Latestದೇಶ-ವಿದೇಶವೈರಲ್ ನ್ಯೂಸ್

ಅಫ್ಘಾನಿಸ್ತಾನದಿಂದ ಭಾರತಕ್ಕೆ ಸರಕು ಸಾಗಾಟ ಮಾಡಲು ಅನುಮತಿ ಕೊಟ್ಟ ಪಾಕ್..! ಪಾಕ್‍ ವಿದೇಶಾಂಗ ಸಚಿವಾಲಯದಿಂದ ಪತ್ರ..!

854

ನ್ಯೂಸ್ ನಾಟೌಟ್: ಭಾರತಕ್ಕೆ ಸರಕು ಸಾಗಿಸಲು ಅಫ್ಘಾನಿಸ್ತಾನಕ್ಕೆ ಪಾಕಿಸ್ತಾನ ಅನುಮತಿ ನೀಡಿದೆ. ವಾಘಾ – ಅಟ್ಟಾರಿ ಗಡಿಯ ಮೂಲಕ ಸರಕು ಸಾಗಾಟಕ್ಕೆ ಅನುಮತಿ ನೀಡಲಾಗಿದೆ.

ಪಾಕಿಸ್ತಾನದ ವಿದೇಶಾಂಗ ಸಚಿವಾಲಯದಿಂದ ಅಫ್ಘಾನಿಸ್ತಾನ ರಾಯಬಾರಿ ಕಚೇರಿಗೆ ಈ ಬಗ್ಗೆ ಪತ್ರ ಬರೆದಿದೆ. 150 ಅಫ್ಘಾನ್ ಟ್ರಕ್‍ ಗಳಿಗೆ ಪಾಕ್ ನ ವಾಘಾ ಗಡಿಯ ಮೂಲಕ ಭಾರತ ಪ್ರವೇಶಿಸಲು ಅನುಮತಿ ಸಿಕ್ಕಿದೆ.

ಕಾಶ್ಮೀರದ ಪಹಲ್ಗಾಮ್‍ ನಲ್ಲಿ ಉಗ್ರರ ದಾಳಿ ನಡೆದ ಬಳಿಕ ಭಾರತ ಹಾಗೂ ಪಾಕ್ ನಡುವೆ ಉದ್ವಿಗ್ನತೆ ತೀವ್ರಗೊಂಡಿತ್ತು. ಇದಾದ ಬಳಿಕ ವಾಘಾ ಗಡಿಯನ್ನು ಎರಡೂ ದೇಶಗಳು ಬಂದ್ ಮಾಡಿದ್ದವು. ಇದರಿಂದ ಭಾರತಕ್ಕೆ ಅಫ್ಘಾನಿಸ್ತಾನದಿಂದ ಬರುತ್ತಿದ್ದ ಸರಕುಗಳು ನಿಂತಿದ್ದವು. ಸರಕು ಸಾಗಾಟ ಮಾಡಲು ಅನುಮತಿ ನೀಡುವಂತೆ ಅಫ್ಘಾನಿಸ್ತಾನ ಪಾಕಿಸ್ತಾನಕ್ಕೆ ಮನವಿ ಮಾಡಿತ್ತು. ಈ ಮನವಿ ಮೇರೆಗೆ ಪಾಕ್ ಅನುಮತಿ ನೀಡಿದೆ ಎನ್ನಲಾಗಿದೆ.

ಏ.22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ 26 ಮಂದಿ ಕೊನೆಯುಸಿರೆಳೆದಿದ್ದರು.  

ನಾನು ಮಾಜಿ ಸಂಸದ ಡಿಕೆ ಸುರೇಶ್​ ಪತ್ನಿ ಎಂದು ಹೇಳಿದ್ದ ಮಹಿಳೆ ಅರೆಸ್ಟ್..​! ಫೋಟೋ ಎಡಿಟ್ ಮಾಡಲಾಗಿದೆ ಎಂದ ಡಿಕೆ ಸುರೇಶ್ ಪರ ವಕೀಲ..!

ಪಹಲ್ಗಾಮ್ ದಾಳಿ: ಕರ್ನಾಟಕದ ಕರಾವಳಿ ಸಮುದ್ರ ಮಾರ್ಗಗಳಲ್ಲಿ ಉಗ್ರರು ನುಸುಳುವ ಶಂಕೆ..! ಆಳ ಸಮುದ್ರದಲ್ಲಿ ಗಸ್ತು ಕಾರ್ಯಚರಣೆ..!

See also  ಈ ದೇವಸ್ಥಾನದಲ್ಲಿ ಮುಸ್ಲಿಮರಿಗೆ ಪ್ರವೇಶ ನಿಷೇಧ! ಹಿಂದೂಗಳಿಗೂ ಡ್ರೆಸ್ ಕೋಡ್ ಕಡ್ಡಾಯ!
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget