ಕರಾವಳಿ

ಹಾಡ ಹಗಲೇ ಕಾಲೇಜು ಆವರಣದಲ್ಲಿ ವಿದ್ಯಾರ್ಥಿನಿಗೆ ಚಾಕುವಿನಿಂದ ಇರಿದ ಪ್ರಿಯಕರ..!

ನ್ಯೂಸ್ ನಾಟೌಟ್ : ಹಾಡ ಹಗಲೇ ಕಾಲೇಜು ಆವರಣದಲ್ಲಿ ವಿದ್ಯಾರ್ಥಿನಿಯನ್ನು ಚಾಕುವಿನಿಂದ ಇರಿದು ಗೆಳೆಯ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಕೋಲಾರ ಮೂಲದ ಮುಳಬಾಗಿಲು ಮೂಲದ ಪವನ್ ಕಲ್ಯಾಣ್‌ ಎಂಬಾತ ತನ್ನ ಊರಿನವಳಾದ ಲಯಸ್ಮಿತಾಗೆ ಚಾಕುವಿನಿಂದ ಚುಚ್ಚಿ ಭೀಕರವಾಗಿ ಹತ್ಯೆಗೈದಿದ್ದಾನೆ. ಜತೆಗೆ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇಬ್ಬರ ನಡುವಿನ ಜಗಳ ಏನಿತ್ತು ಗೊತ್ತಿಲ್ಲ. ಮೂಲಗಳ ಪ್ರಕಾರ ಪ್ರೀತಿಯ ವಿಚಾರ ಇರಬಹುದು ಎಂದು ಶಂಕಿಸಲಾಗಿದೆ.

ಪವನ್ ಬೆಂಗಳೂರಿನ ನೃಪ ತುಂಗಾ ವಿಶ್ವವಿದ್ಯಾಲಯದ ಮೊದಲ ಬಿಸಿಎ ವಿದ್ಯಾರ್ಥಿ. ಲಯಸ್ಮಿತಾ ಯಲಹಂಕ ತಾಲೂಕಿನ ರಾಜನಕುಂಟೆಯಲ್ಲಿರುವ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಬಿಟೆಕ್ ವ್ಯಾಸಂಗ ಮಾಡುತ್ತಿದ್ದಳು. ಆಕೆಗೆ ಚಾಕು ಇರಿದ ಬಳಿಕ ಪವನ್ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕಾಲೇಜಿನ ಭದ್ರತಾ ವ್ಯವಸ್ಥೆಯನ್ನು ಭೇದಿಸಿ ಆತ ಒಳಕ್ಕೆ ನುಗ್ಗಿ ಇಂತಹ ಕೃತ್ಯ ಎಸಗಿದ್ದಾನೆ. ತನ್ನ ಬ್ಯಾಗ್‌ನಲ್ಲೇ ಚಾಕು ಇಟ್ಟುಕೊಂಡು ಬಂದು ಇಂತಹದ್ದೊಂದು ಕೃತ್ಯಕ್ಕೆ ಕೈ ಹಾಕಿದ್ದಾನೆ.

Related posts

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಭೇದಿಸಿದ್ದ ಖಡಕ್ ಆಫೀಸರ್ ಗೆ ವರ್ಗಾವಣೆ! , ಅಷ್ಟಕ್ಕೂ ಎಡಿಜಿಪಿ ವರ್ಗಾವಣೆಯಾಗಿದ್ದೇಕೆ?

ಬಸ್‌ ನಿಲ್ಲಿಸದ್ದಕ್ಕೆ ಬಸ್ ಗಾಜನ್ನೇ ಪುಡಿ ಮಾಡಿದ ಕಿಡಿಗೇಡಿ

ಪುತ್ತೂರು: SSLC ಮುಗಿಸಿ PUC ಓದುವ ಕನಸು ಕಾಣುತ್ತಿದ್ದ ವಿದ್ಯಾರ್ಥಿನಿ ಹಠಾತ್ ಸಾವು