ಸುಳ್ಯ

ಮಜಾಭಾರತ ಖ್ಯಾತಿಯ ಜಗ್ಗಪ್ಪ-ಸುಶ್ಮಿತಾಗೆ ಡಿವೋರ್ಸ್? ಆ್ಯಂಕರ್ ಅನುಶ್ರೀ ಬಳಿ ಜಗ್ಗಪ್ಪ ಹೇಳಿದ್ದೇನು?

ನ್ಯೂಸ್ ನಾಟೌಟ್:ಮಜಾಭಾರತದಲ್ಲಿ ಜಗ್ಗಪ್ಪ ಹಾಗೂ ಸುಶ್ಮಿತಾ ಜೋಡಿ ಎಲ್ಲರನ್ನು ಮೋಡಿ ಮಾಡಿತ್ತು. ಬಳಿಕ ಇವರಿಬ್ಬರು ಮದುವೆಯಾದರು.ಇದೀಗ ಡಿವೋರ್ಸ್ ಆಗುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ನೇರವಾಗಿ ನಟ ಜಗ್ಗಪ್ಪ ಉತ್ತರ ಕೊಟ್ಟಿದ್ದಾರೆ. ಆ್ಯಂಕರ್‌ ಅನುಶ್ರೀ ಯೂಟ್ಯೂಬ್‌ ಚಾನೆಲ್‌ನಲ್ಲಿ ತಮ್ಮ ಹಾಗೂ ಪತ್ನಿ ಸುಶ್ಮಿತಾ ಅವರ ಸಂಬಂಧದ ಬಗ್ಗೆ ಮಾತನಾಡಿರುವ ಜಗ್ಗಪ್ಪ ಡಿವೋರ್ಸ್ ಎನ್ನುವ ಸುದ್ದಿಗೆ ಸವಿವರವಾದ ಸ್ಪಷ್ಟನೆ ನೀಡಿದ್ದಾರೆ.

‘ಇತ್ತೀಚಿನ ದಿನಗಳಲ್ಲಿ ಜಗ್ಗಪ್ಪ-ಸುಶ್ಮಿತಾ ಡಿವೋರ್ಸ್ ಆಗುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಖತ್‌ ಗಾಸಿಪ್‌ ಹರಿದಾಡುತ್ತಿದೆ.ಆದರೆ ಈ ಬಗ್ಗೆ ನಾನು ಸ್ಪಷ್ಟನೆ ಕೊಡುತ್ತೇನೆ..ನಾವು ತುಂಬಾ ಚೆನ್ನಾಗಿದ್ದೇವೆ. ಬ್ಯಾಚುಲರ್‌ ಜೀವನ ತುಂಬಾ ಕಷ್ಟವಾಗಿತ್ತು.ಅಂತದರಲ್ಲಿ ಅವಳು ಈಗ ನನ್ನನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾಳೆ’ ಎಂದು ಜಗ್ಗಪ್ಪ ಹೇಳಿದ್ದಾರೆ.

‘ಅವಳ ಮನೆಯಲ್ಲಿ ಅವಳು ಕೆಲಸ ಮಾಡುತ್ತಿರಲಿಲ್ಲ. ಆದರೆ ಈಗ ಬೆಳಗ್ಗೆ ನಾಲ್ಕು ಗಂಟೆಗೆ ಏಳುತ್ತಾಳೆ. ನಮಗೆಲ್ಲಾ ತಿಂಡಿ ರೆಡಿ ಮಾಡಿ, ಅವಳಿಗೆ ಆರು ಗಂಟೆಗೆ ಶೂಟಿಂಗ್‌ ಇದ್ದರೆ ಹೋಗುತ್ತಾಳೆ. ಮತ್ತೆ ಮನೆಗೆ ಬಂದು ಎಲ್ಲಾ ಕೆಲಸ ಮಾಡುತ್ತಾಳೆ. ನಾವಿಬ್ಬರು ತುಂಬಾ ಚೆನ್ನಾಗಿದ್ದೇವೆ. ತುಂಬಾ ಅನ್ಯೋನ್ಯವಾಗಿದ್ದೇವೆ’ ಎಂದಿದ್ದಾರೆ.’ನಮ್ಮ ಮೇಲೆ ಯಾರ ಕಣ್ಣು ಬೀಳುವುದು ಬೇಡ. ದಯವಿಟ್ಟು ನಮ್ಮಿಬ್ಬರನ್ನು ದೂರ ಮಾಡಬೇಡಿ. ಸುಶ್ಮಿತಾ ನನ್ನ ಎರಡನೇ ತಾಯಿ. ಅವಳು ಅಂದರೆ ನನಗೆ ತುಂಬಾ ಇಷ್ಟ. ಯಾಕೆಂದರೆ ನಾನು ನನ್ನ ಅಜ್ಜಿ ಮನೆಯಲ್ಲಿ ಬೆಳೆದಿದ್ದು, ನನಗೆ ತಾಯಿ ಪ್ರೀತಿನು ಸರಿಯಾಗಿ ಸಿಗಲಿಲ್ಲ. ಆಮೇಲೆ ಹಾಸ್ಟೆಲ್‌ ಜೀವನ ಹೀಗಾಗಿ ಜಾಸ್ತಿ ಅಪ್ಪ ಅಮ್ಮನ ಪ್ರೀತಿ ಸಿಗಲಿಲ್ಲ. ಆಮೇಲೆ ಕೆಲಸ ಅಂತಾ ಹೊರಗಡೆ ಬಂದೆ. ಈ ಜಂಜಾಟದಲ್ಲಿ ನಮಗೆ ತಾಯಿ ಪ್ರೀತಿ-ತಂದೆ ಪ್ರೀತಿ ನಮಗೆ ಸಿಕ್ಕೇ ಇಲ್ಲ. ಅದಾದ ಮೇಲೆ ಅತಿ ಹೆಚ್ಚು ಪ್ರೀತಿ ಕೊಟ್ಟಿದ್ದು ನನ್ನ ಪತ್ನಿ ಸುಶ್ಮಿತಾ’ ಎಂದು ನಟ ಜಗ್ಗಪ್ಪ ಭಾವುಕರಾಗಿದ್ದಾರೆ.

Related posts

ಭಕ್ತರ ಪಾಲಿನ ಭಾಗೀರಥಿ ಶ್ರೀ ಕ್ಷೇತ್ರ ಪೆರುವಾಜೆಯ ಜಲದುರ್ಗಾದೇವಿ,ಜನವರಿ 16 ರಿಂದ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವಾರ್ಷಿಕ ಜಾತ್ರೆ ಹಾಗೂ ರಥ ಸಮರ್ಪಣೆ

ಸುಳ್ಯ:ಅಡ್ಡ ಬಂದ ನಾಯಿ ,ಅಪಘಾತಕ್ಕೀಡಾದ ಬೈಕ್:ಸವಾರ ಗಂಭೀರ

ವಿಟ್ಲ:ನಿಯಂತ್ರಣ ಕಳೆದುಕೊಂಡು ರಿಕ್ಷಾ ಪಲ್ಟಿ,ಪಂಜದ ಆಟೋ ಚಾಲಕ ಸ್ಥಳದಲ್ಲೇ ಸಾವು