ಕ್ರೀಡೆ/ಸಿನಿಮಾಕ್ರೈಂ

ಮಹಿಳೆ ಮೇಲೆ ಅತ್ಯಾಚಾರ ಮಾಡಿ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್..!, 15 ಲಕ್ಷ ರೂ. ದೋಚಿದ ಸಿನಿಮಾ ನಟನ ಬಂಧನ, ಯಾರೀತ ನಟ..?

ನ್ಯೂಸ್ ನಾಟೌಟ್: ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ನಡೆಸಿ ಅದರ ವಿಡಿಯೋವನ್ನು ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿ ಹಣ ಹಾಗೂ ಚಿನ್ನಾಭರಣ ಸುಲಿಗೆ ಮಾಡಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಜ್ಯದ ಸಿನಿಮಾ ನಟನನ್ನು ಪೊಲೀಸರು ಬಂಧಿಸಿದ್ದಾರೆ. ನಟ ವೀರೇಂದ್ರ ಬಾಬುನನ್ನು ಕೊಡಿಗೇಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

‘ಆರೋಪಿ ವೀರೇಂದ್ರ ಬಾಬು, ‘ಸ್ವಯಂ ಕೃಷಿ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದ. ನಿರ್ಮಾಪಕನೂ ಆಗಿದ್ದ ಶೃಂಗೇರಿಯ ಮಹಿಳೆ ನೀಡಿದ್ದ ದೂರು ಆಧರಿಸಿ ಈತನನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು. ‘ದೂರುದಾರ ಮಹಿಳೆಗೆ 2021ರಲ್ಲಿ ಆರೋಪಿ ಪರಿಚಯವಾಗಿತ್ತು. ಮಹಿಳೆಯನ್ನು ಭೇಟಿಯಾಗಿದ್ದ ಆರೋಪಿ ಅತ್ಯಾಚಾರ ಎಸಗಿದ್ದ. ಆಗ ವಿಡಿಯೊ ಚಿತ್ರೀಕರಣ ಮಾಡಿಕೊಂಡಿದ್ದ.

ಕೆಲದಿನ ಬಿಟ್ಟು ಮಹಿಳೆಗೆ ವಿಡಿಯೊ ಕಳುಹಿಸಿ, ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡಿದ್ದ. ಹೆದರಿದ್ದ ಮಹಿಳೆ, ಹಂತ ಹಂತವಾಗಿ ₹ 15 ಲಕ್ಷ ನೀಡಿದ್ದರು. ಪೊಲೀಸರಿಗೆ ವಿಷಯ ತಿಳಿಸದಂತೆ ಬೆದರಿಕೆಯೊಡ್ಡಿದ್ದ’ ಎಂದು ತಿಳಿಸಿದರು

Related posts

ಸುಬ್ರಹ್ಮಣ್ಯ – ಗುಂಡ್ಯ: ನಿಯಂತ್ರಣ ತಪ್ಪಿ ಲಾರಿ ಪಲ್ಟಿ, ಚಾಲಕ ಸ್ಥಳದಲ್ಲೇ ಸಾವು

ಮಂಗಳೂರು: 90 ಲಕ್ಷ ಮೌಲ್ಯದ ಅಂಬರ್ ಗ್ರೀಸ್ ವಶಕ್ಕೆ, ಮೂವರು ಅರೆಸ್ಟ್! ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇರುವ ಏನಿದು ಸಮುದ್ರ ನಿಧಿ?

ಸಿಎಂ ಎಚ್ಚರಿಕೆಯ ಬಳಿಕವೂ ನಿಲ್ಲದ ಮೈಕ್ರೋಫೈನಾನ್ಸ್ ಸಂಸ್ಥೆಗಳ ಕಿರುಕುಳ..! ವಿಷದ ಮಾತ್ರೆ ಸೇವಿಸಿ ಮಹಿಳೆ ಆತ್ಮಹತ್ಯೆ..!