ಕರಾವಳಿ

ನೆಲ್ಯಾಡಿ: ಕೆಎಸ್‌ಆರ್‌ಟಿಸಿ ಬಸ್ಸ್ ಮತ್ತು ಟೆಂಪೋ ಟ್ರಾವೆಲರ್ ಡಿಕ್ಕಿ,ಪ್ರಯಾಣಿಕನ ಕೈಗೆ ಗಾಯ

ನ್ಯೂಸ್ ನಾಟೌಟ್ : ಕೆಎಸ್‌ಆರ್‌ಟಿಸಿ ಬಸ್ಸ್ ಮತ್ತು ಟೆಂಪೋ ಟ್ರಾವೆಲರ್ ಡಿಕ್ಕಿಯಾಗಿರುವ ಘಟನೆ ಶಿರಾಡಿ ಗ್ರಾಮದ ಉದನೆ ಸಮೀಪ ನಡೆದಿದೆ. ಪರಿಣಾಮ ಬಸ್ಸಿನ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಪ್ರಯಾಣಿಕರೋರ್ವರು ಗಾಯಗೊಂಡಿರುವ ಘಟನೆ ಎ.18ರಂದು ಸಂಜೆ ವರದಿಯಾಗಿದೆ. ಹಾಸನ ತಾಲೂಕಿನ ಭುವನಹಳ್ಳಿ ನಿವಾಸಿ ಕೀರ್ತಿಕುಮಾರ್ ಕೆ.ಪಿ.(42ವ.)ಗಾಯಗೊಂಡ ವ್ಯಕ್ತಿ ಎಂದು ತಿಳಿದು ಬಂದಿದೆ.

ಕೀರ್ತಿಕುಮಾರ್ ಎ.18ರಂದು ರಜೆ ನಿಮಿತ್ತ ತಮ್ಮ ಊರಿನ ಹಾಸನಕ್ಕೆ ಹೊರಟಿದ್ದರು.ಮಂಗಳೂರಿನಿಂದ ಹಾಸನ ಮಾರ್ಗವಾಗಿ ಬೆಂಗಳೂರಿಗೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸಿನ ಹಿಂಬದಿ ಕೊನೆಯ ಸೀಟಿನ ಬಲ ಬದಿ ಕಿಟಿಕಿ ಬಳಿ ಕುಳಿತು ಪ್ರಯಾಣಿಸುತ್ತಿದ್ದರು. ಬಸ್ಸು ಶಿರಾಡಿ ಗ್ರಾಮದ ಉದನೆ ಸಮೀಪ ತಲುಪುತ್ತಿದ್ದಂತೆ ಹಾಸನ ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಟೆಂಪೋ ಟ್ರಾವೆಲರ್ ಬಸ್ಸಿಗೆ ಡಿಕ್ಕಿ ಹೊಡೆದಿದೆ.ಈ ವೇಳೆ ಬಸ್ಸಿನ ಹಿಂಬದಿ ಸೀಟಿನ ಬಲ ಬದಿ ಕಿಟಿಕಿ ಬಳಿ ಕುಳಿತಿದ್ದ ಕೀರ್ತಿಕುಮಾರ್‌ರವರ ಬಲ ಕೈಗೆ ಗಾಯವಾಗಿದೆ.ಟ್ರಾವೆಲರ್ ಚಾಲಕನ ವೇಗದ ಚಾಲನೆಯೇ ಘಟನೆಗೆ ಕಾರಣವೆಂದು ಮೇಲ್ನೋಟಕ್ಕೆ ಅಂದಾಜಿಸಲಾಗಿದೆ. ಅವರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

Related posts

ಪುತ್ತೂರು: ತಡರಾತ್ರಿ ಕಲ್ಲೇಗ ಟೈಗರ್ಸ್ ಹುಲಿ ಕುಣಿತ ತಂಡದ ನಾಯಕನ ಕೊಚ್ಚಿ ಕೊಲೆ..! ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು

ಸುಳ್ಯ: ಕೆ.ವಿ.ಜಿ. ಕ್ರೀಡಾಂಗಣದಲ್ಲಿ ಮೈಸೂರು ವಲಯದ ಅಂತರ್‌ಕಾಲೇಜು ವಾಲಿಬಾಲ್‌ ಟೂರ್ನಮೆಂಟ್‌

ಗುತ್ತಿಗಾರು : ಎಟಿಪಿಸಿ ಟ್ರಸ್ಟ್ ವತಿಯಿಂದ ಬೃಹತ್ ರಕ್ತದಾನ ಶಿಬಿರ –ಸನ್ಮಾನ , ಗೌರವ ಸಮರ್ಪಣಾ ಸಮಾರಂಭ