕ್ ಗೆ ತಲೆನೋವಾಗಿದ್ದಾರೆ.
ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದ ಗ್ವಾದರ್ ನಗರದಲ್ಲಿ ಶುಕ್ರವಾರ(ಮಾ.28) ಭಾರಿ ಐಇಡಿ ಸ್ಫೋಟ ಸಂಭವಿಸಿದ್ದು, ಈ ಐಇಡಿ ಸ್ಫೋಟದಲ್ಲಿ 8 ಪಾಕಿಸ್ತಾನಿ ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಪಡಿಜಾರ್ ಪ್ರದೇಶದ ಮೆರೈನ್ ಡ್ರೈವ್‌ನ ಜಿಪಿಎ ಕಚೇರಿಯ ಬಳಿ ಈ ದಾಳಿ ನಡೆದಿದ್ದು, ಗುರುತಿಸಲಾಗದ ದಾಳಿಕೋರರು ಮಿಲಿಟರಿ ವಾಹನವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ಈ ಭಾರೀ ಸ್ಫೋಟದಲ್ಲಿ ಇತರ ನಾಲ್ವರು ಸೈನಿಕರು ಗಾಯಗೊಂಡಿದ್ದಾರೆ. ಸ್ಥಳೀಯ ಮೂಲಗಳ ಪ್ರಕಾರ, ಈ ದಾಳಿಯು ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಮಾಡಿರುವ ಸಾಧ್ಯತೆ ಇದೆ. ಆದರೂ ಯಾವುದೇ ಗುಂಪು ಇನ್ನೂ ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ. ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಿದ್ದು, ಭದ್ರತಾ ಪಡೆಗಳು ತನಿಖೆ ಆರಂಭಿಸಿವೆ.
ಮಾರ್ಚ್ 11, 2025 ರಂದು, ಪ್ರತ್ಯೇಕತಾವಾದಿಗಳು ಬಿಎಲ್ಎ ಜಾಫರ್ ಎಕ್ಸ್‌ಪ್ರೆಸ್ ರೈಲನ್ನು ಹೈಜಾಕ್ ಮಾಡಿ, ಹಲವಾರು ಸೈನಿಕರು ಸೇರಿದಂತೆ 400 ಕ್ಕೂ ಹೆಚ್ಚು ಪ್ರಯಾಣಿಕರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದರು. ಈ ದಾಳಿಯಲ್ಲಿ 25 ಜನರು ಸಾವನ್ನಪ್ಪಿದ್ದರು.
View this post on Instagram
ಇದನ್ನೂ ಓದಿ: ಭದ್ರತಾ ಸಿಬ್ಬಂದಿ ಮತ್ತು ನಕ್ಸಲರ ನಡುವೆ ಗುಂಡಿನ ಚಕಮಕಿ..! 16 ನಕ್ಸಲರ ಶವಗಳನ್ನು ಹೊರತೆಗೆದ ಪೊಲೀಸರು..!
ಬಿಸಿಲ ಶಾಖದಿಂದ ಪಾರಾಗಲು ಐಷಾರಾಮಿ ಕಾರಿಗೆ ಸಗಣಿ ಲೇಪಿಸಿದ ವೈದ್ಯ..! ವಿಡಿಯೋ ವೈರಲ್
ಇಂದು(ಮಾ.29) ಈ ವರ್ಷದ ಮೊದಲ ಸೂರ್ಯ ಗ್ರಹಣ, ಯುಗಾದಿಗೂ ಮೊದಲು ಬಂದ ಸೂರ್ಯ ಗ್ರಹಣದಿಂದ ಧಾರ್ಮಿಕ ಮಹತ್ವ..!