ಕರಾವಳಿಕೊಡಗು

ಕೊಡಗು: ಗಾಳಿ-ಮಳೆಗೆ ಧರೆಗುರುಳಿದ ಮರಗಳು! ನಾಪೋಕ್ಲು- ಭಾಗಮಂಡಲ ರಸ್ತೆ ಸ್ಥಗಿತಗೊಳ್ಳುವ ಭೀತಿ!

237

ನ್ಯೂಸ್‌ ನಾಟೌಟ್‌: ಕೊಡಗು ಜಿಲ್ಲೆಯಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಸುಂಟಿಕೊಪ್ಪದಲ್ಲಿ ಮರಗಳು ಗಾಳಿಗೆ ಧರೆಗುರುಳಿದ್ದು, ಭಾಗಮಂಡಲದಲ್ಲಿ ನೀರಿನ ಹರಿವು ಹೆಚ್ಚಾಗಿದೆ. ನಾಪೋಕ್ಲು- ಭಾಗಮಂಡಲ ರಸ್ತೆಗೆ ನೀರು ಬಂದಿದ್ದು, ಸಂಚಾರ ಸ್ಥಗಿತಗೊಳ್ಳುವ ಭೀತಿ ಉಂಟಾಗಿದೆ.

ಕಲ್ಮಂಟಿ ಜಂಕ್ಷನ್ ನ ಕಾರೆಕಾಡ್- ಗರ್ವಾಲೆ ರಸ್ತೆಯಲ್ಲಿ ಹಾಗೂ ಸುಂಟಿಕೊಪ್ಪ- ಮಾದಾಪುರ ರಸ್ತೆಯ ಪನ್ಯ ಗ್ರಾಮದ ಸಮೀಪ ರಸ್ತೆಗೆ ಮರ ಹಾಗೂ ವಿದ್ಯುತ್ ಕಂಬಗಳು ಉರುಳಿ ಸಂಚಾರ ಸ್ಥಗಿತಗೊಂಡಿದೆ.

ಮಡಿಕೇರಿ ತಾಲ್ಲೂಕು ನಾಪೋಕ್ಲು ಹೋಬಳಿ ವ್ಯಾಪ್ತಿಯಲ್ಲಿ ಹೆಚ್ಚಿನ ಮಳೆಯಾಗುತ್ತಿದ್ದು, ನಾಪೋಕ್ಲು ಸಮೀಪದ ಚೆರಿಯಾಪರಂಬುವಿನ ಕಾವೇರಿ ಹೊಳೆಯ ವ್ಯಾಪ್ತಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿ ರಸ್ತೆಯ ಮೇಲೆ ಒಂದರಿಂದ ಒಂದೂವರೆ ಅಡಿ ನೀರು ನಿಂತಿದೆ. ಕುಂಜಿಲ ಗ್ರಾಮದ ಮಕ್ಕಿ ಉಮ್ಮರ್ ಎಂಬುವವರ ಮನೆಯ ಚಾವಣಿಯ ಶೀಟ್ ಗಳು ಹಾರಿ ಹೋಗಿವೆ ಎಂದು ವರದಿ ತಿಳಿಸಿದೆ.

See also  ಮಂಗಳೂರು: ಕುಕ್ಕರ್ ಬಾಂಬ್ ಸ್ಫೋಟದ ಮಾಸ್ಟರ್ ಮೈಂಡ್ ಉಗ್ರನ ಬಂಧನ..! ಕೀನ್ಯಾದಿಂದ ಬಂದವ ವಿಮಾನ ನಿಲ್ದಾಣದಲ್ಲಿ NIA ಬಲೆಗೆ..!
  Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget