ಕ್ರೈಂ

ಅರಂಬೂರು: ಹತ್ತು ಚಕ್ರದ ಲಾರಿಗೆ ಆಟೋ ರಿಕ್ಷಾ ಡಿಕ್ಕಿ

352
Spread the love

ಅರಂಬೂರು: ಸುಳ್ಯದಿಂದ ಅರಂಬೂರಿಗೆ ಹೋಗುತ್ತಿದ್ದ ರಿಕ್ಷಾವೊಂದು ಅತೀ ವೇಗದಿಂದ ಚಲಿಸಿ ಹತ್ತು ಚಕ್ರದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ರಿಕ್ಷಾದಲ್ಲಿದ್ದ ಮಹಿಳೆ ತೀವ್ರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಗೆ ಸಾಗಿಸಲ್ಪಟ್ಟ ಘಟನೆ ಇಂದು ರಾತ್ರಿ 7 ಗಂಟೆ ಸುಮಾರಿಗೆ ನಡೆದಿದೆ.

ಬಳ್ಳಡ್ಕದ ಪುರುಷೋತ್ತಮ ಎಂಬವರ ರಿಕ್ಷಾದಲ್ಲಿ ಅರಂಬೂರಿನ ಬೇಬಿ, ಸೀತು ಮತ್ತು ಗಣೇಶ್ ಎಂಬವರು ಅರಂಬೂರು ಕಡೆಗೆ ಹೋಗುತ್ತಿದ್ದರು. ಪರಿವಾರಕಾನ ದಾಟಿ ಮುಂದೆ ಹೋಗುತ್ತಿದ್ದಂತೆ ಅತೀ ವೇಗದಿಂದ ಚಲಾಯಿಸಲ್ಪಡುತ್ತಿದ್ದ ರಿಕ್ಷಾ , ಬೈಕ್ ಮತ್ತು ಜೀಪೊಂದನ್ನು ಓವರ್ ಟೇಕ್ ಮಾಡಿ ಮುನ್ನುಗ್ಗುತ್ತಾ ಎದುರಿನಿಂದ ಬರುತ್ತಿದ್ದ ಹತ್ತು ಚಕ್ರದ ಲಾರಿಗೆ ಡಿಕ್ಕಿ ಹೊಡೆಯಿತೆಂದು ತಿಳಿದು ಬಂದಿದೆ. ಪರಿಣಾಮವಾಗಿ ರಿಕ್ಷಾದಲ್ಲಿದ್ದ ಬೇಬಿ ಎಂಬವರು ತೀವ್ರ ಜಖಂಗೊಡರು. ಸೀತು ರವರಿಗೂ ಹಣೆಗೆ ಏಟಾಯಿತು. ತಕ್ಷಣ ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆತರಲಾಯಿತು. ತೀವ್ರ ಜಖಂಗೊಂಡಿದ್ದ ಬೇಬಿ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಕಳುಹಿಸಲಾಯಿತು.

See also  ಕೋಟಿ ಕೋಟಿ ವಂಚನೆ ಪ್ರಕರಣದ ಚೈತ್ರಾ ಕುಂದಾಪುರ ಪರ ನಿಂತ ಪ್ರಮೋದ್ ಮುತಾಲಿಕ್! ಚೈತ್ರಾ ಕುಂದಾಪುರ ಬಗ್ಗೆ ಮುತಾಲಿಕ್ ಹೇಳಿದ್ದೇನು?
  Ad Widget   Ad Widget   Ad Widget   Ad Widget   Ad Widget   Ad Widget