Uncategorized

46 ವರ್ಷಗಳ ಬಳಿಕ ತೆರೆದ ಜಗನ್ನಾಥನ ರತ್ನ ಖಜಾನೆ..! ಇಲ್ಲಿದೆ ಸಂಪೂರ್ಣ ಮಾಹಿತಿ

ನ್ಯೂಸ್ ನಾಟೌಟ್: 12ನೇ ಶತಮಾನದ ಪುರಿಯ ಜಗನ್ನಾಥ ದೇವಾಲಯದ ಖಜಾನೆಯಾದ ರತ್ನ ಭಂಡಾರವನ್ನು 46 ವರ್ಷಗಳ ನಂತರ ಬೆಲೆಬಾಳುವ ವಸ್ತುಗಳ ದಾಸ್ತಾನು ಮತ್ತು ಅದರ ರಚನೆಯ ದುರಸ್ತಿಗಾಗಿ ಭಾನುವಾರ(ಜುಲೈ 14) ಮತ್ತೆ ತೆರೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಉದ್ದೇಶಕ್ಕಾಗಿ ರಾಜ್ಯ ಸರ್ಕಾರ ರಚಿಸಿದ್ದ ಸಮಿತಿಯ ಸದಸ್ಯರು ಮಧ್ಯಾಹ್ನ 12 ಗಂಟೆ ಸುಮಾರಿಗೆ ದೇವಸ್ಥಾನಕ್ಕೆ ಪ್ರವೇಶಿಸಿ, ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ, ಭಂಡಾರವನ್ನು ಪುನಃ ತೆರೆಯಲಾಯಿತು. “ನಿಮ್ಮ ಇಚ್ಛೆಯ ಮೇರೆಗೆ ಜಗನ್ನಾಥ ದೇಗುಲಗಳ ನಾಲ್ಕು ದ್ವಾರಗಳನ್ನು ತೆರೆಯಲಾಗಿತ್ತು. ಇಂದು ನಿಮ್ಮ ಇಚ್ಛೆಯ ಮೇರೆಗೆ 46 ವರ್ಷಗಳ ನಂತರ ರತ್ನ ಭಂಡಾರವನ್ನು ಮಹತ್ತರ ಉದ್ದೇಶಕ್ಕಾಗಿ ತೆರೆಯಲಾಗಿದೆ” ಎಂದು ಸಿಎಂ ಪೋಸ್ಟ್‌ನಲ್ಲಿ ಹೇಳಲಾಗಿದೆ.

ಮಧ್ಯಾಹ್ನ 1.28ರ ಶುಭ ಮುಹೂರ್ತದಲ್ಲಿ ಖಜಾನೆಯನ್ನು ಪುನಃ ತೆರೆಯಲು ನಿರ್ಧರಿಸಲಾಗಿದೆ ಎಂದು ಬರೆಯಲಾಗಿದೆ. ಖಜಾನೆ ತೆರೆದಾಗ11 ಜನರು ಹಾಜರಿದ್ದು, ಒರಿಸ್ಸಾದ ಮಾಜಿ ಹೈಕೋರ್ಟ್ ನ್ಯಾಯಾಧೀಶ ಬಿಸ್ವನಾಥ್ ರಾತ್, ಶ್ರೀ ಜಗನ್ನಾಥ ದೇವಸ್ಥಾನದ ಆಡಳಿತ (ಎಸ್ಜೆಟಿಎ) ಮುಖ್ಯ ಆಡಳಿತಾಧಿಕಾರಿ ಅರಬಿಂದ ಪಾಧಿ, ಎಎಸ್ಐ ಸೂಪರಿಂಟೆಂಡೆಂಟ್ ಡಿಬಿ ಗಡನಾಯಕ್ ಮತ್ತು ಪುರಿಯ ಪಟ್ಟದ ರಾಜ ಗಜಪತಿ ಮಹಾರಾಜನ ಪ್ರತಿನಿಧಿಗಳು ಇದ್ದರು.

Click 👇

https://newsnotout.com/2024/07/donald-trump-under-attack-by-unkwon-kannada-news-modi-replay
https://newsnotout.com/2024/07/pooja-gandhi-acts-in-serial-kannada-news-divya-viral-news
https://newsnotout.com/2024/07/love-with-married-kannada-news-griculture-issue-kananda-news
https://newsnotout.com/2024/07/bengaluru-police-cyber-issue-kannada-news-call-and-threat

Related posts

ಸುಳ್ಯ: ಕೆವಿಜಿ ಆರ್ಯುವೇದ ಮೆಡಿಕಲ್‌ ಕಾಲೇಜು ಮತ್ತು ಆಸ್ಪತ್ರೆ, ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟ; ಕಾಲೇಜಿನ 43 ವಿದ್ಯಾರ್ಥಿಗಳಿಗೆ ವಿಶಿಷ್ಟ ಶ್ರೇಣಿ

ನಾಳೆ ಸುಳ್ಯ, ಕಡಬ ತಾಲೂಕಿನ ಶಾಲಾ-ಕಾಲೇಜಿಗೆ ರಜೆ

ಇಂದಿನಿಂದ ರಾಜ್ಯದಲ್ಲಿ ಐದು ದಿನಗಳ ಕಾಲ ಮಳೆ ಸಾಧ್ಯತೆ!