ಕರಾವಳಿ

ಇಂದು (ಜು.೧೭) ಹಾಗೂ ನಾಳೆ (ಜು.೧೮) ಉಚಿತ ಅಭಾ ಕಾರ್ಡ್ ನೋಂದಣಿ ಶಿಬಿರ

ನ್ಯೂಸ್ ನಾಟೌಟ್: ಗ್ರಾಮ ಒನ್ ಸಂಪಾಜೆ ಸಹಯೋಗದಲ್ಲಿ ಸಂಪಾಜೆ ಗ್ರಾಮ ಪಂಚಾಯತ್  ಪ್ರಾಯೋಜಕತ್ವದಲ್ಲಿ ಉಚಿತ ಅಭಾ ಕಾರ್ಡ್ ನೋಂದಣಿ ಶಿಬಿರ ಇಂದು (ಶನಿವಾರ) ಮತ್ತು ನಾಳೆ (ಭಾನುವಾರ ಸೆ.೧೮) ನಡೆಯಲಿದೆ. ಬೆಳಗ್ಗೆ ೯.೩೦ರಿಂದ ಸಂಜೆ ೫ ಗಂಟೆ ತನಕ ಕಲ್ಲುಗುಂಡಿಯ ಸ್ಪಾಟ್ ಕಂಪ್ಯೂಟರ್ ಬಳಿ ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ.

ಬಿಪಿಎಲ್ ಕಾರ್ಡ್ ದಾರರಿಗೆ, ಐದು ಲಕ್ಷದವರೆಗಿನ ಉಚಿತ ಚಿಕಿತ್ಸೆ, ಎಪಿಎಲ್ ಕಾರ್ಡ್ ದಾರರಿಗೆ ಚಿಕಿತ್ಸಾ ವೆಚ್ಚದಲ್ಲಿ ಶೇ.೩೦ರಷ್ಟು ರಿಯಾಯಿತಿ ದೊರೆಯಲಿದೆ. ಹೀಗಾಗಿ ಆಧಾರ್ ಕಾರ್ಡ್ ಪ್ರತಿ, ಆಧಾರ್ ಕಾರ್ಡ್ ಗೆ ಜೋಡಣೆಯಾಗಿರುವ ನಂಬರಿನ ಸಂಖ್ಯೆ, ರೇಶನ್ ಕಾರ್ಡ್ ತೆಗೆದುಕೊಂಡು ಬಂದರೆ ನೋಂದಣಿ ಮಾಡಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Related posts

ನಾಲ್ಕನೇ ಮಹಡಿಯಲ್ಲಿ ಸಿಲುಕಿದ್ದ ಬೆಕ್ಕಿನ ಪ್ರಾಣ ರಕ್ಷಿಸಿದ ಕುಡ್ಲದ ಲೇಡಿ ಬಾಂಡ್

ಸಾಮಾಜಿಕ ಜಾಲತಾಣದಲ್ಲಿ ಖ್ಯಾತ ವಕೀಲರ ಮಾನಹಾನಿ:ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ 8 ಮಂದಿ ವಿರುದ್ಧ ದೂರು ದಾಖಲು

‘ತುಂಬಾ ದಿನಗಳ ನಂತರ ಕೊರಗಜ್ಜನ ಕ್ಷೇತ್ರಕ್ಕೆ ಹೋಗಿದ್ದೆ’,2ನೇ ಮದುವೆ ಕುರಿತು ವೈರಲ್ ಸುದ್ದಿಗೆ ಸ್ಪಷ್ಟನೆ ನೀಡಿದ ನಟಿ ಪ್ರೇಮಾ