ಕರಾವಳಿಶಿಕ್ಷಣ

ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಉಪನ್ಯಾಸ ಕಾರ್ಯಕ್ರಮಕ್ಕೆ ABVP ನೇತೃತ್ವದಲ್ಲಿ ಸಂಘ ಪರಿವಾರದಿಂದ ತೀವ್ರ ವಿರೋಧ, ಪ್ರೊಫೆಸರ್ ಡಾ ಶಂಸುಲ್ ಇಸ್ಲಾಂ ಕಾರಿಗೆ ಮುತ್ತಿಗೆ ಹಾಕಿ ಆಕ್ರೋಶ, ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ಘರ್ಷಣೆ

ನ್ಯೂಸ್ ನಾಟೌಟ್ : ಮಂಗಳೂರು ವಿಶ್ವ ವಿದ್ಯಾನಿಲಯ ಕಾಲೇಜಿನಲ್ಲಿ (Mangalore University College) ಹೈಡ್ರಾಮಾವೊಂದಕ್ಕೆ ಸಾಕ್ಷಿಯಾಗಿದೆ. ಬಿ.ವಿ ಕಕ್ಕಿಲ್ಲಾಯ ಪ್ರತಿಷ್ಠಾನದಿಂದ ಆಯೋಜನೆಗೊಂಡಿರುವ ಉಪಾನ್ಯಾಸ ಕಾರ್ಯಕ್ರಮ ಭಾರಿ ಆಕ್ಷೇಪಕ್ಕೆ ಕಾರಣವಾಗಿದ್ದು ಎಬಿವಿಪಿ ನೇತೃತ್ವದಲ್ಲಿ ಸಂಘ ಪರಿವಾರ ತೀವ್ರ ವಿರೋಧ ವ್ಯಕ್ತಪಡಿಸಿದ ಘಟನೆ ನಡೆದಿದೆ.

ದೆಹಲಿ ವಿಶ್ವವಿದ್ಯಾನಿಲಯದ ನಿವೃತ್ತ ಪ್ರೊಫೆಸರ್ ಡಾ ಶಂಸುಲ್ ಇಸ್ಲಾಂ (Dr Shamsul Islam) ಅವರು ಮೊದಲ ಸ್ವಾತಂತ್ರ್ಯ ಸಂಗ್ರಾಮ 1857 – ಜಂಟಿ ಬಲಿದಾನಗಳು , ಜಂಟಿ ವಾರಿಸುದಾರಿಕೆ ಕುರಿತು ಉಪನ್ಯಾಸ ಮಾಡುವ ಕಾರ್ಯಕ್ರಮಕ್ಕೆ ಎಬಿವಿಪಿ ನೇತೃತ್ವದಲ್ಲಿ (ABVP Protest) ಸಂಘ ಪರಿವಾರ ವಿರೋಧ ವ್ಯಕ್ತಪಡಿಸಿದೆ.

ಶನಿವಾರ (ಸೆಪ್ಟೆಂಬರ್‌ 9)ರಂದು ನಡೆಯುತ್ತಿರುವ ಈ ಕಾಯಕ್ರಮವು ವಿವಾದಾತ್ಮಕ ವ್ಯಕ್ತಿಗಳನ್ನು ಕಾರ್ಯಕ್ರಮಕ್ಕೆ ಕರೆಸಿ ಕಾಲೇಜಿನಲ್ಲಿ ಸಂಘರ್ಷ ವಾತಾವರಣ ಸೃಷ್ಟಿಗೆ ಸಂಚು ಎಂದು ಎಬಿವಿಪಿ ಆರೋಪಿಸಿದೆ. ಡಾ. ಶಂಸುಲ್‌ ಇಸ್ಲಾಂ ಅವರು ಆರೆಸ್ಸೆಸ್‌ ಮತ್ತು ಸಂಘ ಪರಿವಾರದ ತೀವ್ರ ವಿರೋಧಿಯಾಗಿದ್ದಾರೆ. ಜತೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನೂ ವಿರೋಧಿಸುತ್ತಾರೆ ಹೀಗಾಗಿ ಕಾರ್ಯಕ್ರಮ‌ ನಡೆಯದಂತೆ ತಡೆಯಲು ಎಬಿವಿಪಿ ಯೋಜನೆ ಮಾಡಿತ್ತು. ಡಾ. ಶಂಸುಲ್ ಆಗಮಿಸುತ್ತಿದ್ದಂತೆಯೇ ಎಬಿವಿಪಿ ಕಾರ್ಯಕರ್ತರು ಅವರ ಕಾರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದರು. ಶಂಸುಲ್ ಗೋಬ್ಯಾಕ್ ಎಂಬ ಘೋಷಣೆಗಳು ಮೊಳಗಿದವು. ಈ ವೇಳೆ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ಘರ್ಷಣೆ ನಡೆಯಿತು.

ಹೊರಗಡೆ ಎಬಿವಿಪಿ ಪ್ರತಿಭಟನೆ ನಡೆಸುತ್ತಿರುವಂತೆಯೇ ಒಳಗೆ ಕಾರ್ಯಕ್ರಮ ಆರಂಭಗೊಂಡಿದೆ. ಕಾರ್ಯಕ್ರಮ ಉದ್ಘಾಟನೆಗೆ ಮೊದಲು ಬಲಿದಾನಗೈದ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಗೀತೆ ಹಾಡಿದ ಡಾ. ಶಂಸುಲ್ ಇಸ್ಲಾಂ ಅವರು, ಬಲಿದಾನ ಗೈದ ಸ್ವಾತಂತ್ರ್ಯ ಹೋರಾಟಗಾರಿಗೆ ಗೌರವ ಸಮರ್ಪಿಸುವ ಕಾರ್ಯಕ್ರಮವಿದು. ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸುವವರು ಸ್ವಾತಂತ್ರ್ಯ ಹೋರಾಟಗಾರರಿಗೆ ಅಪಮಾನ ಮಾಡಿದ್ದಾರೆ. ಅರ್ ಎಸ್ ಎಸ್ ಎಂದಿಗೂ ಬ್ರಿಟಿಷರ ಪರವಾಗಿ ಇದ್ದವರು ಇಂದಿಗೂ ಅದನ್ನೇ ಮಾಡುತ್ತಿದ್ದಾರೆ. ಸ್ವಾತಂತ್ರ್ಯ ಸಂಗ್ರಾಮ, ಸ್ವಾತಂತ್ರ್ಯ ಹೋರಾಟಗಾರರ ಬಲಿದಾನ ನೆನಪಿಸುವ ಕಾರ್ಯಕ್ರಮ ವಿರೋಧಿಗಳು ರಾಷ್ಟ್ರ ವಿರೋಧಿಗಳು ಎಂದು ಹೇಳಿದರು.

ಎಬಿವಿಪಿ ಸಂಘಟನೆ ಅರ್ ಎಸ್ ಎಸ್ ನ‌ ಒಂದು ಭಾಗ. ಮಹಾತ್ಮಾ ಗಾಂಧಿ ಅವರನ್ನು ಕೊಂದದ್ದು ಯಾರು? ಮಹಾತ್ಮಾ ಗಾಂಧಿ ನಿಜವಾದ ಸನಾತನಿಯಾಗಿದ್ದರು. ಅವರನ್ನು ಕೊಂದದ್ದು ಯಾರು ಇವರೆ. ಗಾಂಧಿ ಅವರನ್ನು ಕೊಂದಿದ್ದ ಗೋಡ್ಸೆ ಯನ್ನು ಈ ಆರ್ ಎಸ್ ಎಸ್ ನವರು ಕೃಷ್ಣ ‌ನಿಗೆ ಹೋಲಿಸಿದ್ದರು. ಅದರ ಬಗ್ಗೆ ನನ್ನಲ್ಲಿ ದಾಖಲೆಗಳಿವೆ ಎಂದು ಚಿಂತಕ ಡಾ ಶಂಸುಲ್ ಇಸ್ಲಾಂ ಹೇಳಿದರು. ಈ ಹಿಂದೆ ಇದೇ ಕಾಲೇಜಿನಲ್ಲಿ ಹಿಂದೂ ಜಾಗರಣ ವೇದಿಕೆ ಮುಖಂಡ ಶ್ರೀಕಾಂತ ಶೆಟ್ಟಿ ಅವರ ಭಾಷಣ ಆಯೋಜಿಸಿದಾಗ ಕಾಂಗ್ರೆಸ್‌ ನೇತೃತ್ವದಲ್ಲಿ ಪ್ರತಿಭಟನೆ ನಡೆದಿತ್ತು. ಅಂದು ಆ ದಿನ ಕಾರ್ಯಕ್ರಮ ರದ್ದುಪಡಿಸಿದ್ದರೂ ಮತ್ತೊಂದು ದಿನ ಆಯೋಜಿಸಲಾಗಿತ್ತು.

Related posts

ಸುಳ್ಯ : ಗೃಹ ಲಕ್ಷ್ಮೀ ಯೋಜನೆ ಕೇಂದ್ರಗಳಿಗೆ ತಹಶೀಲ್ದಾರ್ ಮಂಜುನಾಥ್ ಭೇಟಿ

ಪ್ರವೀಣ್ ನೆಟ್ಟಾರ್ ಹತ್ಯೆ ಆರೋಪಿ ಪಡೆದ ಮತಗಳೆಷ್ಟು ಗೊತ್ತಾ..?

ಪೆಟ್ರೋಲ್‌ ಡೀಸೆಲ್‌ ದರ ಏರಿಕೆಯ ಬಗ್ಗೆ ಸ್ಪಷ್ಟನೆ ನೀಡಿದ ಸಿಎಂ..! ಸಿದ್ದರಾಮಯ್ಯ ತೈಲ ದರ ಏರಿಕೆಗೆ ನೀಡಿದ ಕಾರಣಗಳೇನು..?