ಕರಾವಳಿಕ್ರೈಂ

ಅಡಿಕೆ ಕೀಳುತ್ತಿದ್ದಾಗ ವಿದ್ಯುತ್‌ ತಂತಿಗೆ ಕಾರ್ಬನ್‌ ದೋಟಿ ತಗುಲಿ ಯುವಕ ಸಾವು

ನ್ಯೂಸ್‌ ನಾಟೌಟ್‌: ಕಾರ್ಬನ್‌ ದೋಟಿಯಲ್ಲಿ ಅಡಿಕೆ ಕೊಯ್ಯುತ್ತಿದ್ದಾಗ ದೋಟಿ ವಿದ್ಯುತ್‌ ತಂತಿಗೆ ತಗುಲಿ ಯುವಕನೋರ್ವ ಮೃತಪಟ್ಟ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಲಾಯಿಬೆಟ್ಟು ಎಂಬಲ್ಲಿ ಶುಕ್ರವಾರ ಸಂಭವಿಸಿದೆ

ಮೃತ ಯುವಕನನ್ನು ಬೋಳಿಯಾರು ಗ್ರಾಮದ ನಿವಾಸಿ ಇಬ್ರಾಹಿಂ ಎಂಬವರ ಪುತ್ರ ಶಾಫಿ (28) ಎಂದು ಗುರುತಿಸಲಾಗಿದೆ. ಈತ ಸಜೀಪ ಮುನ್ನೂರು ಗ್ರಾಮದ ಮೂಸಬ್ಬ ಎಂಬವರ ತೋಟದಲ್ಲಿ ಅಡಿಕೆ ಕೀಳುವ ವೇಳೆ ಈ ದುರ್ಘಟನೆ ನಡೆದಿದೆ. ಶಾಫಿ ಕಳೆದ ಅನೇಕ ವರ್ಷಗಳಿಂದ ಅಡಿಕೆ ವ್ಯವಹಾರ ನಡೆಸುತ್ತಿದ್ದರು ಎನ್ನಲಾಗಿದೆ. ವರ್ಷಂಪ್ರತಿ ಅಡಿಕೆಯನ್ನು ಗಿಡದಿಂದಲೇ ಕ್ರಯಕ್ಕೆ ಪಡೆದು ಅ ಬಳಿಕ ಅಡಿಕೆ ಕೀಳುವುದನ್ನು ಇವರು ಮಾಡುತ್ತಿದ್ದರು. ಈ ವರ್ಷ ಅಡಿಕೆ ಕೀಳಲು ಸಾವಿರಾರು ರೂ. ನೀಡಿ ಹೊಸ ಪೈಬರ್ ಸಲಕೆ ಖರೀದಿ ಮಾಡಿದ್ದರು. ಇಂದು ಅದೇ ಹೊಸ ಸಲಕೆಯಲ್ಲಿ ಮಲಾಯಿಬೆಟ್ಟುವಿನ ತೋಟದಲ್ಲಿ ಅಡಿಕೆ ಕೀಳುವ ವೇಳೆ ಶಾಫಿ ಅವರ ಕೈಯಿಂದ ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಹಾದು ಹೋಗಿರುವ ಎಲ್.ಟಿ. ತಂತಿಗೆ ತಾಗಿದೆ. ಪೈಬರ್‌ ಸಲಕೆಯಲ್ಲಿ ಅಡಿಕೆ ಕೀಳಲು ಅಳವಡಿಸಿದ ಕಬ್ಬಿಣದ ಕತ್ತಿಯ ಮೂಲಕ ವಿದ್ಯುತ್ ಪ್ರವಹಿಸಿ ಶಾಫಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಸಜೀಪಮುನ್ನೂರು ಗ್ರಾಮಕರಣಿಕೆ ಸ್ವಾತಿ, ಮೆಸ್ಕಾಂನ ಅಧಿಕಾರಿಗಳು ಹಾಗೂ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related posts

ಒಂದು ವರ್ಷದ ಮಗು ಆ ವ್ಯಕ್ತಿಯ ಕೈಯಿಂದ ಬಿದ್ದದ್ದೇಗೆ..! ರಾತ್ರಿ ಎಸ್ಕಲೇಟರ್ ಹತ್ತುವಾಗ ನಡೆಯಿತಾ ಅನಾಹುತ..?

ರಾಜ್ಯ ಮಟ್ಟದ ಯೋಗ: ಗಮನ ಸೆಳೆದ ಅಮರ ಯೋಗ ಗುತ್ತಿಗಾರು ಕೇಂದ್ರದ ವಿದ್ಯಾರ್ಥಿಗಳು

ರೈಫಲ್ ಹಿಡಿದು ಬಂದ ಉಗ್ರರನ್ನು ‘ಬೊಗ್ರನಂತೆ’ ಓಡಿಸಿದ ಇಸ್ರೇಲಿ ಅಜ್ಜಿ..! ಕತ್ತಿ, ಆಯುಧ ಹಿಡಿಯದೆ ಬಿಸ್ಕೆಟ್, ಕೋಕ್ ನಿಂದಲೇ ಅಜ್ಜಿ ಪರಾಕ್ರಮ ತೋರಿಸಿದ್ದು ಹೇಗೆ..?